Advertisement

ಕೋವಿಡ್‌ ಶವಗಳ ಅಂತ್ಯ ಸಂಸ್ಕಾರ: ಶ್ಲಾಘನೆ

08:04 PM May 07, 2021 | Team Udayavani |

ಆಲೂರು: ಸಮಾಜದಲ್ಲಿ ತುಂಬಿಹೋಗಿರುವ ಜಾತಿ, ಜಾತಿ ಎಂಬ ಕೆಟ್ಟವಿಷ ಬೀಜವನ್ನು ಕಿತ್ತೂಗೆದು, ಮನುಷ್ಯಎಂಬ ಭಾವನೆಯಲ್ಲಿ ಬದುಕಿಎಂಬುದಕ್ಕೆ, ಆಲೂರು ಪಪಂ ಸದಸ್ಯ ಸ್ನೇಕ್‌ ಬಾಬು ಕೋಂ ಅಬ್ದುಲ್‌ಖುದ್ದೂಸ್‌ ಅವರ ಸೇವೆ ಶ್ಲಾಘನೀಯ.ಉಸಿರು ಇದ್ದಾಗಲೂ ನಿಂತರೂಯಾವುದೇ ಜಾತಿ ಇರುವುದಿಲ್ಲಎಂಬುದನ್ನು ಸಾಬೀತು ಪಡಿಸಿದ್ದಾರೆ.

Advertisement

ವೃತ್ತಿಯಲ್ಲಿ ಜೀವನಕ್ಕಾಗಿಸೈಕಲ್‌ ಷಾಪ್‌ ಹೊಂದಿರುವಸ್ನೇಕ್‌ ಬಾಬು ಸುಮಾರು 20ವರ್ಷಗಳಿಂದ ಮನೆ, ಇನ್ನಿತರೆಜಾಗಗಳಲ್ಲಿ ಹೊಕ್ಕಿದ್ದಹಾವುಗಳನ್ನು ಹಿಡಿದು ಕಾಡಿಗೆ ಬಿಡುವಕಾರ್ಯದಲ್ಲಿ ತೊಡಗಿಕೊಂಡಿದ್ದರಿಂದ,ಇವರಿಗೆ ಸ್ನೇಕ್‌ ಬಾಬು ಎಂದುಕರೆಯಲಾಯಿತು.ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿಕೋವಿಡ್‌ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯನ್ನು, ಕೆಂಚಮ್ಮನ ಹೊಸಕೋಟೆ ಅವರಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುವ ಮೂಲಕ ಮನುಷ್ಯ ಕುಲ ವೊಂದೇಎಂಬುದನ್ನು ಸಾಬೀತುಪಡಿಸಿದರು. ವಿಶೇಷವೆಂದರೆಮೃತಪಟ್ಟ ವ್ಯಕ್ತಿ ಅನ್ಯಕೋಮಿಗೆ ಸೇರಿದವರು. ಸ್ನೇಕ್‌ಬಾಬು ತಮ್ಮನ್ನು ಸೇರಿದಂತೆ ಮುಕ್ತಿಯಾರ್‌, ಅಯೂಬ…,ಮುವåಾ¤ಜ್‌ ನಾಲ್ಕು ಜನರ ತಂಡವನ್ನುರಚಿಸಿಕೊಂಡಿದ್ದಾರೆ.

ಹಾದಿ ಹೋಕರು,ಮಾನಸಿಕ ಅಸ್ವಸ್ಥರು ಅಡ್ಡಾಡುತ್ತಿದ್ದನ್ನುಗಮನಿಸಿ, ಅವರನ್ನು ಹಿಡಿದು ಶುಚಿಗೊಳಿಸಿ ಎಲ್ಲರಂತೆ ಬದುಕಲು ಅವಕಾಶ ಕಲ್ಪಿಸಿಕೊಡುವುದರಲ್ಲೂ ಮುಂದಿದ್ದಾರೆ. ವಿಶೇಷವೆಂದರೆ ಇವರು ಮಾಡುವಯಾವುದೇ ಕಾರ್ಯಕ್ಕೆ ಹಣ ಪಡೆಯಲ್ಲ. ಸಮಾಜದಲ್ಲಿ ಇಂತಹವರು ಅನಿವಾರ್ಯವಾಗಿದ್ದಾರೆ. ಮೀಸಲಾತಿ ಅನುಸಾರ ವಾಗಿ ಇವರು ಅನಿವಾರ್ಯವಾಗಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದರು. ಒಂದು ರೂಪಾಯಿಖರ್ಚು ಮಾಡದೆ, ಮತದಾರರು ಇವರನ್ನು ಬೆಂಬಲಿಸಿದರು. ಪಟ್ಟಣಪಂಚಾಯಿತಿ ಸದಸ್ಯ ಎಂಬ ಅಹಂತೋರದೆ ಇಂತಹ ಸಮಾಜ ಸೇವೆಯಲ್ಲಿ ತೊಡಗಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಟಿ.ಕೆ.ಕುಮಾರಸ್ವಾಮಿ ಆಲೂರು

Advertisement

Udayavani is now on Telegram. Click here to join our channel and stay updated with the latest news.

Next