ಬೀದರ: ಖಾಸಗಿ ಶಾಲೆಗಳ ಉಳಿವಿಗಾಗಿಒಂದು ಸಾವಿರ ಕೋಟಿ ರೂ.ಆರ್ಥಿಕ ಸಹಾಯ ಧನ ಬಿಡುಗಡೆಮಾಡುವುದು ಸೇರಿದಂತೆ ವಿವಿಧಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿಕಲ್ಯಾಣ ಕರ್ನಾಟಕ ಅನುದಾನ ರಹಿತಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿಪ್ರತಿಭಟನೆ ನಡೆಸಲಾಯಿತು.
ಸಂಘದ ರಾಜೇಂದ್ರ ಮಣಗೇರೆನೇತೃತ್ವದಲ್ಲಿ ನಗರದ ಡಿಸಿ ಕಚೇರಿಎದುರು ಪ್ರತಿಭಟನೆ ನಡೆಸಿದ ನಂತರಸಿಎಂಗೆ ಬರೆದ ಮನವಿ ಪತ್ರವನ್ನುಎಡಿಸಿಗೆ ಸಲ್ಲಿಸಿದರು. ಒಂದು ಕಡೆಕೋವಿಡ್ -19 ನಿಂದ ಖಾಸಗಿಶಾಲೆಗಳು ತತ್ತರಿಸಿದ್ದರೆ ಮತ್ತೂಂದೆಡೆಗಾಯದ ಮೇಲೆ ಬರೆ ಎಳೆದಂತೆಶಿಕ್ಷಣ ಇಲಾಖೆಯು ಖಾಸಗಿ ಶಾಲೆಯಅಸ್ತಿತ್ವವನ್ನೇ ಕಸಿದ್ದು ಕೊಳ್ಳುವಂತಹಸುತೋಲೆಗಳನ್ನು ಹೊರಡಿಸುತ್ತಿದೆ ಎಂದ ಕಿಡಿಕಾರಿದರು.
ಕೋವಿಡ್ ಹಿನ್ನೆಲೆ ಖಾಸಗಿ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರಿಗೆ ಸಹಾಯವಾಗುವಂತೆಸಾವಿರ ಕೋಟಿ ಆರ್ಥಿಕ ಸಹಾಯಧನವನ್ನು ಬಿಡುಗಡೆ ಮಾಡಬೇಕು. ಶಾಲಾಕಾಮಗಾರಿಗಳಿಗಾಗಿ ಬ್ಯಾಂಕ್‌ನಿಂದಪಡೆದಿರುವ ಸಾಲ ಪಾವತಿಗೆ ಒಂದುವರ್ಷ ಮುಂದೂಡ ಬೇಕು. 1995ರಿಂದ2010ರವರೆಗೆ ಪ್ರಾರಂಭಿಸಿದ ಅನುದಾನ ರಹಿತ ಶಾಲೆಗಳನ್ನುಅನುದಾನ ಸಹಿತ ಶಾಲೆಗಳನ್ನಾಗಿ ಪರಿವರ್ತಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ನವೀಕರಣವನ್ನು ಐ.ಸಿ.ಎಸ್ .ಇ. ಮತ್ತು ಸಿ.ಬಿ.ಎಸ್.ಇ. ಶಾಲೆಗಳ ಮಾದರಿಯಲ್ಲಿ ತಾಲೂಕು ಹಂತದಲ್ಲಿಅದಾಲತ್ ನಡೆಸಿ ನವೀಕರಿಸಿ ಪ್ರಮಾಣಪತ್ರವನ್ನು ನೀಡಬೇಕು. ಆರ್‌ಟಿಇ ಕಾಯ್ದೆ ಮುಂದುವರೆಸಬೇಕು. ಆರ್.ಟಿ.ಇ. ಹಣವನ್ನು ಶಾಲೆಯ ಪ್ರಾರಂಭಿಕ ಹಂತದಲ್ಲಿಯೇ ಒಂದೇ ಕಂತಿನಲ್ಲಿ ಶಾಲೆಗಳಿಗೆ ಬಿಡುಗಡೆಗೊಳಿಸಬೇಕುಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.
ಪ್ರಮುಖರಾದ ಸಂದೀಪ ಶೆಟಕಾರ,ಚಂದ್ರಕಾಂತ ಪಾಟೀಲ, ಮುಕ್ರಮ್‌ಪಟೇಲ್, ಸುರೇಶ ಪಾಟೀಲ, ಸಲೀಂ ಪಾಷಾ, ಲಕ್ಷ್ಮೀಕಾಂತ, ಮೊಹ್ಮದ ತಾರಾ,ಕಾಮಶೆಟ್ಟಿ ಚಿಕಬಸೆ, ವಿಷ್ಣುಕಾಂತ, ಗಣಪತಿ ಸೋಲಪುರೆ, ವೀರೇಶ ಯದಲಾಪುರ, ಅಲ್ ಅಮಿನ್ ರಹೆಮಾನ ಖಾನ, ರವಿ ಚವ್ಹಾಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.