Advertisement

“ಕ್ರಿಯಾತ್ಮಕ ಚಿಂತನೆಗೆ ಪ್ರಾಯೋಗಿಕ ಶಿಕ್ಷಣವೇ ಆಧಾರ’

11:37 PM Apr 01, 2019 | Team Udayavani |

ಕಾರ್ಕಳ: ವಿದ್ಯಾರ್ಥಿಗಳು ತರಗತಿ ಒಳಗಡೆಗಿಂತ ಹೆಚ್ಚಿನ ಶಿಕ್ಷಣ ಅನುಭವವನ್ನು ತರಗತಿಯಿಂದ ಹೊರಗಡೆ ಕಲಿಯುತ್ತಾರೆ. ಅವರ ಕ್ರಿಯಾತ್ಮಕ ಚಿಂತನೆಗೆ ಪ್ರಾಯೋಗಿಕ ಶಿಕ್ಷಣವೇ ಆಧಾರವೆಂದು ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್‌. ವಿನಯ ಹೆಗ್ಡೆ ಹೇಳಿದರು.

Advertisement

ಎ. 1ರಂದು ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಎಲೆಕ್ಟ್ರಿಕಲ್‌, ಎಲೆಕ್ಟ್ರಾನಿಕ್ಸ್‌ ವಿಭಾಗ ಏರ್ಪಡಿಸಿದ್ದ”ಎಲಿಕ್ಸೀರ್‌ 2019′ ವಿದ್ಯಾರ್ಥಿಗಳ ಮಾದರಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗ ಗಳಲ್ಲಿ ಇಂತಹ ಪ್ರಾಯೋಗಿಕ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯುತ್ತಿದ್ದು, ವಿದ್ಯಾರ್ಥಿಗಳ ಜ್ಞಾನವನ್ನು ಪ್ರದರ್ಶಿಸುವಲ್ಲಿ ಸಹಕಾರಿಯಾಗಿದೆ ಎಂದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣRರ್‌ ಮಾತನಾಡಿ, 100ಕ್ಕೂ ಹೆಚ್ಚು ಮಾದರಿ ಪ್ರದರ್ಶನವನ್ನು ಇಲ್ಲಿ ಹಮ್ಮಿ ಕೊಳ್ಳಲಾಗಿದೆ. ವಿದ್ಯಾರ್ಥಿಗಳ ಬೆಳವಣಿಗೆ ಯಲ್ಲಿ ಮಹತ್ತರ ಪಾತ್ರ ವಹಿಸುವ ಇಂತಹ ಪ್ರದರ್ಶನಕ್ಕೆ ಹಳೆ ವಿದ್ಯಾರ್ಥಿಗಳು ಬೆಂಬಲ ನೀಡುತ್ತಿರುವುದು ಅಭಿನಂದನೀಯ ಕಾರ್ಯವೆಂದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಉಪ ಪ್ರಾಂಶು ಪಾಲ ಡಾ| ಐ. ರಮೇಶ್‌ ಮಿತ್ತಂತಾಯ, ಡಾ| ಶ್ರೀನಿವಾಸ ರಾವ್‌ ಬಿ. ಆರ್‌. ಅವರು ಉಪಸ್ಥಿತರಿದ್ದರು.

Advertisement

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಲಿಕ್ಸೀರ್‌ 2019 ವಸ್ತುಪ್ರದರ್ಶನದ ಸಂಯೋಜಕ ಡಾ| ಸೂರ್ಯನಾರಾಯಣ ಕೆ. ಸ್ವಾಗತಿಸಿ, ಎಲೆಕ್ಟ್ರಿಕಲ್‌ ವಿಭಾಗದ ಮುಖ್ಯಸ್ಥ ಡಾ| ನಾಗೇಶ್‌ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಲಿಕ್ಸೀರ್‌ ವಿದ್ಯಾರ್ಥಿ, ಸಂಯೋಜಕ ಅನೂಪ್‌ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ನಿಧಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಶ್ರೀಲಕ್ಷ್ಮೀ ಪೈ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನೆ ಕಾರ್ಯಕ್ರಮವನ್ನು ವಿನೂತನ ರೀತಿಯಲ್ಲಿ ನೆರವೇರಿಸ ಲಾಯಿತು. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳನ್ನೊಳಗೊಂಡ ಸುತ್ತುವ ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಬಗೆಯ ಮಾದರಿಗಳನ್ನು ಪ್ರದರ್ಶಿಸ ಲಾಯಿತು.

ಭಾರತದಲ್ಲಿ ಮಾನವ ಸಂಪತ್ತಿದೆ
ಎಚ್‌ಸಿಎಲ್‌ ಕಂಪೆನಿಯ ಜಪಾನ್‌ ವಿಭಾಗದ ಅಧ್ಯಕ್ಷ ಹರಿಕೃಷ್ಣ ಭಟ್‌ ಮಾತನಾಡಿ ‘ಜಪಾನ್‌ನಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಮಾನವಶಕ್ತಿ ಅಥವಾ ಮಾನವ ಸಂಪನ್ಮೂಲದ ಕೊರತೆಯಿದೆ. ಜಪಾನ್‌ನ ಒಟ್ಟು ಜನಸಂಖ್ಯೆಯ 3ನೇ 1 ಪಾಲು 60 ವರ್ಷಕ್ಕೂ ಹೆಚ್ಚಿನ ವಯಸ್ಕರು. ಜಪಾನ್‌ ನೊಂದಿಗೆ ಭಾರತದ ಮಾನವ ಸಂಪತ್ತು ವಿನಿಮಯವಾದಲ್ಲಿ ಎರಡು ದೇಶಗಳ ನಡುವಿನ ಬಾಂಧವ್ಯ ಮತ್ತು ತಂತ್ರಜ್ಞಾನದ ಬೆಳವಣಿಗೆ ಕ್ಷಿಪ್ರಗತಿಯಲ್ಲಿ ಬೆಳೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next