Advertisement
ಮಂಗಳಮುಖೀಯರಲ್ಲಿ ಪೊಲೀಸ್ ಅಧಿಕಾರಿ, ಟ್ಯಾಟೊ ಡಿಸೈನರ್, ಬ್ಯೂಟಿಶಿಯನ್, ವಕೀಲರು ಹೀಗೆ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಕಾಣಬಹುದು. ಅಂತವರಲ್ಲಿ ನಿತು ಆರ್.ಎಸ್. ಕೂಡ ಒಬ್ಬರು. ಗದಗ್ ಮೂಲದವರಾದ ಇವರ ಪೂರ್ವ ಹೆಸರು ಮಂಜುನಾಥ್. ತಾನೇಕೆ ಸಾಮಾನ್ಯರಂತೆ ಇಲ್ಲ ಎಂಬ ಪ್ರಶ್ನೆ ಅವರನ್ನು ಕಾಡಿದಾಗ ಗೂಗಲ್ ಸಹಾಯದಿಂದ 11ನೇ ವಯಸ್ಸಿನಲ್ಲಿ ತಾನು ಮಂಗಳಮುಖೀ ಎನ್ನುವ ನಿಜ ಸ್ಥಿತಿ ಅರಿವಿಗೆ ಬಂದಿತ್ತು. ಆದರೆ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಕಾರಣ, ಮನೆಯಿಂದ ಹೊರಹಾಕಬಹುದೆಂಬ ಭಯ ತನ್ನೆಲ್ಲಾ ಭಾವನೆಯನ್ನು ಅದುಮಿಟ್ಟು ಸಾಮಾನ್ಯರಂತೆ ನಟಿಸುತ್ತ ಬದುಕಬೇಕಾಗಿ ಬಂತು. ಮನೆಯಲ್ಲಿ ಆದಾಯದ ಸಮಸ್ಯೆ ಇರುವ ಕಾರಣ ತನ್ನ ತಾಯಿ ಮತ್ತು ಸಹೋದರಿಯ ಜತೆ ಹೂ ಕಟ್ಟುವ ಮತ್ತು ಮಾರುವ ಕೆಲಸಮಾಡುತ್ತಿದ್ದರು. ಬಳಿಕ ಶಾಲಾ ಶಿಕ್ಷಣದ ಅವಧಿಯಲ್ಲಿಯೇ ಚಿತ್ರ ಕಲೆಯ ಕುರಿತು ಅಪಾರ ಆಸಕ್ತಿವಹಿಸಿದ ಇವರಿಗೆ ಅದೇ ಕಲೆ ಮುಂದೊಂದು ದಿನ ತನ್ನ ಬದುಕು ರೂಪಿಸಬಹುದೆಂಬ ಅರಿವಿದ್ದಿರಬಹುದು.
ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣಕ್ಕಾಗಿ ತೆರಳಿದಂತಹ ಸಂದರ್ಭದಲ್ಲಿಯೂ ಸಮಾಜದ ದೃಷ್ಟಿಗೆ ಮಂಜುನಾಥ್ ಆಗಿಯೇ ಉಳಿದರು. ಅಲ್ಲಿ ಇತರ ಮಂಗಳಮುಖೀಯರೊಂದಿಗೆ ಸ್ನೇಹ ಬೆಳೆಸಿದರು. ಬಳಿಕ ಚಿತ್ರಕಲೆಯ ಆಸಕ್ತಿಯನ್ನು ಆಧುನೀಕ ಕಾಲಘಟ್ಟದ ಹೆಚ್ಚು ಫ್ಯಾಷನೇಬಲ್ ಆಗಿರುವ ಟ್ಯಾಟೋ ಬಿಡಿಸುವುದನ್ನು ಕಲಿಯುತ್ತಾರೆ. ಇದೇ ಸಂದರ್ಭದಲ್ಲಿ ಲಿಂಗ ಪರಿವರ್ತನೆಯ ಶಸ್ತ್ರ ಚಿಕಿತ್ಸೆಯನ್ನೂ ಪಡೆಯುತ್ತಾರೆ. 2014ರಲ್ಲಿ ಎಲ್‌ಜಿಬಿಟಿಕ್ಯೂನಲ್ಲಿ (LGBTQ) (ಟ್ರಾನ್ಸ್ ಜಂಡರ್ ಕುರಿತಾದ ಒಂದು ಸಂಘಟನೆ) ಸಕ್ರಿಯರಾಗಿದ್ದರು. ಬಳಿಕ ಇದೇ ಸಂಘಟನೆಯಿಂದ ನಡೆಸಲ್ಪಟ್ಟ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದವರಾಗಿರುತ್ತಾರೆ. ಬಳಿಕ ತನ್ನ ತಾಯಿ ಮತ್ತು ತಂಗಿಗೆ ಸತ್ಯ ತಿಳಿಸಿ ನಿತು ಆರ್.ಎಸ್. ನಾಮಾಂಕಿತದೊಂದಿಗೆ ಹೊಸ ಜೀವನವನ್ನು ಕಂಡುಕೊಂಡಿದ್ದಾರೆ. ಬಹುಮುಖ ಪ್ರತಿಭೆ
ಈಕೆ ಟ್ಯಾಟೋ ಡಿಸೈನರ್ ಮಾತ್ರವಲ್ಲದೆ ಕ್ಲಾಸಿಕ್, ಕಥಕ್ ಹಾಗೂ ಪಾಶ್ಚಿಮಾತ್ಯ ಮನ್ನಣೆ ಪಡೆದ ಬೆಲ್ಲಿ ನರ್ತ ಡ್ಯಾನ್ಸ್‌ಗೂ ಸೈ ಎನಿಸಿಕೊಂಡಿದ್ದಾರೆ. ಯೋಗಾಭ್ಯಾಸದಲ್ಲಿ ಆಸಕ್ತಿ ವಹಿಸಿ ಯೋಗ ತರಬೇತುದಾರರಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಪ್ರತಿಮ ರೂಪಸಿಯಾಗಿರುವ ಇವರು ಮಾಡಲಿಂಗ್ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿದ್ದು 2017ರಲ್ಲಿ ಬೆಂಗಳೂರಿನಲ್ಲಿ ನಡೆದ ಮಿಸ್ ಟ್ರಾನ್ಸ್ ಜಂಡರ್ ಡೈಮಂಡ್, 2019ರಲ್ಲಿ ಮಿಸ್ ಟ್ರಾನ್ಸ್ ಕ್ವಿನ್ ಇಂಡಿಯಾ ಕಿರಿಟ ಮುಡಿಗೇರಿಸಿಕೊಂಡಿದ್ದಾರೆೆ. ಬಳಿಕ ಜಗತ್ತಿನ ಅತ್ಯಂತ ಪ್ರತಿಷ್ಟಿತ ಪ್ರದರ್ಶನವಾದ ಥೈಲ್ಯಾಂಡ್‌ನ ಮಿಸ್ ಇಂಟರ್‌ನ್ಯಾಷನಲ್ ಕ್ವೀನ್ ಪ್ರದರ್ಶನದಲ್ಲಿ 2020ರಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಮೂಲಕ ಈಡಿ ದೇಶದಲ್ಲಿಯೇ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೊದಲ ಟ್ರಾನ್ಸ್ ಜಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.
Related Articles
Advertisement