Advertisement
ಇಸ್ರೋ ಮತ್ತು ರಾಷ್ಟ್ರೀಯ ದೂರಸಂವೇದಿ ಕೇಂದ್ರ ಎನ್‌ಆರ್‌ಎಸ್‌ಸಿ ಸಂಯುಕ್ತವಾಗಿ ಬಾಹ್ಯಾಕಾಶ ಆಧಾರಿತ ಮಾಹಿತಿ ವಿಕೇಂದ್ರೀಕೃತ ಯೋಜನೆ (ಎಸ್‌ಐಎಸ್‌ಡಿಪಿ) ಅಡಿ ವೆಬ್ ಜಿಯೊ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಇದಕ್ಕೆ “ಭುವನ್ ಪಂಚಾಯತ್ 3.0′ ಎಂದು ನಾಮಕರಣ ಮಾಡಲಾಗಿದೆ. ಇದರಲ್ಲಿ 2.56 ಲಕ್ಷ ಗ್ರಾ.ಪಂ.ಗಳ ಮಾಹಿತಿ ಸಂಗ್ರಹಿಸಲಾಗಿದೆ. 2016-17ರಲ್ಲಿ ಎಸ್‌ಐಎಸ್‌ಡಿಪಿ ಮೊದಲ ಹಂತ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದರ ಮುಂದುವರಿದ ಭಾಗವಾಗಿ ಅದನ್ನು ಹೊಸ ರೂಪದಲ್ಲಿ ಪರಿಚಯಿಸಲಾಗಿದೆ.
ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಪೋರ್ಟಲ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿ, ಪ್ರಧಾನಿ ಮೋದಿ ಅವರ ಕನಸಿನ ಭಾರತ ನಿರ್ಮಾಣಕ್ಕೆ ದೇಶದ ಬಾಹ್ಯಾಕಾಶ ತಂತ್ರಜ್ಞಾನವು ಪೂರಕ ಮತ್ತು ಅತ್ಯಗತ್ಯ ಸಾಧನ ಎಂದು ವಿಶ್ಲೇಷಿಸಿದರು.
Related Articles
Advertisement
ಇಸ್ರೋ ಅಧ್ಯಕ್ಷ ಕೆ. ಶಿವನ್ ಮಾತನಾಡಿ, ಸಂಸ್ಥೆಯು ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ. ಈಗ ಲಭ್ಯವಿರುವ ಮಾಹಿತಿಗಳು ಗ್ರಾಮೀಣಾಭಿವೃದ್ಧಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿವೆ ಎಂದರು.