Advertisement

ಗಡಿಯಲ್ಲಿ ಮತ್ತೆ ಫುಲ್‌ ಟೈಟ್‌

11:30 AM Nov 29, 2021 | Team Udayavani |

ಆಳಂದ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್‌-19 ಹೊಸ ರೂಪಾಂತರ ಒಮಿಕ್ರಾನ್‌ ಜೊತೆಗೆ ರಾಜ್ಯದಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಖಜೂರಿ ಮತ್ತು ಹಿರೋಳಿ ಗಡಿಯಲ್ಲಿ ಹೊರಗಿನ ಪ್ರವೇಶಕ್ಕೆ ರವಿವಾರದಿಂದ ನಾಕಾಬಂಧಿ ವಿಧಿಸಲಾಗಿದೆ.

Advertisement

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಹಿರೋಳಿ, ಖಜೂರಿ ಗಡಿಯಲ್ಲಿ ಕೋವಿಡ್‌ ವರದಿ ತಪಾಸಣೆಗಾಗಿ ಚೆಕ್‌ಪೋಸ್ಟ್‌ ಸ್ಥಾಪಿಸಿ ಕಾರ್ಯಾರಂಭಿಸಿದೆ. ಕಲಬುರಗಿ ಜಿಲ್ಲೆ ಅಥವಾ ತಾಲೂಕುಗಳಿಗೆ ಪ್ರವೇಶ ಬಯಸುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ರಿಪೋರ್ಟ್ ನ್ನು ನೀಡುವುದು ಕಡ್ಡಾಯವಾಗಿದೆ. ಈ ವರದಿ ಇಲ್ಲದಿದ್ದಲ್ಲಿ ರಾಜ್ಯದೊಳಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗದು ಎಂದು ಮೂಲಗಳು ಹೇಳಿಕೊಂಡಿವೆ. ಆದರೆ ಇದನ್ನು ಎಷ್ಟರ ಮಟ್ಟಿಗೆ ಸ್ಥಳೀಯ ಅಧಿಕಾರಿಗಳು ಜಾರಿಗೆ ತರುತ್ತಾರೆ ಎಂಬುದನ್ನು ಕಾಯ್ದುನೋಡಬೇಕಿದೆ.

ಈ ಹಿಂದೆ ಲಾಕ್‌ಡೌನ್‌ ಮುಗಿದ ಕೆಲವು ತಿಂಗಳ ವರೆಗೆ ಜಾರಿಯಲ್ಲಿದ್ದ ತಪಾಸಣೆ ಮತ್ತು ಅದರ ಹೆಸರಿನಲ್ಲಿ ದುರ್ಬಳಕೆಯೇ ಹೆಚ್ಚಾಗಿ ಜನರ ಆಕ್ರೋಶಕ್ಕೆ ಕಾರಣವಾಗಿ, ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಮತ್ತೆ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ವಿಧಿಸಿದ ತಪಾಸಣೆ, ಚೆಕ್‌ಪೋಸ್ಟ್‌ ಕಾರ್ಯವೈಖರಿ ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಸಾಗಲಿ ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

ಖಜೂರಿ, ಹಿರೋಳಿ ಮತ್ತು ಉಪ ಕೇಂದ್ರಗಳಾದ ಮಾದನಹಿಪ್ಪರಗಾ, ನಿಂಬಾಳದಲ್ಲಿ ಮೊದಲಿನಿಂದಲೇ ಕೋವಿಡ್‌ ತಪಾಸಣೆಗಾಗಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಈಗ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು. -ಯಲ್ಲಪ್ಪ ಸುಬೇದಾರ ತಹಸೀಲ್ದಾರರು ಆಳಂದ

Advertisement

Udayavani is now on Telegram. Click here to join our channel and stay updated with the latest news.

Next