Advertisement

ಮತ್ತಷ್ಟು ಪುಲ್ವಾಮಾ ಮಾದರಿ ದಾಳಿ: ಇಮ್ರಾನ್‌

11:47 PM Aug 06, 2019 | Team Udayavani |

ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ಕ್ರಮದಿಂದಾಗಿ, ಭಾರತದಲ್ಲಿ ಪುಲ್ವಾಮಾ ಮಾದರಿಯ ಮತ್ತಷ್ಟು ದಾಳಿಗಳು ನಡೆಯಬಹುದು. ಅದರಿಂದಾಗಿ, ಮುಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಬಹುದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಸಿದ್ದಾರೆ.

Advertisement

ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮಂಗಳವಾರ ಕರೆಯಲಾಗಿದ್ದ ಪಾಕಿಸ್ತಾನದ ಸಂಸತ್‌ ಅಧಿವೇಶನದಲ್ಲಿ ಮಾತನಾಡಿದ ಅವರು, “ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದಿರುವುದರಿಂದ ಆ ದೇಶದಲ್ಲಿ ಪುಲ್ವಾಮಾ ಮಾದರಿಯ ಮತ್ತಷ್ಟು ದಾಳಿಗಳು ನಡೆಯಬಹುದು ಎಂದೆನಿಸುತ್ತಿದೆ.

ಆಗ, ಭಾರತವು ಅಂಥ ದಾಳಿಗೆ ಪಾಕಿಸ್ತಾನವನ್ನೇ ಹೊಣೆಯಾಗಿಸುತ್ತದೆ. ಆಗ, ಉಭಯ ದೇಶಗಳ ನಡುವೆ ಯುದ್ಧ ಆರಂಭವಾಗಬಹುದು. ಆದರೆ, ಆ ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲುವುದೂ ಇಲ್ಲ. ಆದರೆ, ಜಾಗತಿಕ ಮಟ್ಟದಲ್ಲಿ ಗಂಭೀರ ಪರಿಣಾಮವನ್ನು ಆ ಯುದ್ಧ ಬೀರಲಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next