Advertisement

ದೀಪಾವಳಿ ವೇಳೆಗೆ ಪೆಟ್ರೋಲ್‌, ಡೀಸಿಲ್‌ ಬೆಲೆ ಇಳಿಕೆ : ಪ್ರಧಾನ್‌

03:49 PM Sep 19, 2017 | |

ಅಮೃತ್‌ಸರ : ಗಗನ ಮುಖೀಯಾಗಿರುವ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆ ಮುಂದಿನ ತಿಂಗಳು ದೀಪಾವಳಿ ಒಳಗಾಗಿ ಇಳಿಯಲಿವೆ ಎಂಬ ಸಿಹಿ ಸುದ್ದಿಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

Advertisement

ಇಂಧನ ಬೆಲೆ ದಿನವಹಿ ಬದಲಾವಣೆಗೆ ಒಳಪಡುವ ವ್ಯವಸ್ಥೆಯನ್ನು ಈಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ಬಳಿಕದಲ್ಲಿ ಪೆಟ್ರೋಲ್‌ ಮತ್ತು ಡೀಸಿಲ್‌ ಬೆಲೆ ಈಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿರುವುದಕ್ಕೆ ದೇಶಾದ್ಯಂತ ಟೀಕೆ, ಖಂಡನೆ, ಅಸಮಾಧಾನ ವ್ಯಕ್ತವಾಗಿತ್ತು.

ಅಮರಿಕದ ಮೇಲೆ ಈಚೆಗೆ ಎರಗಿದ ಪ್ರಳಯಾಂತಕರಾರಿ ಚಂಡಮಾರುತದಿಂದಾಗಿ ಅಲ್ಲಿನ ತೈಲ ಸಂಸ್ಕರಣ ಘಟಕಗಳು ವ್ಯಾಪಕ ಹಾನಿಗೆ ಗುರಿಯಾಗಿದ್ದವು; ಪರಿಣಾಮವಾಗಿ ತೈಲ ಉತ್ಪಾದನೆ ಶೇ.13ರಷ್ಟು ಕುಸಿದಿತ್ತು. ಹಾಗಾಗಿ ತೈಲ ಪೂರೈಕೆ ಕುಸಿದು ಬೇಡಿಕೆ ಏರಿತ್ತು; ಪರಿಣಾಮವಾಗಿ ತೈಲ ಬೆಲೆ ಏರಿತ್ತು ಎಂದು ಈಚೆಗಷ್ಟೇ ಕ್ಯಾಬಿನೆಟ್‌ದರ್ಜೆ ಸಚಿವರಾಗಿ ಭಡ್ತಿ ಪಡೆದು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ಪಡೆದ ಪ್ರಧಾನ್‌ ಹೇಳಿದರು. 

ಏಕ ದೇಶ – ಏಕ ತೆರಿಗೆ ಕ್ರಮದ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ (ಜಿಎಸ್‌ಟಿಗೆ) ಪೆಟ್ರೋಲ್‌ ಮತ್ತು ಡೀಸಿಲ್‌ ಅನ್ನು ಯಾವಾಗ ಒಳಪಡಿಸುತ್ತೀರಿ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರಧಾನ್‌, “ಅದನ್ನು ಬೇಗನೆ ಜಿಎಸ್‌ಟಿ ಅಡಿ ತರಲಾಗುವುದೆಂದು ಹಾರೈಸುತ್ತೇನೆ; ಅದರಿಂದ ಇಂಧನ ಗ್ರಾಹಕರಿಗೆ ಮಹತ್ತರ ಲಾಭ ಸಿಗುವಂತಾಗುತ್ತದೆ’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next