Advertisement
ಕುಂದಾಪುರ: ಲಾಕ್‌ಡೌನ್ ಅನಂತರ ಆಗಸ್ಟ್ ತಿಂಗಳಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಓಡಾಟ ಆರಂಭಿಸಿದ್ದು, ಅಕ್ಟೋಬರ್‌ನಿಂದ ಇನ್ನಷ್ಟು ಖಾಸಗಿ ಬಸ್‌ಗಳು ರಸ್ತೆಗಿಳಿದವು. ಅನಂತರ ಹಬ್ಬ ಹರಿದಿನ ಎಂದು ಒಂದೊಂದಾಗಿ ಬಸ್‌ಗಳು ಸಂಚರಿಸು ತ್ತಿದ್ದರೂ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಈಗಾಗಲೇ ಓಡಾಡುತ್ತಿರುವ ಬಸ್‌ಗಳಲ್ಲಿ ಆದಾಯ ಖೋತಾ ಉಂಟಾಗಿದೆ.
Related Articles
Advertisement
ಬೆಂಗಳೂರಿಗೆ ಕೆಲವು ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಓಡಾಟ ನಡೆಸುತ್ತಿಲ್ಲ. ಓಡಾಟ ನಡೆಸುತ್ತಿರುವ ಬಸ್‌ಗಳಲ್ಲಿನ ಆದಾಯ ಅದರ ಇಂಧನಕ್ಕೂ ಸಾಲುತ್ತಿಲ್ಲ. ಈಗಾಗಲೇ ಇರುವ ಬಸ್‌ಗಳ ಆದಾಯ ಸರಿದೂಗದ ಹೊರತು ಇನ್ನಷ್ಟು ನಷ್ಟ ಮಾಡಿಕೊಳ್ಳಲು ನಿಗಮ ಸಿದ್ಧವಿಲ್ಲ. ವಂಡ್ಸೆ, ಜಡ್ಕಲ್, ಅರೆಹೊಳೆ ಭಾಗದಲ್ಲಿ ಖಾಸಗಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಇಲ್ಲ. ಸರಕಾರಿ ಗ್ರಾಮಾಂತರ ಸಾರಿಗೆಯೂ ಇಲ್ಲ. ಬೈಂದೂರು ತಾಲೂಕಿನ ತಾರಾಪತಿ, ದೊಂಬೆ, ಕಾಲ್ತೋಡು, ಬೊಳಂಬಳ್ಳಿ, ಹೇನಬೇರು, ಕುಂದಾಪುರ ತಾಲೂಕಿನ ಕೋಡಿ, ಗಂಗೊಳ್ಳಿ, ಶೇಡಿಮನೆ, ವಾಲೂ¤ರು ಮೊದಲಾದೆಡೆಗೆ ಸರಕಾರಿ ಬಸ್‌ಗಳಿಲ್ಲ. ಬೈಂದೂರು ಹಾಗೂ ಗಂಗೊಳ್ಳಿಗೆ ವಿರಳವಾಗಿದೆ.
ಬಾಡಿಗೆ ಮಾಡಿ ಒಟ್ಟಾಗಿ ಹೋಗುವ ಪರಿಪಾಠ :ಖಾಸಗಿ ಬಸ್‌ಗಳು ಕೂಡ ಬೆಂಗಳೂರಿನಂತಹ ದೂರ ಪ್ರಯಾಣಕ್ಕೆ ಇನ್ನೂ ಎಲ್ಲವೂ ತೆರೆದುಕೊಳ್ಳಲಿಲ್ಲ. ಶೇ.20ರಷ್ಟು ದೂರ ಪ್ರಯಾಣದ ಬಸ್‌ಗಳು ನಿಲ್ಲಿಸಿದಲ್ಲೇ ಬಾಕಿಯಾಗಿವೆ. ಈಗ ಓಡಾಡುತ್ತಿರುವ ಬಸ್‌ಗಳಲ್ಲೂ ಸರಣಿ ರಜೆಯ ಹೊರತಾಗಿ ಇತರ ದಿನಗಳಲ್ಲಿ ಪ್ರಯಾಣಿಕರ ಕೊರತೆಯಿದೆ. ಗ್ರಾಮಾಂತರದಿಂದ ನಗರಕ್ಕೆ ರಿಕ್ಷಾ ಬಾಡಿಗೆ ಮಾಡಿದರೆ ಸಣ್ಣ ಮೊತ್ತ ಸಾಕಾಗುವುದಿಲ್ಲ. ದೂರದೂರಿಗೆ ಐದಾರು ಮಂದಿ ಕಾರಿನಲ್ಲಿ ಬಾಡಿಗೆ ಮಾಡಿ ಒಟ್ಟಾಗಿ ಹೋಗುವ ಪರಿಪಾಠ ಆರಂಭವಾಗಿದೆ.
ಶಾಲೆ, ಕಾಲೇಜಿಗೆ ತೊಂದರೆ :
ಕಾಲೇಜುಗಳ ಆರಂಭ ನವೆಂಬರ್‌ನಿಂದಲೇ ಆಗಿ ವಿದ್ಯಾರ್ಥಿಗಳ ಓಡಾಟ ಆರಂಭವಾಗಿದೆ. ಈಗಂತೂ ಪದವಿ ಹಾಗೂ ಪಿಯು ಕಾಲೇಜುಗಳೆಲ್ಲವೂ ತೆರೆದಿವೆ. ಆದರೆ ಬಸ್‌ಗಳ ಕೊರತೆಯಿಂದ ಹಕ್ಲಾಡಿ, ನೂಜಾಡಿ, ಬಂಟ್ವಾಡಿ, ಹಕೂìರು, ಕುಂದಬಾರಂದಾಡಿ, ಅಮಾಸೆಬೈಲು, ಕೊಲ್ಲೂರು, ಶಂಕರನಾರಾಯಣ, ಜಡ್ಕಲ್, ವಂಡ್ಸೆ ಮೊದಲಾದ ಭಾಗದಿಂದ ವಿದ್ಯಾರ್ಥಿಗಳಿಗೆ ಬೈಂದೂರು, ಕುಂದಾಪುರ, ಉಡುಪಿ ಕಾಲೇಜಿಗೆ ಬರಲು ತೊಂದರೆಯಾಗಿದೆ. ಇರುವ ಬೆರಳೆಣಿಕೆ ಬಸ್‌ಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ರಿಯಾಯಿತಿ :
ನಿತ್ಯ ಪ್ರಯಾಣಿಕರಿಗೆ ಹೊರೆಯಾಗ ದಂತೆ ಒಂದೇ ಬಾರಿಗೆ ಪಾವತಿಸಿ ಹೋಗಿಬರುವ ಟಿಕೆಟ್ ಪಡೆಯುವ ಸೌಲಭ್ಯ ನೀಡಲಾಗುತ್ತಿದೆ. ಕುಂದಾಪುರದಿಂದ ಉಡುಪಿಗೆ ಹೋಗಿಬರಲು 100 ರೂ. ಆಗುತ್ತದೆ. 70 ರೂ.ಗೆ ನಿತ್ಯ ಪಾಸ್ ಇದೆ. ಉಡುಪಿಯಿಂದ ಮಂಗಳೂರಿಗೆ 140 ರೂ. ವೆಚ್ಚವಾಗುತ್ತದೆ. 100 ರೂ.ಗೆ ನಿತ್ಯದ ಪಾಸ್ ಇದೆ. ಕುಂದಾಪುರ, ಉಡುಪಿ, ಮಂಗಳೂರು ಬಸ್‌ನಿಲ್ದಾಣದಲ್ಲಿ ಹಾಗೂ ಈ ಮೂರು ಡಿಪೋದ ಬಸ್‌ಗಳಲ್ಲೂ ಟಿಕೆಟ್ ಲಭ್ಯವಿರುತ್ತದೆ. ಕೆಎಸ್‌ಆರ್‌ಟಿಸಿ ಟಿಕೆಟ್ ಆದರೂ ಈಶಾನ್ಯ ವಾಯವ್ಯ ಬಸ್‌ಗಳಲ್ಲೂ ಈ ಟಿಕೆಟ್ ಮೂಲಕ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಪ್ರಯಾಣ ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಜನರಿಂದ ಅಂತಹ ಉತ್ತಮ ಸ್ಪಂದನೆ ಬಂದಿಲ್ಲ.
ಭಟ್ಕಳ- ಮಂಗಳೂರು ವೋಲ್ವೋ ಬಸ್‌ಗಳ ಓಡಾಟ ಈ ಹಿಂದಿನಂತೆ ಆರಂಭಿಸಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಿದ್ದು ಅವರು ನನ್ನ ಮನವಿಯನ್ನು ಉಲ್ಲೇಖೀಸಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಪತ್ರ ಬರೆದಿದ್ದಾರೆ. ಸರಕಾರ ಲಾಭ ನಷ್ಟ ಕ್ಕಿಂತ ಹೆಚ್ಚು ಪ್ರಯಾಣಿಕರ ಹಿತ ಗಮನದಲ್ಲಿರಿಸಿ ಗ್ರಾಮಾಂತರದಲ್ಲೂ ಬಸ್‌ಗಳ ಓಡಾಟಕ್ಕೆ ಕ್ರಮಕೈಗೊಳ್ಳಬೇಕು.-ರಾಜೇಶ್ ಕಾವೇರಿ ಮಾಜಿ ಉಪಾಧ್ಯಕ್ಷರು, ಪುರಸಭೆ
ಶೇ.80ರಷ್ಟು ಬಸ್‌ಗಳು ಓಡಾಡುತ್ತಿದ್ದರೂ ಪ್ರಯಾಣಿಕರ ಕೊರತೆಯಿದೆ. ಆದಾಯ ಕಡಿಮೆಯಿದ್ದರೂ ಇಷ್ಟನ್ನು ಓಡಿಸಲಾಗುತ್ತಿದೆ. ಶೂನ್ಯ ಆದಾಯದ ಮಾರ್ಗದಲ್ಲಿ ಮಾತ್ರ ಓಡಿಸುತ್ತಿಲ್ಲ. ಇನ್ನಷ್ಟು ಜನ ಓಡಾಟ ಆರಂಭವಾದ ಬಳಿಕ ಉಳಿದ ಮಾರ್ಗಗಳಲ್ಲೂ ಬಸ್‌ಗಳ ಓಡಾಟ ನಡೆಯಲಿದೆ. -ರಾಜೇಶ್ ಮೊಗವೀರಘಟಕ ವ್ಯವಸ್ಥಾಪಕರು, ಕೆಎಸ್‌ಆರ್‌ಟಿಸಿ ಕುಂದಾಪುರ