Advertisement
ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಡಿ.ನಾಗೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕೃಷಿ ವಿಜ್ಞಾನ ಕೇಂದ್ರದ ನಿಕ್ರಾ ಯೋಜನೆಗೆ ಎಲೆರಾಂಪುರ ಗ್ರಾಮ ಪಂಚಾಯತಿಗೆ ಕೇಂದ್ರ ಸರ್ಕಾರದ ಉತ್ತಮ ಪಂಚಾಯತಿ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಡಿ.ನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯ ಸಮಗ್ರ ಅಭಿವೃದ್ಧಿಯನ್ನು ಪರಿಶೀಲಿಸಿ ಮಾತನಾಡಿ 2010ರಲ್ಲಿ ಪ್ರಾರಂಭವಾದ ಈ ಯೋಜನೆ ಇಲ್ಲಿಯವರೆಗೂ ಬಹಳ ವ್ಯವಸ್ಥಿತವಾಗಿ ನಡೆದಿದೆ. ಹೀರೆಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಈ ಯೋಜನೆಯನ್ನು ಉತ್ತಮವಾಗಿ ಸಾಕಾರ ಮಾಡಿದ್ದಾರೆ. ನಮ್ಮ ರೈತರು ಇದನ್ನು ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಯೋಜನೆ ಮಳೆಯಾಧಾರಿತ ಖುಷ್ಕಿ ಬೇಸಾಯದ ರೈತರಿಗೆ ಅತ್ಯುತ್ತಮವಾಗಿ ಉಪಯುಕ್ತವಾಗಿದೆ. ಒಣ ಪ್ರದೇಶದಲ್ಲಿ ಲಾಭದಾಯಕ ಬೆಳೆ ಗೋಡಂಬಿ, ಬೆಟ್ಟದ ನೆಲ್ಲಿ, ಹುಣಸೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳನ್ನು ಸಹ ಇಳಿಜಾರಿನ ಮಳೆನೀರನ್ನು ಉಪಯೋಗಿಸಿಕೊಂಡು ಬೆಳೆದಿರುವುದು.
Related Articles
Advertisement
ಈ ಸಂದರ್ಭದಲ್ಲಿ ಡಿ.ನಾಗೇನಹಳ್ಳಿಯ ರೈತರ ಗ್ರಾಮ ವಿಕಾಸ ಚೇತನಕ್ಕೆ ಅರ್ಧ ಎಕರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1 ಎಕರೆ ಹಾಗೂ ಸ್ರೀ ಶಕ್ತಿ ಕೇಂದ್ರಕ್ಕೆ ಅರ್ಧ ಎಕರೆ ಜಮೀನನ್ನು ಮಂಜೂರು ಮಾಡಿಸಿ ಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೆವಿಕೆಯ ಮಣ್ಣು ತಜ್ಞ ವಿಜ್ಞಾನಿ ರಮೇಶ್, ತೋಟಗಾರಿಕಾ ವಿಜ್ಞಾನಿ, ಪ್ರಶಾಂತ್, ತಾಪಂ ಇಒ ದೊಡ್ಡಸಿದ್ದಯ್ಯ,ಸಹಾಯಕ ಕೃಷಿ ನಿರ್ದೇಶಕ ನಾಗರಾಜ.ಹೆಚ್, ಅರಣ್ಯಾಧಿಕಾರಿ ಸುರೇಶ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಪುಷ್ಪಲತಾ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ .ಬಿ.ಎಸ್, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಅರಕೆರೆ ಶಂಕರ್, ಕೋಡ್ಲಹಳ್ಳಿ ಅಶ್ವಥ್ ನಾರಾಯಣ್, ಯುವ ಕಾಂಗ್ರೆಸ್ ಅದ್ಯಕ್ಷ ವಿನಯ್ ಕುಮಾರ್, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಮ್ಮ ಗ್ರಾಪಂ ಅದ್ಯಕ್ಷೆ ಗಂಗಾದೇವಿ, ಉಪಾಧ್ಯಕ್ಷ ಉಮೇಶ್ ಚಂದ್ರ, ಸದಸ್ಯರುಗಳಾದ ಸರ್ವೇಶ್, ಚಂದ್ರಯ್ಯ, ರಂಗಶ್ಯಾಮಯ್ಯ, ಕೆ.ಎಲ್ ಮಂಜುನಾಥ್, ರೈತ ಮುಖಂಡರುಗಳಾದ ಮಹೇಶ್, ಯೋಗೇಶ್ ಲೋಕೇಶ್, ರಾಕೇಶ್ ಅರವಿಂದ್, ಸೇರಿದಂತೆ ಇತರರು ಹಾಜರಿದ್ದರು.