Advertisement

ಕ್ಷೇತ್ರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಶಾಸಕ

04:32 PM Nov 09, 2019 | Suhan S |

ಮೇಲುಕೋಟೆ: ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಮಾಜಿ ಸಚಿವ ಹಾಗೂ ಮೇಲುಕೋಟೆ ಎಂದು ಶಾಸಕ ಪುಟ್ಟರಾಜು ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸುತ್ತಿರುವ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಮೇಲುಕೋಟೆ ಕ್ಷೇತ್ರದಲ್ಲಿರುವ ಕಲ್ಯಾಣಿಗಳನ್ನು ಇನ್ಫೋಸಿಸ್‌ ಸಹಯೋಗದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಪುರಾತನ ಸ್ಥಳಗಳಿಗೆ ಕಾಯಕಲ್ಪ ನೀಡುವ ಮೂಲಕ ಮೂಲ ರೂಪಕ್ಕೆ ಧಕ್ಕೆಯಾಗದ ರೀತಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

Advertisement

14 ವಾಣಿಜ್ಯ ಮಳಿಗೆ ನಿರ್ಮಾಣ: ಗ್ರಾಮ ಪಂಚಾಯಿತಿ ಹೇಮಾವತಿ ವಸತಿಗೃಹಗಳ ಮುಂಭಾಗ ನಾಗರೀಕರು ಇಟ್ಟುಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ವೈರಮುಡಿ ಜಾತ್ರಾ ಮಹೋತ್ಸವದ ನಂತರ ತೆರವುಗೊಳಿ ಸಿತ್ತು. ಇದೀಗ ಅದೇ ಸ್ಥಳದಲ್ಲಿ ಅಚ್ಚುಕಟ್ಟಾಗಿ 14 ವಾಣಿಜ್ಯ ಮಳಿಗೆಗಳನ್ನು ಗ್ರಾಪಂ ಅನುದಾನದಲ್ಲಿ ಮೊದಲ ಹಂತದಲ್ಲೇ ನಿರ್ಮಿಸ ಲಾಗುತ್ತಿದೆ. ಪ್ರಥಮ ಹಂತದ ಮಳಿಗೆಗಳ ನಿರ್ಮಾಣಕ್ಕೆ 20 ಲಕ್ಷ ರೂ. ಮೀಸಲಿರಿಸಲಾಗಿದೆ ಎಂದು ಗ್ರಾಪಂ ಅಧ್ಯಕ್ಷ ಅವ್ವಗಂಗಾಧರ್‌ ಮಾಹಿತಿ ನೀಡಿದ್ದಾರೆ ಎಂದರು.

ರಸ್ತೆಗಳ ಅಭಿವೃದ್ಧಿ: ಮೇಲುಕೋಟೆಯ ಎಲ್ಲಾ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಸುಮಾರು 40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಲಾಗಿದೆ. ಈಗಾಗಲೆ ಟೆಂಡರ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಪ್ರವಾಸಿ ಮಂದಿರದಿಂದ ಪೊಲೀಸ್‌ ಠಾಣೆವರೆಗೆ ನಾಲ್ಕುಪಥದ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸುಮಲತಾ, ಮನ್‌ಮುಲ್‌ ನಿರ್ದೇಶಕ ಕಾಡೇನಹಳ್ಳಿರಾಮಚಂದ್ರು, ಜಿಪಂ ಸದಸ್ಯ ತ್ಯಾಗರಾಜು, ಉಪ ವಿಭಾಗಾಧಿಕಾರಿ ಶೈಲಜಾ, ತಾಪಂ ಇಒ ಮಹೇಶ್‌, ತಹಶೀಲ್ದಾರ್‌ ಪ್ರಮೋದ್‌ ಪಾಟೀಲ್‌, ಗ್ರಾಪಂ ಅಧ್ಯಕ್ಷ ಅವ್ವಗಂಗಾಧರ್‌ ಉಪಾಧ್ಯಕ್ಷೆ ಮಮತಾ, ಪಿಡಿಒ ತಮ್ಮಣ್ಣಗೌಡ ಮೊದಲಾದವರು ಭಾಗವಹಿಸಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next