Advertisement

ವೈಮಾನಿಕ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ: ‘ವಿ’ಅಕಾರದ ವಿಮಾನದಲ್ಲಿ ಪ್ರಯಾಣ!

08:22 PM Sep 07, 2020 | Karthik A |

ಬರ್ಲಿನ್‌: ಸದ್ಯ ಇಡೀ ಜಗತ್ತು ತಂತ್ರಜ್ಞಾನದ ಮೇಲೆ ನಿಂತಿದ್ದು, ದಿನ ಬೆಳಗ್ಗಾದರೆ ವಿನೂತನ ಪ್ರಯೋಗಗಳಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಲ್ಲೇ ಇರುತ್ತದೆ.

Advertisement

ಇದೀಗ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜರ್ಮನಿಯ ಸಂಶೋಧಕರು ವೈಮಾನಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ವಿಭಿನ್ನ ಆವಿಷ್ಕಾರವನ್ನು ಮಾಡಿದ್ದು, ವಿಮಾನದ ರೆಕ್ಕೆಯಲ್ಲಿಯೇ ಕುಳಿತು ಪ್ರಯಾಣ ಮಾಡುವ ತಂತ್ರಜ್ಞಾನವನ್ನು ಜರ್ಮನಿಯ ತಜ್ಞರು ಯಶಸ್ವಿಯಾಗಿ ನಡೆಸಿದ್ದಾರೆ.

ಹೌದು ಡಚ್‌ ಏರ್‌ಲೈನ್ಸ್‌ ಕೆಎಲ್‌ ಎಂ ಸಹಯೋಗದಲ್ಲಿ ನೆದರ್ಲೆಂಡ್‌ನ‌ ಡೆಲ್ಫ್‌ ವಿಶ್ವವಿದ್ಯಾಲಯದ ತಂತ್ರಜ್ಞಾನ ವಿಭಾಗ ಈ ಒಂದು ಆವಿಷ್ಕಾರ ಮಾಡಿದ್ದು, “ವಿ’ ಆಕೃತಿಯ ಮಾದರಿಯಲ್ಲಿರುವ ಈ ವಿಮಾನವನ್ನು ಜರ್ಮನಿಯ ವಾಯುನೆಲೆಯಲ್ಲಿ ಯಶಸ್ವಿಯಾಗಿ ಹಾರಿಸಲಾಗಿದೆ.

ವಿಶೇಷತೆ ಏನು?
ಈ ವಿಮಾನ ಇಂಧನ ವ್ಯತ್ಯಯವನ್ನು ಕಡಿತಗೊಳಿಸಲಿದ್ದು, ಇಂಗ್ಲಿಷ್‌ ಭಾಷೆಯ ವಿ ಆಕಾರದಲ್ಲಿ ಇರುವ ಈ ವಿಮಾನ ತನ್ನ ರೆಕ್ಕೆಯ ಮುಂದಿನ ಭಾಗದಲ್ಲಿ ಪ್ರಯಾಣಿಕರನ್ನು ಆಸನ ವ್ಯವಸ್ಥೆ ಇದೆ. ಜತೆಗೆ ಸರಕು ತುಂಬುವ ಸ್ಥಳ ಮತ್ತು ಇಂಧನ ಟ್ಯಾಂಕ್‌ ಕೂಡ ಇದರ ರೆಕ್ಕೆಯಲ್ಲಿ ಇರುವ ಹಿನ್ನೆಲೆಯಲ್ಲಿ ಶೇ.20ರಷ್ಟು ಇಂಧನ ಮಿತವ್ಯಯ ಸಾಧ್ಯವಾಗಲಿದೆ ಎಂದಿದ್ದಾರೆ ತಜ್ಞರು.

ಇನ್ನು ಜರ್ಮನಿ ನಿರ್ಮಿತ ಫ್ಲೈ-ವಿ ಹೆಸರಿನ ಈ ಮಾದರಿ ವಿಮಾನ ಆರಾಮದಾಯಕ ಪ್ರಯಾಣಕ್ಕೆ ಸೂಕ್ತ ಉದಾಹರಣೆ ಎಂದೇ ಹೇಳಲಾಗುತ್ತಿದ್ದು, ವಿಮಾನಯಾನ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ. ಗಾಳಿಯಲ್ಲಿ ಸುಲಭವಾಗಿ ತೇಲುವ ಈ ವಿಮಾನ ಇಂಧನ ಉಳಿತಾಯ ದೃಷ್ಟಿಯಿಂದ ಸೂಕ್ತ ಮಾದರಿ ಎಂದು ಹೇಳಲಾಗುತ್ತಿದ್ದು, ವಿಶಿಷ್ಟ ಎನಿಸುವ ಹಾರಾಟ ನಡೆಸಿದೆ.

Advertisement

ಮತ್ತಷ್ಟು ಅಭಿವೃದ್ಧಿಗೊಳಿಸಬೇಕು
ಮೊದಲ ಯಶಸ್ವಿ ಹಾರಾಟದ ಬಳಿಕ ಮಾತನಾಡಿದ ಸಂಶೋಧನಾ ತಂಡದ ಜವಾಬ್ದಾರಿ ಹೊರುತ್ತಿರುವ ಡೆಲ್ಫ್ ವಿಶ್ವವಿದ್ಯಾಲಯದ ರುಲೋಫ್ ವೋಸ್‌ ವಿಮಾನದ ಹಾರಾಟದಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ಆದರೆ ತಿರುಗುವ ಹಂತದಲ್ಲಿ ಸ್ವಲ್ಪ ಮಟ್ಟಿನ ತೊಂದರೆಯಾಗಿದೆ. ಲ್ಯಾಂಡಿಂಗ್‌ ಸಂದರ್ಭ ದೊಡ್ಡ ಸಮಸ್ಯೆ ಇದೆ. ಗಡುಸಾಗಿ ರನ್‌ ವೇ ಸ್ಪರ್ಶಿಸುವುದರಿಂದ ಪ್ರಯಾಣಿಕರಿಗೆ ಭಯವಾಗಬಹುದು. ರೆಕ್ಕೆಗಳೇ ವಿಮಾನದ ಮೂಲ ಆಗಿರುವುದರಿಂದ ಭೂ ಸ್ಪರ್ಶ ಮಾಡುವಾಗ ಸಮಾನ ಅಂತರ ಕಾಯ್ದುಕೊಳ್ಳಬೇಕಿದ್ದು, ಇದು ಕಷ್ಟದ ಕೆಲಸ. ಆದರೆ ಮುಂದಿನ ಹಂತದಲ್ಲಿ ಈ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next