Advertisement

ಯಕ್ಷಗಾನದ ಯೋಗಕ್ಷೇಮಕ್ಕೆ ಸಪ್ತಾಹ: ಖ್ಯಾತರೇ ಪ್ರಮುಖ ಆಕರ್ಷಣೆ

04:05 PM Jan 21, 2017 | |

ದಿ.ವಿ.ಆರ್‌.ಹೆ‌ಗಡೆ ಹೆಗಡೆಮನೆ ಅವರ ಪರಿಕಲ್ಪನೆಯ “ಯಕ್ಷಗಾನ ಯೊಗಕ್ಷೇಮ ಅಭಿಯಾನ’ದಡಿಯಲ್ಲಿ ಬೆಂಗಳೂರಿನ ಅಗ್ನಿ ಸೇವಾ ಟ್ರಸ್ಟ್‌ ಹಾಗೂ ಸಿರಿಕಲಾಮೇಳ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಅಂಥ ಕಾರ್ಯಕ್ರಮಗಳಲ್ಲಿ ಯಕ್ಷಸಪ್ತಾಹವೂ ಒಂದು. ಏಳು ದಿನಗಳ ಯಕ್ಷಗಾನ ಪ್ರದರ್ಶನವೇ ಯೋಗಕ್ಷೇಮ ಯಕ್ಷಸಪ್ತಾಹದ ಉದ್ದೇಶ.

Advertisement

ಈ ಸಲ ಅಪರೂಪದ ಕಾರ್ಯಕ್ರಮಕ್ಕೆ ಈ ಸಪ್ತಾಹ ಸಾಕ್ಷಿಯಾಗಲಿದೆ. ಅದೇನೆಂದರೆ ಜನಪ್ರಿಯ ಪ್ರಸಂಗಗಳನ್ನು ಕೊಂಚ ತಗ್ಗಿಸಿ, ಪ್ರದರ್ಶನಗಳಿಗೆ ಅವಕಾಶ ಸಿಗದ ಆದರೆ ಅದ್ಭುತವಾದ ಪ್ರಸಂಗಗಳನ್ನು ಆರಿಸಿ ಅವುಗಳಿಗೆ ರಂಗದ ಮೇಲೆ ನ್ಯಾಯ ಒದಗಿಸುವುದು. ನಮ್ಮಲ್ಲಿ ಅನೇಕ ಒಳ್ಳೆಯ ಪ್ರಸಂಗಗಳು ನಮ್ಮಲ್ಲಿವೆ. ಉದಾಹರಣೆಗೆ ಕೆರೆಕೊಪ್ಪ ಜಾಣ ಮಂಜಪ್ಪ ಅವರ “ಕಲಾವತಿ ಪರಿಣಯ’. ಅಂತಹವುಗಳಲ್ಲಿ ಕೆಲವನ್ನು ಗುರುತಿಸಿ ಸಪ್ತಾಹದಲ್ಲಿ ಮೂರು ಪ್ರಸಂಗಗಳನ್ನು ಈ ಸಪ್ತಾಹದಲ್ಲಿ ಅಳವಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ದಿನೇಶ ಹೆಗಡೆ ವಿರಚಿತ “ಶಿಬಿ ಚರಿತ’, ಬೇಳೂರು ಜಾಣ ಮಂಜಪ್ಪ ವಿರಚಿತ “ಕಲಾವತಿ ಪರಿಣಯ’ ಮತ್ತು ಗಿಂಡೀಮನೆ ಮೃತ್ಯುಂಜಯ ವಿರಚಿತ “ದಕ್ಷ-ಚಂದ್ರ’.

ಉಳಿದಂತೆ ಪ್ರಚಲಿತದ‌ಲ್ಲಿರುವ ದೇವದಾಸ ವಿರಚಿತ “ಕೃಷ್ಣ ಸಂಧಾನ’, ಹಳೇಮಕ್ಕಿ ರಾಮ ವಿರಚಿತ “ಕೃಷ್ಣಾರ್ಜುನ’, ಕನ್ಯಾನ ವೆಂಕಟ್ರಮಣ ಭಟ್‌ ವಿರಚಿತ “ಬ್ರಹ್ಮ ಕಪಾಲ’, ಎಂ.ಎ.ಹೆಗಡೆ ವಿರಚಿತ “ಲವ ಕುಶ’ ಪ್ರಸಂಗಗಳಿವೆ.

ರಂಗದ ಮೇಲೆ ಹಿರಿಕಿರಿಯ ಕಲಾವಿದರ ಸಮ್ಮೇಳನವಿದೆ. ವೃತ್ತಿ ಹಾಗೂ ಹವ್ಯಾಸಿ ಕಲಾವಿದರ ಪಾಲ್ಗೊಳ್ಳುವಿಕೆಯಿದೆ. ಪ್ರಸಂಗಗಳಿಗೆ ಸೂಕ್ತವಾಗುವಂತೆ ಲಭ್ಯತೆಗನುಗುಣವಾಗಿ ಕಾಲಾವಿದರ ಸಂಯೋಜನೆ ಇದೆ. ಹಿಮ್ಮೇಳದಲ್ಲಿ ಪ್ರಸನ್ನ ಭಟ್‌ ಬಾಳ್ಕಲ್‌, ಎ.ಪಿ.ಪಾಠಕ್‌, ನಾರಾಯಣ ಹೆಬ್ಟಾರ್‌, ಅಮೃತದೇವ ಕಟ್ಟಿನಕೆರೆ, ಆದಿತ್ಯ ಇರಲಿದ್ದಾರೆ.

ಮುಮ್ಮೇಳದಲ್ಲಿ ಗೋಡೆ ನಾರಾಯಣ ಹೆಗಡೆ, ಕೃಷ್ಣಯಾಜಿ ಬಳ್ಕೂರು, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಡಾ. ಶಿವಕುಮಾರ ಬೇಗಾರ, ಸಂಜಯ ಬೆಳೆಯೂರು, ಶ್ರೀಧರ ಭಟ್‌ ಕಾಸರಕೋಡು, ನಾಗೇಂದ್ರ ಮೂರೂರು, ರವೀಶ ಹೆಗಡೆ, ವಿನಯ್‌ ಭಟ್‌ ಬೇರೊಳ್ಳಿ, ವಿಘ್ನೇಶ್ವರ ಶರ್ಮ, ಮನೋಜ ಭಟ್‌, ಗಾಳಿ ಸತ್ಯನಾರಾಯಣ ಭಟ್‌, ಮಂಜುನಾಥ ಭಟ್‌, ವಿನಯ್‌ ಹೊಸ್ತೋಟ, ನಾಗೇಶ, ಸುಮುಖ, ಸುಮಂತ, ಅಚ್ಯುತ, ನಾಯಕ ಮಧ್ಯಸ್ಥ, ವಾಸುದೇವ ಪ್ರಭು ಇವರ ಜೊತೆಯಲ್ಲಿ ಕಲಾವಿದೆಯರಾಗಿ ಅರ್ಪಿತಾ ಹೆಗಡೆ ಮತ್ತು ನೀಹಾರಿಕಾ ಭಟ್‌ ಇದ್ದಾರೆ.

Advertisement

ಯಾವಾಗ, ಯಾವ ಪ್ರಸಂಗ, ಎಲ್ಲಿ?
ಜ. 23, ಸೋಮವಾರ, ಪ್ರಸಂಗ: ಶಿಬಿ ಚರಿತ- ಎಲ್ಲಿ?: ಸಂಸ ಬಯಲು ರಂಗ ಮಂದಿರ, ಜೆಸಿ ರಸ್ತೆ
ಜ. 24, ಮಂಗಳವಾರ, ಪ್ರಸಂಗ: ಕಲಾವತಿ ಪರಿಣಯ. ಎಲ್ಲಿ?: ಸಂಸ ಬಯಲು ರಂಗ ಮಂದಿರ
ಜ. 25, ಬುಧವಾರ, ಪ್ರಸಂಗ: ಶ್ರೀ ಕೃಷ್ಣ ಸಂಧಾನ ಎಲ್ಲಿ?: ಸಂಸ ಬಯಲು ರಂಗ ಮಂದಿರ
ಜ. 26, ಗುರುವಾರ, ಪ್ರಸಂಗ: ಕೃಷ್ಣಾರ್ಜುನ, ಎಲ್ಲಿ?: ಕುವೆಂಪು ಬಯಲು ರಂಗಮಂದಿರ, ಬಿಟಿಎಂ ಎರಡನೇ ಹಂತ
ಜ. 27, ಶುಕ್ರವಾರ, ಪ್ರಸಂಗ: ಬ್ರಹ್ಮ ಕಪಾಲ ಎಲ್ಲಿ?: ಸಂಸ ಬಯಲು ರಂಗಮಂದಿರ
ಜ. 28, ಶನಿವಾರ, ಪ್ರಸಂಗ: ಲವ ಕುಶ ಎಲ್ಲಿ?: ಸಂಸ ಬಯಲು ರಂಗಮಂದಿರ
ಜ. 29, ಭಾನುವಾರ, ಪ್ರಸಂಗ: ದಕ್ಷ ಚಂದ್ರ, ಎಲ್ಲಿ?: ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ ಮಹಾಲಕ್ಷ್ಮಿಪುರ

Advertisement

Udayavani is now on Telegram. Click here to join our channel and stay updated with the latest news.

Next