ಮುಂಬೈ: ಚಾರ್ಲ್ಸ್ ಬ್ಯಾಬೇಜನ ಸೃಷ್ಟಿಯಾಗಿರುವ ಕಂಪ್ಯೂಟರ್‌ಗಳು ಪಾದಾರ್ಪಣೆ ಮಾಡುವವರೆಗೂ ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಸಾಧನಗಳೆನಿಸಿದ್ದ ಟೈಪ್‌ರೈಟರ್‌ಗಳು ಮಹಾರಾಷ್ಟ್ರದಲ್ಲಿ ಇತಿಹಾಸದ ಪುಟ ಸೇರಲಿವೆ. ರಾಜ್ಯ ಪರೀಕ್ಷಾ ಮಂಡಳಿಯು ಶನಿವಾರ ಮ್ಯಾನುವಲ್ ಟೈಪ್‌ರೈಟರ್ ಪರೀಕ್ಷೆಯನ್ನು ಆಯೋಜಿಸಿದ್ದು, ಇದು ಸಮಿತಿ ನಡೆಸುವ ಕಟ್ಟಕಡೆಯ ಪರೀಕ್ಷೆಯಾಗಲಿದೆ.
ಈಗಲೂ ಟೈಪ್‌ರೈಟಿಂಗ್ ಕಲಿಯಲು ಸಾಕಷ್ಟು ಮಂದಿ ಆಸಕ್ತಿ ತೋರುತ್ತಿದ್ದಾರೆ ಎಂಬ ಟೈಪ್‌ರೈಟಿಂಗ್ ತರಬೇತಿ ಕೇಂದ್ರಗಳ ವಾದವನ್ನು ಗಂಭೀರವಾಗಿ ಪರಿಗಣಿಸದೆ ಮಂಡಳಿ ಅಂತಿಮ ಪರೀಕ್ಷೆಯ ನಿರ್ಧಾರ ಕೈಗೊಂಡಿದೆ. “2013ರ ಸರ್ಕಾರದ ನಿರ್ಣ ಯದ ಪ್ರಕಾರ ಪರೀಕ್ಷಾ ಮಂಡಳಿ ಕಂಪ್ಯೂಟರ್ ಬಳಸಿ ಅಭ್ಯರ್ಥಿಗಳಿಗೆ ಟೈಪ್‌ರೈಟರ್ ಪರೀಕ್ಷೆ ನಡೆಸುತ್ತಿದೆ. ಆದರೆ ಆಗಸ್ಟ್ 12ರಂದು ಕಡೆಯ ಬಾರಿಗೆ ಟೈಪ್‌ರೈಟರ್‌ಗಳನ್ನು ಬಳಸಿ ಪರೀಕ್ಷೆ ನಡೆಸಲಾಗುವುದು,’ ಎಂದು ಮಹಾರಾಷ್ಟ್ರ ಪರೀಕ್ಷಾ ಮಂಡಳಿಯ ಆಯುಕ್ತ ಸುಖದೇವ್ ದೇರೆ ಹೇಳಿದ್ದಾರೆ.
ಆಯುಕ್ತರು ತಿಳಿಸಿರುವ ಪ್ರಕಾರ, ಆಗಸ್ಟ್ 18ರ ನಂತರ ಮಂಡಳಿ ನಡೆಸುವ ಎಲ್ಲ ಪರೀಕ್ಷೆಗಳು ಕಂಪ್ಯೂಟರ್ ಮೂಲಕ ಮಾತ್ರ ನಡೆಯಲಿವೆ. ಅದರಂತೆ ಈವರೆಗೆ ಸರ್ಕಾರಿ ದಾಖಲೆಗಳ ಸೃಷ್ಟಿಯಲ್ಲಿ ಮುಖ್ಯ ಪತ್ರ ನಿರ್ವಹಿಸುತ್ತಿದ್ದ ಟೈಪ್‌ರೈಟರ್‌ಗಳು ಇತಿಹಾಸದ ಪೆಟ್ಟಿಗೆ ಸೇರಲಿದ್ದು, ಮುಂದಿನ ಪೀಳಿಗೆ ಇವುಗಳನ್ನು ಮ್ಯೂಸಿಯಂಗಳಲ್ಲಿ ನೋಡಿ ಆನಂದಿಸಲಿದೆ.
ಚಾರ್ಲ್ಸ್ ಬ್ಯಾಬೇಜನ ಸೃಷ್ಟಿಯಾಗಿ ರುವ ಕಂಪ್ಯೂಟರ್‌ಗಳು ಪಾದಾರ್ಪಣೆ ಮಾಡುವವರೆಗೂ ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಸಾಧನಗಳೆನಿಸಿದ್ದ ಟೈಪ್‌ರೈಟರ್‌ಗಳು ಮಹಾರಾಷ್ಟ್ರದಲ್ಲಿ ಇತಿಹಾಸದ ಪುಟ ಸೇರಲಿವೆ. ರಾಜ್ಯ ಪರೀಕ್ಷಾ ಮಂಡಳಿಯು ಶನಿವಾರ ಮ್ಯಾನುವಲ್ ಟೈಪ್‌ರೈಟರ್ ಪರೀಕ್ಷೆ ಯನ್ನು ಆಯೋಜಿಸಿದ್ದು, ಇದು ಸಮಿತಿ ನಡೆಸುವ ಕಟ್ಟಕಡೆಯ ಪರೀಕ್ಷೆಯಾಗಲಿದೆ.