Advertisement

ಆಯುಷ್‌ ವೈದ್ಯರ ಬೇಡಿಕೆ ಈಡೇರಿಸಿ

06:15 AM May 22, 2020 | Suhan S |

ಯಾದಗಿರಿ: ಆಯುಷ್‌ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

Advertisement

ಆಯುಷ್‌ ಫೆಡರೇಷನ್‌ ಆಫ್‌ ಇಂಡಿಯಾ ಪದಾಧಿಕಾರಿ ಡಾ. ಆನಂದ ಕಿರಿಶ್ಯಾಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಅವರನ್ನು ಭೇಟಿಯಾದ ವೈದ್ಯರ ನಿಯೋಗ, ಆಯುಷ್‌ ವೈದ್ಯರ ವೇತನ ಹೆಚ್ಚಳದ ಬೇಡಿಕೆಯೊಂದಿಗೆ ಕಪ್ಪು ಬಟ್ಟೆ ಧರಿಸಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಮೇ 23ರಿಂದ ಎಲ್ಲ ವಿಭಾಗದ ಗುತ್ತಿಗೆ ಆಯುಷ್‌ ವೈದ್ಯರು ಸೇವೆ ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದರು.

ಶಿಷ್ಯ ವೇತನ ಪಾವತಿಯಲ್ಲಿಯೂ ಆಯುಷ್‌ ಅಭ್ಯರ್ಥಿಗಳಿಗೆ ಕಡಿಮೆ ನೀಡುತ್ತಿದ್ದು, ಇದನ್ನು ವಿರೋಧಿ ಸಿಯೂ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಆಯುಷ್‌ ವೈದ್ಯರಿಗೆ ಷರತ್ತಿಗೆ ಒಳಪಟ್ಟು ಆಲೋಪಥಿ ಔಷಧಿ ಬಳಸಲು ಅನುಮತಿ ನೀಡುವುದು, ಕೋವಿಡ್‌-19 ಸಂದರ್ಭದಲ್ಲಿಯೂ ಆಯುಷ್‌ ವೈದ್ಯರು ಜ್ವರ ತಪಾಸಣೆ ಕೇಂದ್ರ, ಕ್ವಾರಂಟೈನ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರಿ ಆಯುಷ್‌ ವೈದ್ಯರಿಗೆ ನೀಡಿರುವ ಆದೇಶ ಖಾಸಗಿ ವೈದ್ಯರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಡಾ. ಭಾಗರೆಡ್ಡಿ ಸೇರಿದಂತೆ ಇತರೆ ಆಯುಷ್‌ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next