Advertisement

“ಕೇಂದ್ರ ಸರಕಾರದಿಂದ ಮತ್ತಷ್ಟು ನೆರೆ ಪರಿಹಾರ’

08:16 PM Oct 08, 2019 | mahesh |

ಉಡುಪಿ: ಎನ್‌ಡಿಆರ್‌ಎಫ್ ಯೋಜನೆಯಡಿ ನೆರೆ ಪರಿಹಾರಕ್ಕಾಗಿ ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ 1,200 ಕೋ.ರೂ.ನೆರೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಮೂರು ಸಾವಿರ ಕೋಟಿ ರೂ.ಪರಿಹಾರ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಈಗಾಗಲೇ ಮನೆಕಳೆದುಕೊಂಡವರಿಗೆ ಐದು ಲ.ರೂ., ಮನೆ ಇಲ್ಲದವರಿಗೆ ತಾತ್ಕಾಲಿಕ ಬಾಡಿಗೆ ಆಶ್ರಯ ಪಡೆಯಲು ಮುಖ್ಯಮಂತ್ರಿಗಳು ನೆರವು ಕಲ್ಪಿಸಿದ್ದಾರೆ. ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಜಮಾವಣೆಯಾಗಲಿದೆ. ಜಿಲ್ಲೆಗೂ ಪ್ರಾಕೃತಿಕ ವಿಕೋಪದಡಿ 25 ಕೋ.ರೂ.ಹಣ ಬಿಡುಗಡೆ ಮಾಡಲಾಗಿದೆ ಎಂದರು.

ರೈತರಿಗೆ ನೀಡುತ್ತಿರುವ ಬೆಳೆ ಪರಿಹಾರ ಕಡಿಮೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಎಕರೆಗೆ 3ರಿಂದ 4ಸಾವಿರ ರೂ.ನಂತೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮರಳು ಸಮಸ್ಯೆ ನಿವಾರಣೆ
ಮರಳುಗಾರಿಗೆ ಮತ್ತೆ ಆರಂಭವಾಗಿದ್ದು ಇದಕ್ಕೆ ಶ್ರಮಿಸಿದ ಶಾಸಕ ಕೆ.ರಘುಪತಿ ಭಟ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದೆ. ಎಲ್ಲರಿಗೂ ಸುಲಭವಾಗಿ ಮರಳು ಸಿಗುವಂತಾಗಲು ಪ್ರಯತ್ನಿಸಲಾಗುವುದು. ಸಿಆರ್‌ಝಡ್‌ ಅಲ್ಲದ ಕುಂದಾಪುರ ಭಾಗದಲ್ಲಿ ಅ.16 ರಿಂದ ಮರಳು ತೆಗೆಯಲಾಗುವುದು ಎಂದರು.

ಈಗಾಗಲೇ ಸಚಿವರಾದ ಬಸವರಾಜ ಬೊಮ್ಮಾಯಿ, ಸಿಟಿ ರವಿ, ಶ್ರೀರಾಮುಲು, ಕೋಟ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಅನೇಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ 6 ಮಂಡಲ, 5 ವಿಧಾನಸಭಾ ಕ್ಷೇತ್ರಗಳಲ್ಲಿ ಈ ತಿಂಗಳಾಂತ್ಯದೊಳಗೆ ಸಾಂಸ್ಥಿಕ ಚುನಾವಣೆ ನಡೆಯಲಿದೆ ಎಂದರು.

Advertisement

ಮೀನುಗಾರಿಕ ಪ್ರಕೋಷ್ಠದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಬಿಜೆಪಿ ನಗರಾಧ್ಯಕ್ಷ ಪ್ರಭಾಕರ ಪೂಜಾರಿ, ಪ್ರಮುಖರಾದ ರವಿ ಅಮೀನ್‌, ಸಂಧ್ಯಾ ರಮೇಶ್‌, ಶಿವಕುಮಾರ್‌ ಅಂಬಲಪಾಡಿ, ಗುರುಪ್ರಸಾದ್‌ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next