Advertisement
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಭೂತಾನ್‌ನ ಪ್ರಧಾನಿ ಶೆರಿಂಗ್ ಟೋಬ್ಗೆ, ಬಿಜೆಪಿಯ ಧುರೀಣ ಎಲ್.ಕೆ. ಆಡ್ವಾಣಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕ ಗುಲಾಂ ನಬಿ ಆಜಾದ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಆನಂದ್ ಶರ್ಮಾ, ಎನ್‌ಡಿಎಯ ನಾಯಕರು ಹಾಗೂ ಸುಷ್ಮಾ ಅವರ ಸಾವಿರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.Related Articles
Advertisement
ದಾದಿಗಳ ನೆನೆಕೆಐದು ವರ್ಷಗಳ ಹಿಂದೆ ಕೇರಳದ ದಾದಿಯರ ಗುಂಪು ಇರಾಕ್‌ನಲ್ಲಿ ಐಸಿಸ್ ಉಗ್ರ ಸಂಘಟನೆಯಿಂದ ಅಪಹರಣಕ್ಕೆ ಒಳಗಾಗಿದ್ದ ವೇಳೆ ಅವರ ಬಿಡುಗಡೆಗೆ ಸುಷ್ಮಾ ಶ್ರಮ ವಹಿಸಿದ್ದು ಅವರ ಮನಸ್ಸಿನಲ್ಲಿ ಇನ್ನೂ ಇದೆ. ಮಾಜಿ ಸಚಿವೆಯ ಅಕಾಲಿಕ ನಿಧನದಿಂದ 46 ಮಂದಿ ದಾದಿಯರು ಹಾಗೂ ಅವರ ಕುಟುಂಬ ಸದಸ್ಯರೀಗ ದುಃಖೀತರಾಗಿದ್ದಾರೆ. ಆ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿಯಾಗಿದ್ದ ಊಮ್ಮನ್ ಚಾಂಡಿ ಕೂಡ ನರ್ಸ್‌ಗಳ ಬಿಡುಗಡೆಗಾಗಿ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ್ದಾಗ ಸೂಕ್ತವಾಗಿ ಸ್ಪಂದಿಸಿದ್ದರು ಎಂದು ನೆನಪಿಸಿ ಕೊಂಡರು. ತಡರಾತ್ರಿಯಲ್ಲಿ ಪರಿಸ್ಥಿತಿ ವಿವರಿಸಿ ಫೋನ್ ಮಾಡಿದ್ದೆ. ಯಾವುದೇ ರೀತಿಯಲ್ಲಿ ಚಿಂತೆ ಮಾಡುವುದು ಬೇಡ ಎಂದು ಅವರು ಭರವಸೆ ನೀಡಿದ್ದರು. ಸೂಕ್ತ ವ್ಯವಸ್ಥೆ ಮಾಡುವ ಬಗ್ಗೆ ಪರಿಶೀಲಿಸಿ 15 ನಿಮಿಷದಲ್ಲಿ ಮತ್ತೆ ಫೋನ್ ಮಾಡುವುದಾಗಿ ಹೇಳಿ ಅದರಂತೆಯೇ ನಡೆದುಕೊಂಡಿದ್ದರು ಎಂದು ಚಾಂಡಿ ದುಃಖೀಸಿದರು. ಅವಿರತ ಶ್ರಮದ ಬಳಿಕ 2014ರ ಜುಲೈನಲ್ಲಿ ಎಲ್ಲರೂ ಸುರಕ್ಷಿತವಾಗಿ ಬಿಡುಗಡೆಯಾದರು ಎಂದು ನೆನಪಿಸಿಕೊಂಡಿದ್ದಾರೆ. ತಂದೆ, ಮಗಳ ವಿದಾಯದ ಸೆಲ್ಯೂಟ್
ಸುಷ್ಮಾ ಸ್ವರಾಜ್ ಪಾರ್ಥಿವ ಶರೀರವನ್ನು ಬುಧವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಈ ವೇಳೆ ಸುಷ್ಮಾ ಪಾರ್ಥಿವ ಶರೀರದ ಬಳಿಯೇ ಪತಿ ಸ್ವರಾಜ್ ಕೌಶಲ್ ಹಾಗೂ ಪುತ್ರಿ ಬಾನ್ಸುರಿ ಕೂಡ ನಿಂತಿದ್ದರು. ದಶಕಗಳವರೆಗೆ ಜೊತೆಯಿದ್ದ ಪತ್ನಿಯನ್ನು ಕಳೆದುಕೊಂಡ ನೋವು ಸ್ವರಾಜ್ ಕೌಶಲ್ ಮುಖದಲ್ಲಿ ಕಾಣಿಸು ತ್ತಿದ್ದರೆ, ಇಡೀ ದೇಶಕ್ಕೆ ಹೆಮ್ಮೆಯಾಗಿದ್ದ ಅಮ್ಮನನ್ನು ಕಳೆದುಕೊಂಡು ಅನಾಥ ಭಾವ ಪುತ್ರಿ ಬಾನ್ಸುರಿಯ ಮುಖದಲ್ಲಿತ್ತು. ಇನ್ನೇನು ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಸ್ವರಾಜ್ ಕೌಶಲ್, ಪುತ್ರಿ ಬಾನ್ಸುರಿ ವಿದಾಯ ಸೆಲ್ಯೂಟ್ ನೀಡಿದರು. ದೀನ ದಯಾಳ ಉಪಾಧ್ಯಾಯ ಮಾರ್ಗದ ಮೂಲಕ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಈ ವೇಳೆಯೂ ಇಬ್ಬರೂ ಕಣ್ಣಲ್ಲಿ ನೀರು ತುಂಬಿಕೊಂಡೇ ಜೊತೆ ಸಾಗಿದರು.
ಸುಷ್ಮಾ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ “ಅವರ ಅಗಲುವಿಕೆ ಗಾಢವಾಗಿ ಕಾಡುತ್ತಿದೆ’ ಎಂದು ಹೇಳಿದ್ದಾರೆ. ಸುಷ್ಮಾರ ಪತಿ ಸ್ವರಾಜ್ ಕೌಶಲ್ ರಿಗೆ ಬರೆದಿರುವ ಪತ್ರದಲ್ಲಿ “ಉತ್ತಮ ವಾಗ್ಮಿ, ಸಂಸದೀಯ ಪಟು ಹಾಗೂ ಹಲವಾರು ಪ್ರತಿಭೆಗಳ ಸಂಗಮವಾಗಿದ್ದ, ನಿಮ್ಮ ಪ್ರೀತಿಯ ಮಡದಿ ಸುಷ್ಮಾ ಅವರು ಇನ್ನಿಲ್ಲ ಎಂದು ಕೇಳಿ ಮನಸ್ಸಿಗೆ ತೀವ್ರ ಬೇಸರವಾಯಿತು. ಸಾರ್ವಜನಿಕ ಸೇವೆಯಲ್ಲಿ ಅವರು ತೋರುತ್ತಿದ್ದ ಶ್ರದ್ಧೆ, ಕಾಳಜಿ, ಸಮರ್ಪಣಾ ಭಾವ ಅನುಕರಣೀಯ. ಪ್ರತಿಯೊಂ ದು ಹುದ್ದೆಗೂ ನ್ಯಾಯ ಒದ ಗಿಸಿದ ಧೀಮಂತೆ ಅವರು. ಅವರ ಅಗಲುವಿಕೆ ಗಾಢ ವಾಗಿ ಕಾಡುತ್ತಿದೆ’ ಎಂದಿದ್ದಾರೆ. “ರಾಜಕೀಯ ಹೊರತಾಗಿಯೂ ಉತ್ತಮ ವ್ಯಕ್ತಿತ್ವ ಹೊಂದಿದ್ದರಿಂದಾಗಿ ಅವರು, ತಮ್ಮ ಸಾರ್ವಜನಿಕ ಸೇವೆಗೂ ಒಂದು ವರ್ಚಸ್ಸನ್ನು ತಂದಿದ್ದರು’ ಎಂದಿದ್ದಾರೆ ಸೋನಿಯಾ. ವಿಶ್ವನಾಯಕರ ಕಂಬನಿ
ಸುಷ್ಮಾ ಸ್ವರಾಜ್ ನಿಧನಕ್ಕೆ ಭಾರತದ ನಾಯಕರು ಮಾತ್ರವಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಇರಾನ್ ವಿದೇಶಾಂಗ ಸಚಿವ ಜಾವೇದ್ ಜಾಫ್ರಿ, ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಮಾರ್ ಎ ಫರ್ನಾಂಡ ಎಸ್ಪಿನೋಸಾ ಸೇರಿದಂತೆ ಹಲವಾರು ಮಂದಿ ಇತರ ರಾಷ್ಟ್ರಗಳ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಉತ್ತಮ ಸ್ನೇಹಿತೆಯನ್ನು ಕಳೆದುಕೊಂಡಿದ್ದಾಗಿ ಹೇಳಿದ್ದಾರೆ. ಇರಾನ್‌ಗೆ ಭೇಟಿ ನೀಡಿದ್ದ ವೇಳೆ ಸ್ವರಾಜ್ ಜತೆಗೆ ಉತ್ತಮ ರೀತಿಯಲ್ಲಿ ಮಾತುಕತೆಗಳು ನಡೆದಿದ್ದವು ಎಂದು ಸಚಿವ ಜಾವೇದ್ ಜಾಫ್ರಿ ಹೇಳಿಕೊಂಡಿದ್ದಾರೆ. ಬಹ್ರೈನ್‌ನ ವಿದೇಶಾಂಗ ಸಚಿವ ಖಾಲಿದ್ ಬಿನ್ ಅಹ್ಮದ್ ಅಲ್ ಖಲೀಫಾ “ನನ್ನ ಸಹೋದರಿಯೇ, ಬಹ್ರೈನ್ ಮತ್ತು ಭಾರತ ನಿಮ್ಮನ್ನು ಕಳೆದುಕೊಂಡಿದೆ. ನಿಮ್ಮ ಆತ್ಮಕ್ಕೆ ಶಾಂತಿ ಲಭಿಸಲಿ’ ಎಂದಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದಿಲ್ಲ 2018 ನವೆಂಬರ್‌ನಲ್ಲಿ ಎಂದು ಸುಷ್ಮಾ ನಿರ್ಧರಿಸಿದ್ದಾಗ ಸರಣಿ ಟ್ವೀಟ್‌ಗಳ ಮೂಲಕ ಪತಿ ಸ್ವರಾಜ್ ಕೌಶಲ್ ಪತ್ನಿಯ ರಾಜಕೀಯ ಜೀವನದ ಬಗ್ಗೆ ಬರೆದಿದ್ದರು. ಮೇಡಂ, ಇನ್ನು ಚುನಾವಣೆಗೆ ಸ್ಪರ್ಧಿಸದೇ ಇರುವ ನಿಮ್ಮ ನಿರ್ಧಾರಕ್ಕೆ ಧನ್ಯವಾದ ಗಳು. ಮಿಲ್ಕಾ ಸಿಂಗ್ ಕೂಡ ಒಂದು ದಿನ ಓಟ ನಿಲ್ಲಿಸಿದ್ದರು. 47 ವರ್ಷ ಗಳು ಸಂದಿವೆ. ನೀವು 11 ನೇರ ಚುನಾವಣೆಗೆ ಸ್ಪರ್ಧಿಸಿದ್ದೀರಿ. 1977ರ ನಂತರ 1991 ಹಾಗೂ ಕಳೆದ 46 ವರ್ಷಗಳಿಂದ ನಾನು ನಿಮ್ಮ ಹಿಂದೆ ಓಡುತ್ತಿದ್ದೇನೆ. ನಾನು ಇನ್ನೂ 19 ವರ್ಷದ ಹುಡುಗನಲ್ಲ. ನನ್ನ ಉಸಿರೂ ಉಡುಗುತ್ತಿದೆ ಧನ್ಯವಾದಗಳು ಎಂದಿದ್ದರು. ವರ್ಷದಲ್ಲಿ 3 ಮಾಜಿ ಸಿಎಂಗಳ ಸಾವು
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಮೂವರು ನಾಯಕರು ಒಂದೇ ವರ್ಷದ ಅವಧಿಯಲ್ಲಿ ಕೊನೆಯುಸಿರೆಳೆದಿದ್ದಾರೆ. 1998ರ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಗೆ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಯಾಗಿದ್ದವರು ಮಂಗಳವಾರ ನಿಧನರಾಗಿದ್ದಾರೆ. ಜು. 20ರಂದು 15 ವರ್ಷಗಳ ಕಾಲ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರು ನಿಧನರಾಗಿದ್ದರು. 1993-1996ರ ವರೆಗೆ ಮುಖ್ಯಮಂತ್ರಿಯಾಗಿದ್ದ ಮದನ್ ಲಾಲ್ ಖುರಾನ 2018ರ ಅಕ್ಟೋಬರ್‌ನಲ್ಲಿ ಕೊನೆಯುಸಿರೆಳೆದಿದ್ದರು. ಗದ್ಗದಿತರಾದ ಪಿಎಂ ಮೋದಿ
ಸುಷ್ಮಾ ಸ್ವರಾಜ್‌ರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಗದ್ಗದಿತರಾದರು. ಪ್ರಧಾನಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ನಂತರ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸ್ವರಾಜ್, ಪುತ್ರಿ ಬಾನ್ಸುರಿಗೆಗೆ ಸಾಂತ್ವನ ಹೇಳುವಾಗ ಕಂಬನಿ ಮಿಡಿದರು. ಹೆಗಲು ಕೊಟ್ಟರು: ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರಕ್ಕಾಗಿ ಲೋಧಿ ಗಾರ್ಡನ್‌ಗೆ ಬಿಜೆಪಿ ಕಚೇರಿಯಿಂದ ಕೊಂಡೊಯ್ಯುವಾಗ, ಆಡ್ವಾಣಿ, ಅವರ ಪುತ್ರಿ ಪ್ರತಿಭಾ ಆಡ್ವಾಣಿ, ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯೆಲ್ ಹಾಗೂ ಇನ್ನಿತರ ನಾಯಕರು ಹೆಗಲು ಕೊಟ್ಟರು. ನಾನು ಸಂಸತ್ ಸದಸ್ಯನಾಗಿದ್ದ ಅವಧಿಯಲ್ಲಿ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದೆ. ಪಕ್ಷದ ಪರಿಧಿಗಳನ್ನು ಮೀರಿದ್ದ ಅಪರೂಪದ ನಾಯಕಿ. ಪಕ್ಷಾತೀತವಾಗಿ ಎಲ್ಲರ ಗೌರವ ಸಂಪಾದಿಸಿದ್ದರು. ಅವರ ಸೇವೆಯನ್ನು ದೇಶ ಸದಾ ನೆನಪಿನಲ್ಲಿ ಇಟ್ಟು ಕೊಳ್ಳುತ್ತದೆ. ಅವರ ನಿಧನಕ್ಕೆ ನನ್ನ ಸಂತಾಪಗಳು.
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ಅವರು ನಮ್ಮನ್ನು ಇಷ್ಟು ಬೇಗ ಅಗಲುತ್ತಾರೆ ಎಂದು ಊಹಿಸಲೂ ಆಗುತ್ತಿಲ್ಲ. ಅವರು ಸದಾ ಜನರಿಗೆ ಸಹಾಯಹಸ್ತ ನೀಡುತ್ತಿದ್ದರು. ಹಮೀದ್ ಅನ್ಸಾರಿ, ಸರಬ್ಜಿತ್, ಗೀತಾ ಅಥವಾ ಜಾಧವ್ ಯಾರೇ ಆಗಿರಲಿ ಸುಷ್ಮಾ ಅವರ ನೆರವಿಗೆ ಧಾವಿಸಿದ್ದರು.
ದಲ್ಬಿರ್ ಕೌರ್, ಸರಬ್ಜಿತ್ ಸಿಂಗ್ ಸಹೋದರಿ