Advertisement

ಮುಂದಿನ ವರ್ಷ ಇನ್ನಷ್ಟು  ಸಾಧನೆ: ಡಾ|ವಿನೋದ್‌ ಭಟ್‌

09:48 AM May 01, 2018 | |

ಉಡುಪಿ: ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯವು ನೀಡುವ ಎನ್‌ಐಆರ್‌ಎಫ್ (ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ರ್‍ಯಾಂಕಿಂಗ್‌ ಫ್ರೆಮ್‌ವರ್ಕ್‌) ರ್‍ಯಾಂಕಿಂಗ್‌ನಲ್ಲಿ ಈ ಸಾಲಿನಲ್ಲಿ ಮಾಹೆಯ ವಿವಿಧ ಶಿಕ್ಷಣ ಸಂಸ್ಥೆಗಳು ಉತ್ತಮ ಸಾಧನೆ ತೋರಿವೆ. ಮುಂದಿನ ವರ್ಷ ಇದು ಮತ್ತಷ್ಟು ಉತ್ತಮಗೊಳ್ಳಲಿದೆ ಎಂದು ಮಾಹೆ ಕುಲಪತಿ ಡಾ| ಎಚ್‌. ವಿನೋದ್‌ ಭಟ್‌ ಹೇಳಿದರು.

Advertisement

ಮಣಿಪಾಲ ವಿ.ವಿ. ಕಟ್ಟಡದಲ್ಲಿ ಶನಿವಾರ ಜರಗಿದ ಎನ್‌ಐಆರ್‌ಎಫ್ ರ್‍ಯಾಂಕಿಂಗ್‌ 2018ರ ಪ್ರಮಾಣಪತ್ರ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ವರ್ಷ ಮಾಹೆಗಿಂತ ಉನ್ನತ ರ್‍ಯಾಂಕ್‌ನಲ್ಲಿ 7 ವಿ.ವಿ.ಗಳಿದ್ದವು. ಈ ಬಾರಿ ಒಂದು ವಿ.ವಿ. ಮಾತ್ರ ಮುಂದಿದೆ. ಮುಂದಿನ ವರ್ಷ ಇದನ್ನೂ ಮೀರಿ ಮಾಹೆ ಸಾಧನೆ ದಾಖಲಿಸಲಿದೆ. ಎಜುಕೇಶನ್‌ ವರ್ಲ್ಡ್ ಮ್ಯಾಗಜಿನ್‌ನ ಮುಂದಿನ ಆವೃತ್ತಿಯಲ್ಲಿಯೂ ಮಾಹೆ ಸತತ ಮೂರನೇ ಬಾರಿಗೆ ಪ್ರಥಮ ರ್‍ಯಾಂಕ್‌ ಪಡೆಯಲಿದೆ ಎಂದರು.

ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಕುಲಪತಿಯವರನ್ನು ಅಭಿನಂದಿಸಿದರು. ಕುಲಸಚಿವ ಡಾ| ನಾರಾಯಣ್‌ ಸಭಾಹಿತ್‌ ಸ್ವಾಗತಿಸಿದರು. ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next