Advertisement

ಪೆಟ್ರೋಲ್‌, ಡೀಸೆಲ್‌ ಬೆಲೆ ತಲಾ 20 ಪೈಸೆ ಇಳಿಕೆ

08:49 PM Aug 22, 2021 | Team Udayavani |

ನವದೆಹಲಿ: ಭಾನುವಾರ ದೇಶಾದ್ಯಂತ ತೈಲಬೆಲೆಗಳಲ್ಲಿ ಇಳಿಕೆಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ತಲಾ 20 ಪೈಸೆ ಇಳಿದಿದೆ.

Advertisement

ಕಳೆದ ಒಂದು ತಿಂಗಳಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್‌ ಬೆಲೆ ಇಳಿದಿದ್ದರೆ, ಡೀಸೆಲ್‌ ಬೆಲೆ ವಾರದಲ್ಲಿ ನಾಲ್ಕನೇ ಬಾರಿ ಇಳಿಕೆಯಾಗಿದೆ.

ಇದು ಗ್ರಾಹಕರ ಮಟ್ಟಿಗೆ ಆಶಾದಾಯಕವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆ ತೀರಾ ಕುಸಿದಿರುವುದರ ಪರಿಣಾಮ, ಭಾರತದಲ್ಲೂ ಅದರ ಪರಿಣಾಮ ಕಂಡುಬಂದಿದೆ.

ಭಾನುವಾರ ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 12 ಪೈಸೆ ಕುಸಿದು 105.13 ರೂ.ಗೆ ಮುಟ್ಟಿದೆ. ಇನ್ನು ಡೀಸೆಲ್‌ ಬೆಲೆ 16 ಪೈಸೆ ಇಳಿದು 94.49 ರೂ.ಗಳಾಗಿದೆ.

ಇದನ್ನೂ ಓದಿ :‘ನಾನು ಕಾಮನ್ ಮ್ಯಾನ್’ :  ಸಿಎಂ ಬೊಮ್ಮಾಯಿ ಸರಳತೆಗೆ ಅಪಾರ ಮೆಚ್ಚುಗೆ    

Advertisement
Advertisement

Udayavani is now on Telegram. Click here to join our channel and stay updated with the latest news.

Next