ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಣ ಹೋರಾಟ ಮುಂದುವರಿದಿದೆ.ಲೋಕಸಭಾ ಸದಸ್ಯ ಗಜಾನನ ಕೀರ್ತಿಕರ್ ಅವರು ಬಣ ಬದಲಾಯಿಸಿದ್ದು, ಉದ್ಧವ್ ಠಾಕ್ರೆ ಅವರ ಪಾಳಯವನ್ನು ಬಿಟ್ಟು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಣವನ್ನು ಸೇರಿದ್ದಾರೆ.
ಶಿವಸೇನೆಯಲ್ಲಿದ್ದ 18 ಲೋಕಸಭಾ ಸದಸ್ಯರಲ್ಲಿ ಅಧಿಕಾರದಲ್ಲಿರುವ ಏಕನಾಥ್ ಶಿಂಧೆ ಅವರೊಂದಿಗೆ ಹೋಗುವ 13 ನೇ ಸಂಸದ ಕೀರ್ತಿಕರ್ ಆಗಿದ್ದಾರೆ. ಈಗಾಗಲೇ ಪಕ್ಷದ 56 ಶಾಸಕರ ಪೈಕಿ 40 ಶಾಸಕರ ಬೆಂಬಲ ಶಿಂಧೆ ಅವರಿಗಿದೆ.
ಏಕನಾಥ್ ಶಿಂಧೆ ಮಾಡಿದ್ದನ್ನು ಉದ್ಧವ್ ಠಾಕ್ರೆ ಅರ್ಥಮಾಡಿಕೊಳ್ಳಬೇಕು ಎಂದು ಗಜಾನನ ಕೀರ್ತಿಕರ್ ಹೇಳುತ್ತಿದ್ದರು.
ಇದನ್ನೂ ಓದಿ:ಸುರತ್ಕಲ್: ನಿತ್ಯ ವಾಕಿಂಗ್ ಜೊತೆಗೆ ನೂರಾರು ಪಾರಿವಾಳಗಳಿಗೆ ಕಾಳು ಹಾಕುವ ಪಕ್ಷಿ ಪ್ರೇಮಿ
“ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದ ಗಜಾನನ ಕೀರ್ತಿಕರ್ ಅವರು ಇಂದು ಅಧಿಕೃತವಾಗಿ ಪಕ್ಷಕ್ಕೆ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು ಮತ್ತು ನಾವು ಅವರಿಗೆ ಸಾಮಾಜಿಕ ಮತ್ತು ರಾಜಕೀಯ ಪ್ರಗತಿಗೆ ಶುಭ ಹಾರೈಸಿದ್ದೇವೆ.” ಎಂದು ಶಿಂಧೆ ಅವರು ಟ್ವೀಟ್ ಮಾಡಿದ್ದಾರೆ.