ಭೋಪಾಲ್: ದೇಶದ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಇಂತಹ ಕಠಿಣ ಸಮಯದಲ್ಲಿ ಮೃತ ವ್ಯಕ್ತಿಯೊಬ್ಬರನ್ನು ಎದೆ ಮಟ್ಟದ ನೀರಿನಲ್ಲೇ ಹೊತ್ತೂಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ ಮಧ್ಯಪ್ರದೇಶದ ಗುಣ ಜಿಲ್ಲೆಯಲ್ಲಿನಡೆದಿದೆ.
ಭಾರೀ ಮಳೆಯಿಂದಾಗಿ ಇಲ್ಲಿನ ಭದೌರಾ ಗ್ರಾಮದ ರಸ್ತೆಯಲ್ಲಿ 2-3 ಅಡಿಯಷ್ಟು ನೀರು ನಿಂತಿತ್ತು. ಗ್ರಾಮದ ಕಮರ್ಲಾಲ್ ಶಾಕ್ಯಾವಾರ್ ಹೆಸ ರಿನ ವ್ಯಕ್ತಿ ಶುಕ್ರವಾರ ಅಸುನೀಗಿದ್ದು, ಅವರ ಅಂತ್ಯಸಂಸ್ಕಾರ ಮಾಡಲು ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗಬೇಕಿತ್ತು.
ನಾಲ್ಕೈದು ತಾಸುಗಳ ಕಾಲ ಕಾದರೂ ನೀರು ಇಳಿಯದ ಹಿನ್ನೆಲೆಯಲ್ಲಿ ಈಜು ಬರುವವರು ಮಾತ್ರ ನೀರಿನಲ್ಲಿ ಶವ ಹೊತ್ತೂಯ್ದು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
ಇದನ್ನೂ ಓದಿ:ಬಾರ್ಸಿಲೋನಾಗೆ ಮೆಸ್ಸಿ ಭಾವುಕ ವಿದಾಯ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.