Advertisement

ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ಪೂರ್ಣ ನೆರವು: ವೆಂಕಯ್ಯ ನಾಯ್ಡು

06:00 AM Jul 27, 2018 | |

ಕಾಸರಗೋಡು: ಆರೋಗ್ಯ ರಂಗದಲ್ಲಿ ಹಿಂದುಳಿದ ಕಾಸರಗೋಡು ಜಿಲ್ಲೆಯ ಚಿಕಿತ್ಸಾ ರಂಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಾದ ಎಲ್ಲ ನೆರವನ್ನು ನೀಡುವುದಾಗಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ತಿಳಿಸಿದರು.

Advertisement

ಕೇರಳ ಕೇಂದ್ರ ವಿಶ್ವವಿದ್ಯಾನಿಲಯದ ಮೆಡಿಕಲ್‌ ಕಾಲೇಜು ಮತ್ತು ಕೇರಳಕ್ಕೆ ಮಂಜೂರು ಮಾಡಿದ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸಯನ್ಸ್‌ (ಏಮ್ಸ್‌) ಕಾಸರಗೋಡು ಜಿಲ್ಲೆಗೆ ನೀಡಬೇಕೆಂದು ಆಗ್ರಹಿಸಿ ದಿಲ್ಲಿಗೆ ತೆರಳಿದ ಸರ್ವಪಕ್ಷ ನಿಯೋಗಕ್ಕೆ ಈ ಬಗ್ಗೆ ಭರವಸೆ ನೀಡಿದರು.

ಕಾಸರಗೋಡು ಸಂಸದ ಪಿ. ಕರುಣಾ ಕರನ್‌, ಕಣ್ಣೂರು ಸಂಸದೆ ಶ್ರೀಮತಿ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು,ಶಾಸಕರಾದ ಎಂ. ರಾಜ ಗೋಪಾಲ್‌, ಕಾಸರಗೋಡು ಜಿಲ್ಲಾ   ಪಂಚಾಯತ್‌ ಸದಸ್ಯ ನ್ಯಾಯವಾದಿ ಕೆ. ಶ್ರೀಕಾಂತ್‌, ಸಿಪಿಐ  ಜಿಲ್ಲಾ ಕಾರ್ಯದರ್ಶಿ ಗೋವಿಂದನ್‌ ಪಳ್ಳಿಕಾಪ್ಪಿಲ್‌ ಮೊದಲಾ ದವರನ್ನೊಳಗೊಂಡ ನಿಯೋಗ ದಿಲ್ಲಿಗೆ ತೆರಳಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಕಾಸರಗೋಡು ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿತು.

ರೈಲ್ವೇ ಸಚಿವರ ಭೇಟಿ ಸಾಧ್ಯವಾಗಲಿಲ್ಲ
ಕಾಂಞಂಗಾಡ್‌ – ಕಾಣಿಯೂರು ರೈಲು ಹಳಿ, ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲು ನಿಲುಗಡೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲು ರೈಲ್ವೇ ಸಚಿವರನ್ನು ಭೇಟಿಯಾಗಲು ತೀರ್ಮಾನಿಸಿದ್ದರೂ ಸಾಧ್ಯವಾಗಲಿಲ್ಲ.

ಆರೋಗ್ಯ ಸಚಿವರ ಭೇಟಿಗೆ ಸಲಹೆ 
ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಕಾಸರಗೋಡು ಜಿಲ್ಲೆಯಲ್ಲಿನ ಆರೋಗ್ಯ ರಂಗದ ಸಮಸ್ಯೆಗಳ ಬಗ್ಗೆ ಸಮಗ್ರ ವರದಿಯನ್ನು ನೀಡುವಂತೆ ವೆಂಕಯ್ಯ ನಾಯ್ಡು ಅವರು ನಿಯೋಗಕ್ಕೆ ತಿಳಿಸಿದರು. ಉಪರಾಷ್ಟ್ರಪತಿ ಅವರಿಂದ ಅನುಕೂಲಕರ ಪ್ರತಿಕ್ರಿಯೆ ವ್ಯಕ್ತವಾಗಿರುವುದಾಗಿ ನಿಯೋಗ ತಿಳಿಸಿದೆ. ಆರೋಗ್ಯ ಸಚಿವರನ್ನು ಭೇಟಿಯಾಗುವುದಾಗಿ ನಿಯೋಗ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next