Advertisement

ಮತ್ತಷ್ಟು ಮನೆಗಳಲ್ಲಿ ಮಳೆಕೊಯ್ಲು ಅಳವಡಿಕೆ, ನೀರಿನ ಸಮಸ್ಯೆಗೆ ಪರಿಹಾರ

11:56 PM Jul 20, 2019 | Sriram |

ಮಹಾನಗರ: “ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಮತ್ತಷ್ಟು ಜನರು ತಮ್ಮ ಮನೆಗಳಲ್ಲಿ ಮಳೆಕೊಯ್ಲು ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಮನೆಯಲ್ಲಿ ಈವರೆಗೆ ನೀರಿನ ಸಮಸ್ಯೆ ಉಂಟಾಗದಿದ್ದರೂ, ಜಾಗೃತಗೊಂಡು ಭವಿಷ್ಯದ ನೀರು ಉಳಿತಾಯಕ್ಕೆ ಜನ ಮುಂದಾಗಿರುವುದು ಪ್ರಶಂಸನೀಯ. ತಮ್ಮ ಮನೆಗಳಲ್ಲಿ ಅಳವಡಿಕೆಯೊಂದಿಗೆ ಇತರ ಮನೆಗಳಿಗೂ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತಿರುವುದು ಅಭಿಯಾನ ಮಾತ್ರವಲ್ಲ; ಜನರಿಗೆ ನೀರಿನ ಬಗ್ಗೆ ಇರುವ ಜಾಗೃತ ಮನೋಭಾವವನ್ನು ತಿಳಿಸುತ್ತದೆ.

Advertisement

ಅಭಿಯಾನದ ಉದ್ದೇಶವನ್ನು ಅರಿತು ತಮ್ಮ ಮನೆಗಳಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಧಾರ್ಮಿಕ ಕೇಂದ್ರಗಳು, ಸಂಘ-ಸಂಸ್ಥೆಗಳ ಪ್ರಮುಖರು ಸಂಘಟನಾತ್ಮಕವಾಗಿ ಜನರನ್ನು ಪ್ರೇರೇಪಿಸಲು ಮತ್ತು ಮಳೆಕೊಯ್ಲು ಅಳವಡಿಸಿಕೊಳ್ಳಲು ತೊಡಗಬೇಕು ಎಂಬುದಾಗಿ ಒಂದಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭವಿಷ್ಯದಲ್ಲಿ ನೆಮ್ಮದಿಯ ಬದುಕು
ಮಳೆನೀರಿನ ಇಂಗಿಸುವಿಕೆಯಿಂದಲೇ ಭವಿಷ್ಯದ ದಿನಗಳಲ್ಲಿ ನೆಮ್ಮದಿಯ ಬದುಕು ಎಂಬುದು ಪ್ರಸ್ತುತ ಪ್ರತಿಯೊಬ್ಬರಲ್ಲಿಯೂ ಜಾಗೃತಗೊಳ್ಳುತ್ತಿದೆ. ಅದಕ್ಕಾಗಿ ಉದಯವಾಣಿಯ”ಮನೆಮನೆಗೆ ಮಳೆಕೊಯ್ಲು’ ಅಭಿಯಾನದಲ್ಲಿ ವಿವಿಧ ಸಂಘ-ಸಂಸ್ಥೆಗಳೂ ಕೈಜೋಡಿಸುತ್ತಿವೆ.

ಎಂಸಿಕೆ ಅಸೋಸಿಯೇಶನ್‌ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಶ್ರೀ ಮಲ್ಲಿಕಾರ್ಜುನ ಸ್ವ ಸಹಾಯ ಸಂಘದ ವತಿಯಿಂದ ತೆಂಕಎಡಪದವು ಗ್ರಾಮದ ಕಣ್ಣೋರಿ ದರ್ಖಾಸ್‌ ಎಂಬಲ್ಲಿ ಪದ್ಮನಾಭ ಗೌಡ ಅವರ ಮನೆಯಿಂದ 50 ಮೀಟರ್‌ ದೂರದಲ್ಲಿರುವ ಸುಮಾರು 53 ವರ್ಷ ಹಳೆಯ ಸರಕಾರಿ ಬಾವಿಗೆ ಮಳೆಕೊಯ್ಲು ಅಳವಡಿಸಲಾಗಿದೆ.

“ಉದಯವಾಣಿ’ಯ ಮನೆ ಮನೆಗೆ ಮಳೆಕೊಯ್ಲು ಅಭಿಯಾನದಿಂದ ಪ್ರೇರಣೆಗೊಂಡು ಈ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಸುಮಾರು 8,000 ರೂ. ಖರ್ಚು ತಗಲಿದೆ. ಪ್ರತಿ ವರ್ಷ ಮಾರ್ಚ್‌-ಎಪ್ರಿಲ್‌ ತಿಂಗಳಿನಲ್ಲಿ ಇಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು ನೆರೆಹೊರೆಯ ಸುಮಾರು 20ರಿಂದ 25 ಮನೆಯವರು ಇದೇ ಬಾವಿಯನ್ನು ಆಶ್ರಯಿಸಬೇಕಾದ ಅನಿವಾರ್ಯವಿದೆ. ಈ ವರ್ಷ ಪದ್ಮನಾಭ ಗೌಡರು ತಮ್ಮ ಮನೆಯ ಟೆರೇಸಿಗೆ ಶೀಟು ಅಳವಡಿಸಿದ್ದು, ಅವರ ಹಾಗೂ ಪಂಚಾ¿ತ್‌ ಅನುಮತಿ ಮೇರೆಗೆ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಯಿತು.

Advertisement

ಅತ್ಯಂತ ಕಡಿಮೆ ವೆಚ್ಚದಲ್ಲಿ ಮಳೆ ಕೊಯ್ಲು ವ್ಯವಸ್ಥೆ
“ಮನೆ ಮನೆಗೆ ಮಳೆ ಕೊಯ್ಲು’ ಉದಯವಾಣಿ ಪತ್ರಿಕೆಯ ಪ್ರೇರಣೆಯಿಂದ ಕಿನ್ನಿಗೋಳಿ ಸಮೀಪದ ಬಳುRಂಜೆಯ ನಿವಾಸಿ ಫ್ರಾನ್ಸಿಸ್‌ ಮಿನೇಜಸ್‌ ಅವರು ತಮ್ಮ ಮನೆ ಅಂಗಳದ ಬಾವಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಮಳೆ ನೀರಿನ ಕೊಯ್ಲು ಅಳವಡಿಸಿದ್ದಾರೆ.

ಅವರು ಮನೆಯಲ್ಲಿ ಈ ಹಿಂದೆ ತಂದಿರಿಸಿದ್ದ ಪಿವಿಸಿ ಪೈಪ್‌ ಮೂಲಕ ಮನೆ ಛಾವಣಿಯ ಸಂಪೂರ್ಣ ನೀರನ್ನು ಬಾವಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ.

ಫ್ರಾನ್ಸಿಸ್‌ ಮಿನೇಜಸ್‌ ಮತ್ತು ಕುಟುಂಬದ ಸದಸ್ಯರು ತಮ್ಮ 1.5 ಎಕ್ರೆ ಜಮೀನಿನಲ್ಲಿ ಕೆಲವು ವರುಷಗಳ ಹಿಂದೆಯೇ ಸಾಂಪ್ರದಾಯಿಕ ರೀತಿಯಲ್ಲಿ ಮಳೆಗಾಲದ ಸಂಪೂರ್ಣ ನೀರನ್ನು ಇಂಗಿಸುವ ಕ್ರಮವನ್ನು ಅನುಸರಿಸಿ ಅಂತರ್ಜಲ ಮಟ್ಟ ಕಾಪಾಡಲು ವ್ಯವಸ್ಥೆ ಮಾಡಿದ್ದರು. ಹಾಗಾಗಿ ಅವರ ಕೃಷಿಗೆ ಸಾಕಷ್ಟು ನೀರು ಲಭ್ಯವಿದೆ. ಅವರು “ಜಲಯೋಧರ ಸಂಘ’ ಎಂಬ ತಂಡವನ್ನು ರಚಿಸಿಕೊಂಡಿದ್ದು, ಅದರ ಮೂಲಕ ತಮ್ಮ ಪರಿಸರದಲ್ಲಿ ಜಲ ಸಾಕ್ಷರತೆಯನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಪತ್ನಿ ಸಿಲ್ವಿಯಾ ಮರಿಯಾ ಮಿನೇಜಸ್‌ ಶಿಕ್ಷಕಿಯಾಗಿದ್ದು, ಅವರು ವಿದ್ಯಾರ್ಥಿಗಳಿಗೆ ಜಲ ಮತ್ತು ಪರಿಸರ ಸಂರಕ್ಷಣೆ ಮಾಡುವ ಬಗ್ಗೆ ಹೆಚ್ಚಿನ ಪ್ರೇರಣೆ ನೀಡುತ್ತಿದ್ದಾರೆ. ಈ ಕುಟುಂಬವು ಈಗಾಗಲೇ ಸೌರ ವಿದ್ಯುತ್‌ ಉತ್ಪಾದನೆ ಮಾಡಿ ಗೃಹ ಬಳಕೆಗೆ ಮಾತ್ರವಲ್ಲದೆ, ಮಿಗತೆ ವಿದ್ಯುತ್ತನ್ನು ಮೆಸ್ಕಾಂಗೆ ಮಾರಾಟ ಮಾಡುತ್ತಿದೆ. ಎಲ್ಲರೂ ಇದೇ ರೀತಿ ಮಾಡಿದರೆ ಉತ್ತಮ ಎಂಬುದು ಈ ಕುಟುಂಬದ ಆಶಯ.

 ಕೇವಲ 500 ರೂ. ವೆಚ್ಚ!
ಪತ್ನಿ ಸಿಲ್ವಿಯಾ ಮರಿಯಾ ಮಿನೇಜಸ್‌ ಮತ್ತು ಕುಟುಂಬದ ಸದಸ್ಯರ ಸಹಕಾರದಿಂದ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದು, ಇದಕ್ಕೆ ಈಗ ನಮಗೆ ತಗುಲಿರುವ ವೆಚ್ಚ ಕೇವಲ 500 ರೂ.ಮಾತ್ರ. ಏಕೆಂದರೆ ಇದಕ್ಕೆ ಉಪಯೋಗಿಸಿದ ಪಿ.ವಿ.ಸಿ. ಪೈಪ್‌ ಮತ್ತು ಟ್ಯಾಂಕ್‌ನ್ನು ನಾವು ಈ ಹಿಂದೆಯೇ ಖರೀದಿಸಿದ್ದೆವು. ಹಾಗಾಗಿ ನಾವು ಈಗಾಗಲೇ ಹೊಂದಿದ್ದ ಪರಿಕರಗಳನ್ನು ಉಪಯೋಗಿಸಿ ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಿದ್ದೇವೆ. ಪಿ.ವಿ.ಸಿ. ಪೈಪ್‌ ಮತ್ತು ಟ್ಯಾಂಕಿನ ಬೆಲೆಯನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಒಟ್ಟು ಖರ್ಚು 2,000 ರೂ. ಆಗ ಬಹುದು.
– ಫ್ರಾನ್ಸಿಸ್‌ ಮಿನೇಜಸ್‌

ನೀವೂ ಅಳವಡಿಸಿ,ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ
ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ.ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ

ಮಳೆಕೊಯ್ಲು ಅಭಿಯಾನ ಫಲಪ್ರದವಾಗಲಿ
“ಮಳೆಕೊಯ್ಲು ಅಭಿಯಾನ’ದ ಮೂಲಕ ಸಮಾಜಕ್ಕೆ ನೀರಿನ ಆವಶ್ಯಕತೆಯನ್ನು “ಉದಯವಾಣಿ’ ಪತ್ರಿಕೆ ತಿಳಿಸಿಕೊಡುತ್ತಿರುವುದು ಅಭಿನಂದನೀಯ. ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಮಾಹಿತಿ, ಫೋಟೋ, ಕಾರ್ಯಾಗಾರಗಳ ವರದಿಯಿಂದ ಪ್ರೇರಣೆ ಪಡೆದವರ ಅಭಿಪ್ರಾಯ, ಸಂಘ ಸಂಸ್ಥೆಗಳು, ಜಲಸಂಪನ್ಮೂಲ ರಕ್ಷಣೆಗೆ ಪಣ ತೊಡಲು ಸ್ಫೂರ್ತಿಯಾಗುತ್ತಿದೆ. ಸಮಾಜಮುಖೀ, ಪರಿಸರ ರಕ್ಷಣೆಯ ಅಭಿಯಾನವು ಫಲಪ್ರದವಾಗಲಿ.
-ಫಾ| ಮುಕ್ತಿ ಪ್ರಕಾಶ್‌,ಸಂತ ಜೋಸೆಫರ ಸೆಮಿನರಿ, ಮಂಗಳೂರು

ನೀರಿನ ಸಮಸ್ಯೆ
ನಿವಾರಣೆ
ನೀರಿನ ಸಮಸ್ಯೆ ಪರಿಹರಿಸಲು ಮನೆಮನೆಗೆ ಮಳೆಕೊಯ್ಲು ಅಭಿಯಾನ ರೂಪಿಸಿದ ಉದಯವಾಣಿಯ ಕ್ರಮ ಶ್ಲಾಘನೀಯ. ಸಂಘ-ಸಂಸ್ಥೆಗಳು, ದೇವಸ್ಥಾನದ ಆಡಳಿತ ಕಮಿಟಿಯುವರು ಆಸಕ್ತರ ಮನೆಗಳಲ್ಲಿ ಮಳೆಕೊಯ್ಲು ಮಾಡಿ ನೀರಿನ ಸಮಸ್ಯೆ ನೀಗಲು ಮುಂದಾದರೆ ಹೆಚ್ಚು ಉಪಯುಕ್ತ.
-ಎಂ. ದೇವದಾಸ್‌ ಶೆಟ್ಟಿ, ಜೆಪ್ಪು ಮೊರ್ಗನ್ಸ್‌ಗೆàಟ್‌

ಸರಕಾರವು ಮಳೆ ಕೊಯ್ಲಿಗೆ ಮುಂದಾಗಲಿ
“ಉದಯವಾಣಿ’ ಮನೆಮನೆಗೆ ಮಳೆಕೊಯ್ಲು ಅಭಿಯಾನವು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪ್ರೇರೇಪಿಸುತ್ತಿದೆ. ಈ ಅಭಿಯಾನ ಜನತೆಗೆ ಮಾತ್ರ ಸೀಮಿತವಾಗಬಾರದು. ಸರಕಾರದ ವತಿಯಿಂದ ಸರಕಾರಿ ಜಾಗದಲ್ಲಿ ಮಳೆಕೊಯ್ಲು ಮಾಡಿದರೆ ಮುಂದಿನ ದಿನಗಳಲ್ಲಿ ನೀರಿಗೆ ಬರಬಾರದು.
-ರೂಪೇಶ್‌ ಶೇಟ್‌,
ಡೊಂಗರಕೇರಿ

ಮಳೆಕೊಯ್ಲಿನಿಂದ ಅಂತರ್ಜಲ ಏರಿಕೆ
ಮನೆಮನೆಗೆ ಮಳೆಕೊಯ್ಲು “ಉದಯವಾಣಿ’ ಅಭಿಯಾನ ಉತ್ತಮ ಕಾರ್ಯಕ್ರಮವಾಗಿದೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಎದುರಾಗದಿರಲು ಮತ್ತು ಅಂತರ್ಜಲ ಏರಿಕೆಗೆ ಬೇಕಾದ ದಾರಿ ಮಳೆಕೊಯ್ಲು. ಈ ಅಭಿಯಾನವನ್ನು ಮಂಗಳೂರು ಮಾತ್ರವಲ್ಲದೆ, ಕರ್ನಾಟಕದ ಜನತೆಗೂ ತಿಳಿಯುವಂತೆ ರಾಜ್ಯಾದ್ಯಂತ ವಿಸ್ತರಿಸಿದರೆ ಉತ್ತಮ.
-ಸೌಮ್ಯಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next