Advertisement

ಬಿಜೆಪಿ ಯೋಜನೆಗಳೇ ಮಾಯ

01:18 PM Jan 21, 2021 | Team Udayavani |

ಕೊರಟಗೆರೆ: ಬಿಜೆಪಿ ಸರಕಾರದ ಯೋಜನೆಗಳೇ ಮಾಯವಾಗಿವೆ. ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆ ಆಗಿದ್ದ ಅನುದಾನ ಹಿಂದಕ್ಕೆ ಪಡೆದಿದ್ದೀರಾ? ಕೋವಿಡ್ ನಿರ್ವಹಣೆಯ ಹಣಕಾಸಿನ ಅಂಕಿ-ಅಂಶ ಜನರಿಗೆ ನೀಡದಿರಲು ಕಾರಣವೇನು? ಮುಖ್ಯಮಂತ್ರಿಗಳೇ ರಾಜ್ಯ ಸರಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ತಕ್ಷಣ ಶ್ವೇತಪತ್ರ ಹೊರಡಿಸಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಆಗ್ರಹಿಸಿದರು.

Advertisement

ಕೊರಟಗೆರೆ ಕ್ಷೇತ್ರದ ಚನ್ನರಾಯನದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ, ಬುಕ್ಕಾಪಟ್ಟಣ, ಕುರಂಕೋಟೆ, ತೋವಿನಕೆರೆ, ಸಿದ್ದರಬೆಟ್ಟ ಗ್ರಾಪಂ ವ್ಯಾಪ್ತಿಯ 24 ಗ್ರಾಮಗಳಲ್ಲಿ PWD ಇಲಾಖೆಯ 3 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೇರವೇರಿಸಿದ ವೇಳೆ ಮಾತನಾಡಿದರು.

ನಮ್ಮ ರಾಜ್ಯದಿಂದ ಕೇಂದ್ರ ಸರಕಾರಕ್ಕೆ 1.50 ಲಕ್ಷ ಕೋಟಿ ತೆರಿಗೆ ಪಾವತಿ ಆಗಲಿದೆ. ನಮ್ಮ ರಾಜ್ಯಕ್ಕೆ 30 ಸಾವಿರ ಕೋಟಿ ಹಿಂದಕ್ಕೆ ನೀಡಬೇಕಾಗಿದೆ. 5,600 ಕೋಟಿ ಮತ್ತು 864ಕೋಟಿ ಮಾತ್ರ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರಕಾರ ನ್ಯಾಯಬದ್ಧವಾಗಿ ನಮ್ಮ ರಾಜ್ಯಕ್ಕೆ ನೀಡುವ ತೆರಿಗೆ ಹಣ ನೀಡಿಲ್ಲ. ತೆರಿಗೆ ಸಂಗ್ರಹಿಸಿ ಯೋಜನೆ ರೂಪಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫ‌ಲವಾಗಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಗಾಗಿ ಎಸ್‌ಸಿಪಿ  ಟಿಎಸ್‌ಪಿ ಯೋಜನೆ ರೂಪಿಸಲಾಗಿದೆ. ಪ್ರತಿ  ವರ್ಷ ಆಯವ್ಯಯದಲ್ಲಿ ಸುಮಾರು 25ಸಾವಿರ ಕೋಟಿ ಅನುದಾನ ಮೀಸಲಿಡಲಾಯಿತು.

ಇದನ್ನೂ ಓದಿ:ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

Advertisement

ಯೋ ಜನೆಯ ಅನುಗುಣವಾಗಿಯೇ ಇಂದು 3 ಕೋಟಿ ರೂ. ಅನುದಾನದ ಕಾಮಗಾರಿ ಭೂಮಿ ಪೂಜೆ ನೇರವೇರಿಸಿದ್ದೇನೆ ಎಂದರು. ಜಂಪೇನಹಳ್ಳಿ, ಬುಕ್ಕಾಪಟ್ಟಣ, ಬಿಕ್ಕೆಗುಟ್ಟೆ, ಹೊಲತಾಳು, ಶಂಭೋನಹಳ್ಳಿ, ಕುರಂಕೋಟೆ, ಮಣುವಿನಕುರಿಕೆ, ದಾಸಲಕುಂಟೆ, ಕುರಿಹಳ್ಳಿ, ಬೋರಪ್ಪನಹಳ್ಳಿ, ಚಿಕ್ಕರಸನಹಳ್ಳಿ, ಚಿಕ್ಕಣ್ಣನಹಳ್ಳಿ, ಸಿಎಸ್‌ಜಿ ಪಾಳ್ಯ, ಜೋನಿಗರಹಳ್ಳಿ, ಮರೇನಾಯಕನಹಳ್ಳಿ, ನೇಗಿಲಾಲ, ಬೆಂಡೋಣಿ, ಕುಂಟೇನಹಳ್ಳಿ, ಗೌಜಗಲ್ಲು, ಮಲ್ಲೇ ಕಾವು ಗ್ರಾಮದಲ್ಲಿ ಸಿಸಿರಸ್ತೆ ಮತ್ತು ಶಾಲಾ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಜಿಪಂ ಸದಸ್ಯೆ ಅಕ್ಕಮಹಾದೇವಿ, ಮಾಜಿ ಸದಸ್ಯ ಪ್ರಸನ್ನಕುಮಾರ್‌, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಸದಸ್ಯೆ ಜ್ಯೋತಿ, ಮಾಜಿ ಗ್ರಾಪಂ ಅಧ್ಯಕ್ಷೆ ಲಕ್ಷಿ¾à, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಅರಕೆರೆಶಂಕರ್‌, ಅಶ್ವತ್ಥನಾರಾಯಣ್‌, ಯುವ ಅಧ್ಯಕ್ಷ ವಿನಯ್‌, ಮುಖಂಡರಾದ ನರಸಿಂಹರಾಜು, ಕಿರಣ್‌, ಕವಿತಾ, ಪುಟ್ಟರಾಜು, ಮಹೇಶ್‌ ಇತರರಿದ್ದರು.

ಜಲಾಶಯ ಕ್ಕೆ ರೈತರ 5 ಸಾವಿರ ಎಕರೆ ಕೃಷಿ ಭೂಮಿ ಮುಳುಗಡೆ ಆಗಲಿದೆ. ರೈತರಿಗೆ ನ್ಯಾಯಬದ್ಧ ಪರಿಹಾರ ಘೋಷಣೆ ಆದರೇ  ಮಾತ್ರ ಭೂಮಿ. ಇಲ್ಲವಾದರೇ 1ಅಡಿ ಭೂಮಿಯು ರೈತರು ನೀಡಲ್ಲ. ನೀರಾವರಿ ಸಚಿವರ ಜೊತೆ ಪರಿಹಾರದ ಬಗ್ಗೆ ಈಗಾಗಲೇ ಚರ್ಚಿಸಿದ್ದೇನೆ.

ಡಾ.ಜಿ.ಪರಮೇಶ್ವರ್‌, ಶಾಸಕ, ಮಾಜಿ ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next