Advertisement

“ರೂಪಾಯಿ ಕುಸಿಯುತ್ತಿಲ್ಲ, ಡಾಲರ್‌ ಮೌಲ್ಯ ಹೆಚ್ಚುತ್ತಿದೆ’: ಸಚಿವೆ ನಿರ್ಮಲಾ ಸೀತಾರಾಮನ್‌

09:10 PM Oct 16, 2022 | Team Udayavani |

ವಾಷಿಂಗ್ಟನ್‌: ಭಾರತದ ರೂಪಾಯಿ ಮೌಲ್ಯದಲ್ಲಿ ಕುಸಿತ ಉಂಟಾಗುತ್ತಿಲ್ಲ. ಆದರೆ ಅಮೆರಿಕದ ಡಾಲರ್‌ ಮೌಲ್ಯದಲ್ಲಿ ಏರಿಕೆ ಕಾಣುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿರುವ ಬೆನ್ನಲ್ಲೇ ಸಚಿವೆ ಈ ಹೇಳಿಕೆ ಕೊಟ್ಟಿದ್ದಾರೆ.

Advertisement

ಅಮೆರಿಕದ ವಾಷಿಂಗ್ಟನ್‌ನಲ್ಲಿ ಅಂತಾರಾಷ್ಟ್ರಿಯ ಹಣಕಾಸು ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ ಅವರು ಅಲ್ಲಿನ ಸುದ್ದಿಗಾರರೊಂದಿಗೆ ಈ ಮಾತನ್ನಾಡಿದ್ದಾರೆ. “ಭಾರತ ಮಾತ್ರವಲ್ಲ, ಹಲವು ರಾಷ್ಟ್ರಗಳು ಡಾಲರ್‌ ಎದುರು ಗಟ್ಟಿಯಾಗಿ ನಿಲ್ಲಲು ಹೋರಾಡುತ್ತಿವೆ. ಭಾರತ ಈ ವಿಚಾರದಲ್ಲಿ ಹಲವು ರಾಷ್ಟ್ರಗಳಿಗಿಂತ ಉತ್ತಮ ಮಟ್ಟದಲ್ಲಿದೆ’ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಶೇ.8ರಷ್ಟು ಕುಸಿತಗೊಂಡ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ನಿರ್ಮಲಾ ಈ ರೀತಿ ಉತ್ತರಿಸಿದ್ದಾರೆ.

ಇದೇ ವೇಳೆ ಜಾರಿ ನಿರ್ದೇಶನಾಲಯವು ಸರ್ಕಾರದ ನಿರ್ದೇಶನದಲ್ಲಿದೆ ಎನ್ನುವ ಆರೋಪದ ಬಗ್ಗೆ ಬಗ್ಗೆ ಮಾತನಾಡಿದ ಸಚಿವೆ, “ಇ.ಡಿ ಸಂಪೂರ್ಣವಾಗಿ ಸ್ವತಂತ್ರವಾದದ್ದು. ಬೇರೊಂದು ಏಜೆನ್ಸಿ ತೆಗೆದುಕೊಂಡಿರುವ ಪ್ರಕರಣಕ್ಕೇ ಇ.ಡಿ ಆಗಮನವಾಗುತ್ತದೆಯೇ ಹೊರತು ಪ್ರಕರಣ ಮೊದಲನೇ ಹಂತದಲ್ಲೇ ಇ.ಡಿ ಅಲ್ಲಿರುವುದಿಲ್ಲ. ಆದರೆ ಒಮ್ಮೆ ಈ ಇಲಾಖೆಯ ಕೈ ಸೇರಿದರೆ ಅಲ್ಲಿ ಬಲವಾದ ಸಾಕ್ಷಿ ಇದ್ದೇ ಇರುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next