Advertisement

ಕುಣಗಳ್ಳಿಯಲ್ಲಿ ಮೂಲಭೂತ ಸಮಸ್ಯೆಗಳ ಸರಮಾಲೆ

09:14 PM Jun 25, 2019 | Lakshmi GovindaRaj |

ಕೊಳ್ಳೇಗಾಲ: ಸರ್ಕಾರಗಳು ಹಳ್ಳಿಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ.ಗಳನ್ನು ವ್ಯಯಿಸಿದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಕುಣಗಳ್ಳಿ ಗ್ರಾಮವೇ ಸಾಕ್ಷಿಯಾಗಿದ್ದು ಎಲ್ಲೆಡೆ ಸಮಸ್ಯೆಗಳ ಸರಮಾಲೆಯೇ ತಾಂಡವವಾಡುತ್ತಿದೆ.

Advertisement

ತಾಲೂಕಿನ ಕುಣಗಳ್ಳಿ ಗ್ರಾಪಂ ಹೊಂದಿದೆ. ಅಲ್ಲದೇ, ತಾಪಂ ಕ್ಷೇತ್ರವನ್ನು ಹೊಂದಿರುವ ಬಹುದೊಡ್ಡ ಗ್ರಾಮದಲ್ಲಿ ಅನೇಕ ಸಮಾಜದವರು ವಾಸಮಾಡುವ ಗ್ರಾಮದಲ್ಲಿ ಸಮಸ್ಯೆಗಳು ಗ್ರಾಮದುದ್ದಕ್ಕೂ ಹರಡಿವೆ.

ಗ್ರಾಪಂ ಕಾರ್ಯಾಲಯ ಇದ್ದರೂ ಗ್ರಾಮದಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಲ್ಲ. ಗ್ರಾಮದಲ್ಲಿ ಜಿಪಂ ನಿಂದ ನಿರ್ಮಿಸಿರುವ 20ಕ್ಕೂ ಹೆಚ್ಚು ಕುಡಿಯುವ ನೀರಿನ ಮಿನಿ ತೊಂಬೆಗಳಿದ್ದರೂ ನಿರ್ವಹಣೆ ಕೊರತೆಯಿಂದ ಬಹುತೇಕ ತೊಂಬೆಗಳು ಬಿಸಿಲಿದೆ ಒಣಗಿ ನಿಂತಿವೆ.

ಗ್ರಾಮದಲ್ಲಿ ಅತ್ಯಂತ ಹಿಂದುಳಿದ ಸಮುದಾಯಗಳಾದ ದಲಿತರು, ಉಪ್ಪಾರ, ಬೋವಿ, ನಾಯಕರು, ಬಣಜಿಗ ಸಮುದಾಯದವರು ವಾಸವಿದ್ದಾರೆ. ಗ್ರಾಮದಲ್ಲಿ ಬೋವಿ ಸಮಾಜದ ಬೀದಿಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿರುವ ಹಿನ್ನೆಲೆಯಲ್ಲಿ ಪಕ್ಕದಲ್ಲೇ ಇರುವ ಉಪ್ಪಾರ ಸಮುದಾಯ ಬೀದಿಯಿಂದ ತೆಗೆದುಕೊಂಡು ಬಳಕೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಉಪ್ಪಾರ ಸಮಾಜದ ಬೀದಿಯಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ಇಲ್ಲದೆ ಗ್ರಾಮಸ್ಥರು ದಿನಬಳಕೆ ಮಾಡಿದ ಕೊಳಚೆ ನೀರು ಹರಿದು ಮನೆಯ ಮುಂಭಾಗ ಮತ್ತು ರಸ್ತೆ ಬದಿಯಲ್ಲಿ ಶೇಖರಣೆಗೊಂಡು ಸೊಳ್ಳೆ ಮತ್ತು ಕ್ರಿಮಿಕೀಟಗಳಿಂದ ಸಂಕಟಪಡುತ್ತಿದ್ದರೂ ಗ್ರಾಪಂನ ಅಧಿಕಾರಿಗಳು ಸೂಕ್ತ ಕ್ರಿಮಿನಾಶಕ ಔಷಧಿ ಸಿಂಪಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

Advertisement

ತಾಲೂಕಿನ ಸ್ಥಳೀಯ ಸಂಸ್ಥೆಗಳಾದ ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ನಿವಾರಣೆ ಮಾಡಿ ಗ್ರಾಮೀಣ ಅಭಿವೃದ್ಧಿಗೆ ಸ್ಪಂದಿಸಬೇಕಾಗಿದೆ.

ಗ್ರಾಮದ ಕಪ್ಪಣ್ಣಶೆಟ್ಟಿ ಮಾತನಾಡಿ, ಒಂದು ಕಣ್ಣಿಗೆ ಬೆಣ್ಣೆ ಮತ್ತೂಂದು ಕಣ್ಣಿಗೆ ಸುಣ್ಣ ಎನ್ನುವ ಗಾದೆ ಮಾತಿನಂತೆ ಗ್ರಾಪಂ ಅಧಿಕಾರಿಗಳು ಒಂದು ಸಮಾಜದ ಬೀದಿಯನ್ನು ಕಡೆಗಣಿಸಿ ಮತ್ತೂಂದು ಸಮಾಜದ ಬೀದಿಗಳಿಗೆ ಎಲ್ಲಾ ತರಹದ ಮೂಲ ಸೌಕರ್ಯ ಕಲ್ಪಿಸುತ್ತಾರೆ ಎಂದು ತಿಳಿಸಿದ್ದಾರೆ.

ಕುಣಗಳ್ಳಿ ಗ್ರಾಪಂ ವಿವಿಧ ಸಮಾಜದ ಬೀದಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಕೂಡಲೇ ಸಂಬಂಧಿಸಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತರಲಾಗುವುದು. ಅಲ್ಲದೇ, ಕುಡಿಯುವ ನೀರು ಪೂರೈಕೆ ಹಾಗೂ ಸ್ವತ್ಛತೆಗೆ ಆದ್ಯತೆ ನೀಡಲು ಸಲಹೆ ನೀಡಲಾಗುವುದು.
-ಉಮೇಶ್‌, ತಾಪಂ ಇಒ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next