Advertisement

G-20 ವಿ.ವಿ.ಕನೆಕ್ಟ್ ಫಿನಾಲೆ: ವಿದ್ಯಾರ್ಥಿಗಳು, ಯುವ ವೃತ್ತಿಪರರಿಗೆ ಪ್ರಧಾನಿ ಮೋದಿ ಆಹ್ವಾನ

12:45 AM Sep 25, 2023 | Team Udayavani |

ಹೊಸದಿಲ್ಲಿ: ಭಾರತ ಮಂಟಪದಲ್ಲಿ ಸೆ.26ರಂದು ನಡೆಯಲಿರುವ ಜಿ-20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.

Advertisement

ಲಿಂಕ್ಡ್ ಇನ್‌ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ ಒಂದು ವರ್ಷದಲ್ಲಿ ಜಿ-20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯು ಭಾರತದ ಯುವಜನತೆಯನ್ನು ಒಗ್ಗೂಡಿಸಿದೆ. ವರ್ಷವಿಡೀ ಜಾರಿಯಲ್ಲಿದ್ದ ಈ ಉಪಕ್ರಮ ನಂಬಲಾರದಷ್ಟು ಬದಲಾವಣೆ, ತೃಪ್ತಿಕರ ಫ‌ಲಿತಾಂಶ ನೀಡುವುದಲ್ಲದೇ, ನಮ್ಮ ದೇಶದ ಜನರು ಹೇಗೆ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದಾರೆಂಬುದನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಜರುಗಿದರ ಬಗ್ಗೆ ಯುವಕರು ಸಂಪೂರ್ಣವಾಗಿ ಅರಿತಿದ್ದಾರೆ. 2047ರ ವೇಳೆಗೆ ನಮ್ಮ ಯುವಕರು ವೀಕ್ಷಿತ್‌ ಭಾರತ್‌ನ ಮುನ್ನಡೆಸಲು ಉಪಕ್ರಮ ಸಹಕರಿಸಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next