Advertisement

ಬೇಡಿಕೆ ಈಡೇರಿಸಿ: ರೈತಸಂಘ

05:23 PM Aug 27, 2019 | Suhan S |

ಮಾಗಡಿ: ಇನ್ನೊಂದು ತಿಂಗಳೊಳಗಾಗಿ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪುರಸಭೆ ಮುಂದೆ ರೈತ ಸಂಘಟನೆ ನೇತೃತ್ವ‌ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ತಿಳಿಸಿದರು.

Advertisement

ವಿವಿಧ ಬೇಡಿಕೆ:ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪುರಸಭಾ ಮುಖ್ಯಾಧಿಕಾರಿ ಎಚ್.ಎಸ್‌. ನಟ ರಾಜ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ರೈತರು ಕುರಿ, ಮೇಕೆ, ಕೋಳಿ ಸಂತೆಗೆ ನಾಡಪ್ರಭು ಕೆಂಪೇಗೌಡ ಕೋಟೆ ಬೇಡ. ಬೇರೆಡೆ ಜಾಗ ಗುರುತಿಸಿ, ವ್ಯಾಪಾರಕ್ಕೆ ಶೆಡ್‌ ನಿರ್ಮಿ ಸಬೇಕು. ಶುದ್ಧ ನೀರು, ಶೌಚಾಲಯದ ವ್ಯವಸ್ಥೆ ಮಾಡಬೇಕು. ಕೆಂಪೇಗೌಡ ತನ್ನ ಪತ್ನಿ ಹೆಸರಿನಲ್ಲಿ ನಿರ್ಮಿಸಿರುವ ಐತಿಹಾಸಿಕ ಭಾರ್ಗವತಿ ಕೆರೆಗೆ ಪಟ್ಟಣದ ಒಳಚರಂಡಿ ನೀರು ಹರಿಯು ತ್ತಿರುವುದನ್ನು ತಡೆಯಬೇಕು. ಹೂ, ಸೊಪ್ಪು ತರಕಾರಿ ಮಾರಾಟ ಮಾಡುವವರಿಗೆ ಸೂಕ್ತ ಸ್ಥಳದ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಾಗುವ ಅನಾಹುತಗಳಿಗೆ ಪುರಸಭಾ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು. ರೈತ ಸಂಘದ ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್‌. ನಟರಾಜ್‌, ತಮ್ಮ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸುವ ಭರವಸೆ ನೀಡಿದರು. ದಸಂಸ ಸಂಚಾಲಕ ದೊಡ್ಡಯ್ಯ, ಪುರಸಭೆಯಲ್ಲಿ ಸು ಮಾರು 3 ಸಾವಿರ ಅಕ್ರಮ ಖಾತೆಗಳಿದ್ದು ಪತ್ತೆ ಹಚ್ಚಿ ವಜಾ ಗೊಳಿಸಬೇಕು. ಇನ್ನು ಪುರೋಭಿವೃದ್ಧಿ ಹೆಸರಿನಲ್ಲಿ ಅಧಿಕಾರ ಹಿಡಿಯವ ವಾರ್ಡ್‌ ಸದಸ್ಯರಿಗೆ ನಾಚಿಕೆಯಾಗಬೇಕು ಎಂದರು.

ದಲಿತ ಮುಖಂಡ ಸಿ.ಜಯರಾಂ, ಮಧುಗೌಡ ಮತ್ತಿತರರು ಮಾತನಾಡಿದರು. ಇದೇ ವೇಳೆ ನೂರಾರು ರೈತರು ಎತ್ತಿನಗಾಡಿಯೊಂದಿಗೆ ಪಟ್ಟ ಣದ ಪುರಸಭೆ ಮುಂದೆ 2 ಗಂಟೆ ಕಾಲ ಪ್ರತಿಭಟನಾ ಧರಣಿ ನಡೆಸಿದರು. ಟೌನ್‌ ಅಧ್ಯಕ್ಷ ರಂಗಸ್ವಾಮಿ, ನೆಸೆಪಾಳ್ಯದ ಮಂಜುನಾಥ್‌, ಜಯಣ್ಣ, ಗಿರಿ ಯ ಪ್ಪ, ಚೆನ್ನರಾಯಪ್ಪ, ದಿವಾಕರ್‌, ರವಿ, ಚಕ್ರಭಾವಿ ಗಿರೀಶ್‌, ಜುಟ್ಟನಹಲಿ ಯೋಗೇಶ್‌ ಇದ್ದರು.

ಬಂದೋಬಸ್ತ್: ಮುನ್ನೆಚ್ಚರಿಕೆ ಕ್ರಮದಿಂದಾಗಿ ಪಿಎಸ್‌ಐ ಟಿ.ವೆಂಕಟೇಶ್‌ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next