Advertisement
ಹೀಗೆಂದು ಹೇಳಿರುವುದು ಮಂಗಳವಾರವಷ್ಟೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ ಐರೋಪ್ಯ ಒಕ್ಕೂಟದ 23 ಸಂಸದರ ನಿಯೋಗ. ತಮ್ಮ ಭೇಟಿ ಮುಗಿಸಿ ಬುಧವಾರ ಯುರೋಪ್‌ಗೆ ವಾಪಸಾಗುವ ಮುನ್ನ ನಿಯೋಗದ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ್ದಾರೆ. ಈ ಭೇಟಿಯು ನಮ್ಮ ಕಣ್ತೆರೆಸಿತು. ಇಲ್ಲಿ ನಮಗೆ ಕಾಣಿಸಿದ್ದನ್ನು ನಾವು ನಮ್ಮ ದೇಶಕ್ಕೆ ಹೋಗಿ ಹೇಳುತ್ತೇವೆ ಎಂದಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆಯನ್ನೂ ಖಂಡಿಸಿದ್ದಾರೆ.
Related Articles
Advertisement
ಕಾರ್ಮಿಕರ ಹತ್ಯೆಗೆ ಖಂಡನೆಕುಲ್ಗಾಂನಲ್ಲಿ ಪ.ಬಂಗಾಲದ 6 ಮಂದಿ ವಲಸೆ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದೆ. ಜತೆಗೆ ಕಾರ್ಮಿಕರ ಹತ್ಯೆ ಘಟನೆಗೆ ಕಾಂಗ್ರೆಸ್, ಎನ್‌ಸಿ, ಪಿಡಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಖಂಡನೆ ವ್ಯಕ್ತಪಡಿಸಿವೆ. ಆಘಾತ ವ್ಯಕ್ತಪಡಿಸಿರುವ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಘಟನೆ ಬಗ್ಗೆ ತನಿಖೆಗೆ ಆಗ್ರಹಿಸಿ, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇನ್ನು, ಕಾಶ್ಮೀರೇತರರಾದ ಕಾರಣ ಕೂಡಲೇ ರಾಜ್ಯ ಬಿಟ್ಟು ತೆರಳಿ ಎಂದು ಕಾರ್ಮಿಕರಿಗೆ ಉಗ್ರರು ಪದೇ ಪದೆ ಬೆದರಿಕೆ ಹಾಕುತ್ತಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಭಾರತವನ್ನು ಬೆಂಬಲಿಸಿದರೆ ಕ್ಷಿಪಣಿ ದಾಳಿ: ಪಾಕ್
ಕಾಶ್ಮೀರ ವಿಚಾರದಲ್ಲಿ ಭಾರತವನ್ನು ಯಾವುದಾ ದರೂ ದೇಶವು ಬೆಂಬಲಿಸಿದ್ದೇ ಆದಲ್ಲಿ, ಆ ದೇಶದ ಮೇಲೆ ಪಾಕಿಸ್ಥಾನವು ಕ್ಷಿಪಣಿ ದಾಳಿ ನಡೆಸಲಿದೆ ಎಂದು ಹೇಳುವ ಮೂಲಕ ಪಾಕ್ ಸಚಿವರೊಬ್ಬರು ವಿವಾದ ಸೃಷ್ಟಿಸಿದ್ದಾರೆ. ಭಾರತ ದೊಂದಿಗಿನ ಪ್ರಕ್ಷುಬ್ಧತೆ ತೀವ್ರಗೊಂಡು, ಯುದ್ಧದ ಸನ್ನಿವೇಶ ನಿರ್ಮಾಣವಾದರೆ, ಕಾಶ್ಮೀರ ವಿಚಾರ ದಲ್ಲಿ ಯಾವ ದೇಶ ಭಾರತಕ್ಕೆ ಬೆಂಬಲ ಸೂಚಿಸು ತ್ತದೋ ಆ ದೇಶವನ್ನು ನಮ್ಮ ಶತ್ರು ಎಂದು ಪರಿಗಣಿಸುತ್ತೇವೆ. ಅಲ್ಲದೆ, ಭಾರತ ಹಾಗೂ ಅಂಥ ದೇಶಗಳನ್ನು ಗುರಿಯಾ ಗಿಸಿ ಕೊಂಡು ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದು ಕಾಶ್ಮೀರ ಮತ್ತು ಗಿಲಿYಟ್ ಬಾಲ್ಟಿಸ್ಥಾನದ ವ್ಯವಹಾರ ಗಳ ಸಚಿವ ಅಲಿ ಅಮಿನ್ ಗಂದಾಪುರ್ ಬೆದರಿಕೆ ಹಾಕಿದ್ದಾರೆ. ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದಕ್ಕೆ ಜವಾಹರಲಾಲ್ ನೆಹರೂರನ್ನು ಈಗಲೂ ಟೀಕಿಸುವ ಬಿಜೆಪಿ, ಈಗ ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಗೆ ಅವಕಾಶ ಕೊಟ್ಟಿದ್ದೇಕೆ?
ಶಿವಸೇನೆ, ಮುಖವಾಣಿ ಸಾಮ್ನಾದಲ್ಲಿ ಐರೋಪ್ಯ ಒಕ್ಕೂಟದ ನಿಯೋಗದ ಕಾಶ್ಮೀರ ಭೇಟಿಯು ಭಾರತದ ಇತಿಹಾಸದಲ್ಲೇ ಅತಿದೊಡ್ಡ ರಾಜತಾಂತ್ರಿಕ ಬ್ಲಿಂಡರ್. ಕಾಶ್ಮೀರ ನಮ್ಮ ಆಂತರಿಕ ವಿಷಯವಾಗಿದ್ದರೂ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಅದನ್ನು ಅಂತಾರಾಷ್ಟ್ರೀಕರಣಗೊಳಿಸಿತು.
– ರಣದೀಪ್ ಸುಜೇìವಾಲಾ, ಕಾಂಗ್ರೆಸ್ ವಕ್ತಾರ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ವನ್ನು ವಶಪಡಿಸಿಕೊಳ್ಳಬೇಕಾದ ಅಗತ್ಯವೇನಿದೆ? ಅದು ಎಂದಿದ್ದರೂ ನಮ್ಮದೇ. ಸದ್ಯದಲ್ಲೇ ಪಿಒಕೆ ಭಾರತ ಸರಕಾರದ ನಿಯಂತ್ರಣಕ್ಕೆ ಬರಲಿದೆ.
– ಜ| ವಿ.ಕೆ. ಸಿಂಗ್, ಕೇಂದ್ರ ಸಚಿವ