Advertisement
ರಷ್ಯಾ-ಉಕ್ರೇನ್ ಯುದ್ಧದ ಪರಿಣಾಮ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಯುದ್ಧ ಮುಗಿದ ಅನಂತರ ಮತ್ತೆ ಉಕ್ರೇನ್‌ಗೆ ಹೋಗಬೇಕು ಎಂಬುದು ಭಾಗಶಃ ವಿದ್ಯಾರ್ಥಿಗಳ ಹಂಬಲವಾಗಿದೆ. ಆದರೆ, ಯುದ್ಧ ನಡೆಯುತ್ತಲೇ ಇರುವುದರಿಂದ ಮುಂದೇನು ಮಾಡುವುದು ಎಂಬ ಅನಿಶ್ಚಿತತೆ ಮತ್ತು ಗೊಂದಲದಿಂದ ವಿದ್ಯಾರ್ಥಿಗಳು ಅಡಕತ್ತರಿಯಲ್ಲಿ ಸಿಲುಕಿದ ಹಾಗಾಗಿದೆ.
Related Articles
ವಿದ್ಯಾರ್ಥಿಗಳು ಈವರೆಗೆ ಏನಾದರೂ ದಾರಿಯಾಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಇದೀಗ ಸರಕಾರ ಕೈಚೆಲ್ಲಿರುವುದರಿಂದ ಮೊದಲ ವರ್ಷ ಮಾತ್ರ ಮುಗಿಸಿರುವ ವಿದ್ಯಾರ್ಥಿಗಳು, ಮತ್ತೆ ಉಕ್ರೇನ್‌ಗೆ ಹೋಗುವ ಬದಲು ಭಾರತದಲ್ಲಿಯೇ ಮುಂದಿನ ವರ್ಷ ವೈದ್ಯಕೀಯ ಕೋರ್ಸ್‌ಗಳ ನೀಟ್ ಪರೀಕ್ಷೆ ಬರೆಯಲು ಕೆಲವು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ಕೆಲವರು ಎಂಜಿನಿಯರಿಂಗ್, ಕಾನೂನು ಪದವಿ ಇನ್ನಿತರ ಕೋರ್ಸ್‌ಗಳತ್ತಲೂ ಗಮನ ಹರಿಸುತ್ತಿದ್ದಾರೆ.
Advertisement
ವಿದ್ಯಾರ್ಥಿಗಳ ಸಮಸ್ಯೆಗಳೇನು?ಅಂಕಪಟ್ಟಿ ಸೇರಿ ವಿದ್ಯಾರ್ಥಿಗಳ ಶೈಕ್ಷಣಿಕ ಮೂಲ ದಾಖಲಾತಿಗಳು ಉಕ್ರೇನ್‌ನ ವಿಶ್ವವಿದ್ಯಾಲಯಗಳಲ್ಲಿಯೇ ಉಳಿದುಕೊಂಡಿವೆ. ವಿದ್ಯಾರ್ಥಿಗಳು ಇದೀಗ ಬೇರೊಂದು ಕೋರ್ಸ್ ಮಾಡಬೇಕಾದರೆ ಮೂಲ ದಾಖಲಾತಿಗಳು ಅಗತ್ಯವಾಗಿದೆ. ಇದನ್ನು ಅಲ್ಲಿಂದ ತರಿಸಿಕೊಡುವುದು ಅಥವಾ ಪರ್ಯಾಯ ವ್ಯವಸ್ಥೆಯನ್ನು ಸರಕಾರಗಳು ಮಾಡಬೇಕು. ಇದರ ಜತೆಗೆ ರುಮೇನಿಯಾ, ಪೋಲೆಂಡ್, ರಷ್ಯಾ ಸೇರಿ ಹಲವು ದೇಶಗಳು ಉಕ್ರೇನ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿವೆ. ಅಲ್ಲಿಗೆ ಹೋಗಲು ಸರಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದರೆ, ಅನುಕೂಲವಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಬೆಂಗಳೂರಿನ ಸ್ವಾತಿ. ಮತ್ತೆ ಉಕ್ರೇನ್‌ಗೆ ಹೋಗುತ್ತೇವೆ
ಈಗಾಗಲೇ ಒಂದು ವರ್ಷ ವೈದ್ಯಕೀಯ ಶಿಕ್ಷಣ ಮುಗಿದಿದೆ. ಇದೀಗ ಮತ್ತೆ ಬೇರೆ ಕೋರ್ಸ್‌ಗಳತ್ತ ಗಮನ ಹರಿಸುವುದರಿಂದ ಆರ್ಥಿಕವಾಗಿ ಸಮಸ್ಯೆಯಾಗ ಲಿದೆ. ಒಂದು ವರ್ಷ ಕೂಡ ಅನಾವಶ್ಯಕವಾಗಿ ವ್ಯರ್ಥವಾಗ ಲಿದೆ. ಆದ್ದರಿಂದ ಮುಂದಿನ ಸೆಮಿಸ್ಟರ್ ತರಗತಿಗಳಿಗೆ ಉಕ್ರೇನ್‌ಗೆ ಮತ್ತೆ ವಾಪಸಾ ಗಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಬೆಂಗಳೂರಿನ ರಿಚಾಸೋಮ್. ಉಕ್ರೇನ್‌ಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಸಂಬಂಧಿಸಿ ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿನಿಂದ (ಎನ್‌ಎಂಸಿ) ಈವರೆಗೆ ಯಾವುದೇ ನಿರ್ದೇಶನ ಬಂದಿಲ್ಲ. ಎನ್‌ಎಂಸಿ ನಿರ್ದೇಶನದಂತೆ ರಾಜ್ಯದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ನಿರ್ಧರಿಸಲು ಸಾಧ್ಯವಿಲ್ಲ.
– ಡಾ| ಬಿ.ಎಲ್. ಸುಜಾತಾ ರಾಥೋಡ್, ವೈದ್ಯಕೀಯ ಶಿಕ್ಷಣ ನಿರ್ದೇಶಕಿ – ಎನ್.ಎಲ್. ಶಿವಮಾದು