Advertisement
ನಗರದ ಶಿವಪ್ಪ ನಾಯಕ ಬಡಾವಣೆಯಲ್ಲಿ ನಗರಸಭೆ ವತಿಯಿಂದ ಫಾಗಿಂಗ್ ಹಾಗೂ ಮೆಲಾಥಿನ್ ದ್ರಾವಣ ಸಿಂಪಡಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಕಕಾಲದಲ್ಲಿ ನಾಲ್ಕು ಫಾಗಿಂಗ್ ಯಂತ್ರಗಳು ಹಾಗೂ ಎರಡು ಮೆಲಾಥಿನ್ ದ್ರಾವಣ ಸಿಂಪಡಣೆ ಯಂತ್ರದ ಜೊತೆಗೆ ಹತ್ತಕ್ಕೂ ಹೆಚ್ಚು ಪೌರ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು. ಈಗಾಗಲೇ ಮೂರ್‍ನಾಲ್ಕು ಶಂಕಿತ ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಸೂಕ್ತ ಸಂದರ್ಭದಲ್ಲಿ ಚಿಕಿತ್ಸೆ ನೀಡಿದ್ದರಿಂದ ಯಾವುದೇ ಸಾವುನೋವು ಸಂಭವಿಸಿಲ್ಲ. ಬಿಸಿಲು ಮತ್ತು ಮಳೆ ಇರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುತ್ತದೆ. ಜನರಲ್ಲಿ ಜಾಗೃತಿ ಮೂಡಿಸಲು ನಗರಸಭೆ ವತಿಯಿಂದ ಕರಪತ್ರ ಹಂಚುವುದು, ಕಸ ಸಂಗ್ರಹಣ ವಾಹನದಲ್ಲಿ ಧ್ವನಿವರ್ಧಕ ಅಳವಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆ ಅ ಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು ಜನರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದರು.
Advertisement
ನಗರದ 31 ವಾರ್ಡ್‌ಗಳಲ್ಲೂ ಫಾಗಿಂಗ್: ಉಷಾ
01:20 PM Jul 29, 2017 | |
Advertisement
Udayavani is now on Telegram. Click here to join our channel and stay updated with the latest news.