Advertisement

ವೈನ್‌ಶಾಪ್‌ ಮುಂದೆ ಮದ್ಯಪ್ರಿಯರ ದರ್ಬಾರ್‌!

01:09 AM Mar 24, 2020 | mahesh |

ಉಡುಪಿ: ಕೋವಿಡ್-19 ಹರಡದಂತೆ ನಗರದಲ್ಲಿ ಜಿಲ್ಲಾಡಳಿತ ಎಲ್ಲ ಇಲಾಖೆಗಳ ಸಹಕಾರದಲ್ಲಿ ಶತಾಯಗತಾಯ ಪ್ರಯತ್ನಿಸುತ್ತಿದೆ. ಒಂದು ಕಡೆ ಹೆಚ್ಚು ಮಂದಿ ಸೇರುವುದನ್ನು ತಡೆಯುವ ಎಲ್ಲ ಪ್ರಯತ್ನ ನಡೆಸುತ್ತಿದೆ. ಆದರೆ ವೈನ್‌ಶಾಪ್‌ಗ್ಳ ಮುಂದೆ ಮದ್ಯಪ್ರಿಯರು ಮುಗಿಬೀಳುತ್ತಿದ್ದಾರೆ.

Advertisement

ಇವರಿಗೆ ವೈರಸ್‌ ಸೋಂಕಿನ ಭೀತಿಯೂ ಇಲ್ಲ. ಇತ್ತ ಡಿಸಿ ಜಾರಿಗೊಳಿಸಿದ ನಿಯಮಗಳ ಪಾಲನೆಯೂ ಇಲ್ಲ. ಯಾವ ಜಾಗೃತಿಯೂ ತಟ್ಟಿಲ್ಲ. ವೈನ್‌ಶಾಪ್‌ಗ್ಳ ಮುಂದೆ ಸರತಿ ಸಾಲಿನಲ್ಲಿ ಜನರು ನಿಂತಿದ್ದರು. ಜನ ಮದ್ಯ ಖರೀದಿಗೆ ಮುಗಿಬೀಳುತ್ತಿದ್ದರು. ಮದ್ಯದಂಗಡಿಗಳ ಮುಂದೆ ಪರಸ್ಪರ ಯಾವ ಅಂತರವನ್ನೂ ಕಾಪಾಡಿಕೊಳ್ಳುತ್ತಿರುವುದು ಕಾಣಿಸುತ್ತಿರಲಿಲ್ಲ. ಇಂತಹ ದೃಶ್ಯ ನಗರದ ಬಹುತೇಕ ವೈನ್‌ಶಾಪ್‌ಗ್ಳ ಮುಂದೆ ಸೋಮವಾರ ಸಂಜೆ ಕಂಡುಬಂದಿತ್ತು.

ಆದರೆ ನಗರಸಭೆ ಮತ್ತು ಜಿಲ್ಲಾಡಳಿತದ ವತಿಯಿಂದ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಣ್ಣ ಸಣ್ಣ ಅಂಗಡಿ, ಹೊಟೇಲ್‌ಗ‌ಳನ್ನು ಬಂದ್‌ ಮಾಡಿಸಿದರು. ಅಧಿಕಾರಿಗಳೂ ನಿಂತು ಅಂಗಡಿ, ಹೊಟೇಲ್‌ಗ‌ಳನ್ನು ಮುಚ್ಚಿಸಿದರು. ಪಕ್ಕದಲ್ಲಿಯೇ ಇದ್ದ ವೈನ್‌ಶಾಪ್‌ಗ್ಳು ನಿರಾತಂಕವಾಗಿ ಮುಂದುವರಿಯುತ್ತಿದ್ದವು.

ವೈನ್‌ಶಾಪ್‌ ಮುಂದೆ ಅಂತರ ಕಾಪಾಡಿಕೊಳ್ಳದಿರುವುದನ್ನು ಗಮನಿಸಿದ ಜಿಲ್ಲಾಡಳಿತದ ಅಧಿಕಾರಿಗಳು ಬಂದು ಎಚ್ಚರಿಕೆ ನೀಡಿದ ಘಟನೆಯೂ ರಾತ್ರಿ ನಡೆಯಿತು.

ಮದ್ಯ ಮಾರಾಟ ನಿರ್ಬಂಧ
ಪಡುಬಿದ್ರಿ: ಪಡುಬಿದ್ರಿಯ ವೈನ್‌ಶಾಪ್‌ ಒಂದರಲ್ಲಿ ಜನಮುಗಿಬಿದ್ದು ಮದ್ಯ ಖರೀದಿಸುವುದನ್ನು ಗಮನಿಸಿದ ಕಾಪು ತಹಶೀಲ್ದಾರ್‌ ಮಹಮ್ಮದ್‌ ಐಸಾಕ್‌ ಅವರು ಅಂಗಡಿ ಮಾಲಕರನ್ನು ಎಚ್ಚರಿಸಿದರು. ಸೂಕ್ತ ಮುಂಜಾಗ್ರತ ಕ್ರಮ ಅನುಸರಿಸುವುದಲ್ಲದೆ ಟೋಕನ್‌ ನೀಡಿ ಐದೈದು ಮಂದಿಗೆ ವಿತರಿಸುವಂತೆ ಸೂಚಿಸಿದರು. ಅಬಕಾರಿ ಸಿಬಂದಿ ಸ್ಥಳಕ್ಕಾಗಮಿಸಿ ಮದ್ಯ ಮಾರಾಟವನ್ನು ನಿಯಂತ್ರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next