ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಗೃಹ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್, 2500 ಕೋಟಿ ವೆಚ್ಚದ ಯೋಜನೆಯಲ್ಲಿ ಪಾವಗಡಕ್ಕೆ ತುಂಗಭದ್ರಾ ನದಿಯಿಂದ ನೀರು ಹೋಗುತ್ತದೆ. ಅದು ಜಗಳೂರು ಮೇಲೆ ಹಾದು ಹೊಗುವುದರಿಂದ ಜಗಳೂರಿಗೆ ನೀರು ಕೊಡಬೇಕು ಅಂತ ಒತ್ತಾಯ ಮಾಡಿದರು
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಈಗಾಗಲೇ ಟೆಂಡರ್ ಮುಗಿದಿದ್ದರಿಂದ ಹೊಸ ಟೆಂಡರ್ ಕರೆಯಲು ಬರುವುದಿಲ್ಲ. ಹಾಗಾಗಿ ಹೊಸದಾಗಿ ಯಾವ ರೀತಿ ಅದೇ ಪೈಪ್ ಲೈನ್ ಮೂಲಕ ನೀರು ತರಲು ಸಾಧ್ಯ ಎನ್ನೋದರ ಬಗ್ಗೆ ವರದಿ ಕೊಡಿ ಅಂತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭದ್ರಾ ಮೇಲ್ದಂಡೆ ಮೂಲಕ ಕೆರೆಗಳಿಗೆನೀರು ತುಂಬಿಸುವ ಯೋಜನೆ ನೆನಗುದಿಗೆ ಬಿದ್ದಿದೆ ಹಾಗಾಗಿ ಅದನ್ನು ಮತ್ತೆ ಜಾರಿ ಮಾಡಬೇಕು. ಅಷ್ಟೇ ಅಲ್ಲದೆ 1೦9 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಕೂಡ ನೆನೆಗುದಿಗೆ ಬಿದ್ದಿದ್ದು ಅದಕ್ಕೂ ಸಹ ಚಾಲನೆ ಮಾಡಬೇಕು ಅಂತ ಭದ್ರಾ ಮೇಲ್ದಂಡೆ ಯೋಜನೆ ಕಮಿಟಿ ಸದಸ್ಯ ಮುಖ್ಯಮಂತ್ರಿ ಗಳಿಗೆ ಒತ್ತಾಯ ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಹರಿಹರದಿಂದ ಹಳ್ಳಿಗಳಿಗೆ ನೀರು ಹಾಯಿಸುವ ಸಾಧ್ಯತೆಯ ಬಗ್ಗೆ ಯೋಜನೆ ತಯಾರಿಸಿ ಎಂದು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಗಳೂರು ಮತ್ತು ಹರಿಹರ ಕೆಲವು ಭಾಗದಲ್ಲಿ ಬರಗಾಲ ಆವರಿಸಿದ್ದು ಕೂಡಲೇ ಮೇವು ಬ್ಯಾಂಕ್ ತೆರೆಯಲು ರೈತರು ಒತ್ತಾಯಕ್ಕೆ, ಬಿಎಸ್ ವೈ ಕೂಡಲೇ ಗೋ ಶಾಲೆ ಮತ್ತು ಮೇವು ಬ್ಯಾಂಕ್ ತೆರೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು