Advertisement
ಈವರೆಗೆ ರಾಜ್ಯ ಮಟ್ಟದಲ್ಲಿದ್ದ ವಿಪತ್ತು ನಿರ್ವಹಣ ಯೋಜನೆ ಇನ್ನು ಮುಂದೆ ಗ್ರಾ.ಪಂ. ಮಟ್ಟದಲ್ಲೂ ಜಾರಿಗೆ ಬರಲಿದೆ. ಗ್ರಾಮೀಣ ಮಟ್ಟದಲ್ಲಿ ಇದನ್ನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.
Related Articles
ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ, ಸಾವು- ನೋವು ಉಂಟಾಗುವ ಸಾಧ್ಯತೆಯಿರುತ್ತದೆ. ಅದರ ನಿರ್ವಹಣೆಗೆ ಅಲ್ಪಾವಧಿ ಮತ್ತು ದೀರ್ಘಾ ವಧಿ ಯೋಜನೆ ಸಿದ್ಧಪಡಿಸಿಕೊಂಡರೆ ಹಾನಿ, ಸಾವು-ನೋವು ತಡೆಯಬಹುದು. ಹಾಗಾಗಿ ಈ ಬಾರಿಯ ರಾಜ್ಯ ಮಟ್ಟದ ವಿಪತ್ತು ನಿರ್ವಹಣ ಯೋಜನೆ ಯಲ್ಲಿ ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆಗೆ ಒತ್ತು ಕೊಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Advertisement
ಯೋಜನೆ ಕಾರ್ಯಗತ ಹೇಗೆ?ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಕಾಗುವ ಮೂಲ ಸೌಕರ್ಯ, ಸಂಪನ್ಮೂಲಗಳ ಮಾಹಿತಿ ಸಂಗ್ರಹಿಸಿ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಇದ ಕ್ಕಾಗಿ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು, ಸ್ಥಳೀಯ ಮಟ್ಟದ ತಜ್ಞ ಮತ್ತು ಕೌಶಲಯುಕ್ತ ವ್ಯಕ್ತಿಗಳ ನೆರವು ಪಡೆದು ಕೊಳ್ಳಲಾಗುತ್ತದೆ. ಸ್ಥಳೀಯ ಪರಿಸ್ಥಿತಿ ಆಧರಿಸಿ ಯೋಜನೆ ಜಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ. ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆ ಬಗ್ಗೆ ಈಗಾಗಲೇ ಪಂಚಾಯತ್ ಸಿಬಂದಿಗೆ ಎರಡು ಹಂತಗಳ ತರಬೇತಿ ನೀಡ ಲಾಗಿದೆ. ಜಿ.ಪಂ. ಉಪ ಕಾರ್ಯ ದರ್ಶಿ ಯವರನ್ನು ಯೋಜನೆಯ ನೋಡಲ್ ಅಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಎಲ್ಲ ಪಂಚಾಯತ್‌ಗಳಲ್ಲಿ ಆಡ ಳಿ ತಾಧಿ ಕಾರಿಗಳು ಇರು ವುದ ರಿಂದ ಅವರು ಯೋಜನೆ ಸಿದ್ಧಪಡಿಸಿ ಕೊಳ್ಳ ಬೇಕಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಆಯುಕ್ತರು, ಪಂಚಾಯತ್‌ರಾಜ್ ಆಯುಕ್ತಾಲಯ ರಫೀಕ್ ಅಹ್ಮದ್