Advertisement

Crime: ಬುಲೆಟ್‌ ಖರೀದಿಸಲು ಸಾಧ್ಯವಾಗದ್ದಕ್ಕೆ ಹತಾಶೆ; 3 ಬೈಕ್‌ಗಳಿಗೆ ಬೆಂಕಿ ಹಚ್ಚಿದವ ಸೆರೆ

11:34 AM Sep 25, 2024 | Team Udayavani |

ಬೆಂಗಳೂರು: ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಖರೀದಿಸಲು ಸಾಧ್ಯವಾಗದಕ್ಕೆ ಹತಾಶೆಗೊಂಡು ಪೇಯಿಂಗ್‌ ಗೆಸ್ಟ್‌ ಆವರಣದಲ್ಲಿ ನಿಲುಗಡೆ ಮಾಡಿದ್ದ 3 ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದ ಯುವಕನೊಬ್ಬ ಪೀಣ್ಯ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಪುಲ್ಕಿತ್‌(25) ಬಂಧಿತ. ಆರೋಪಿಯು ಸೆ.19ರ ಮುಂಜಾನೆ ವೇಣು ಗೋಪಾಲನಗರದ ಎಚ್‌ಎಂಟಿ ಲೇಔಟ್‌ನ ಪಿಜಿ ವೊಂದರ ಆವರಣದಲ್ಲಿ ನಿಲು ಗಡೆ ಮಾಡಿದ್ದ ರಾಯಲ್‌ ಎನ್‌ಫೀಲ್ಡ್‌, ಆಕ್ಟೀವಾ ಹಾಗೂ ಫ್ಯಾಷನ್‌ ಪೋ› ಬೈಕ್‌ಗಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಪಿಜಿ ನಿವಾಸಿ ದೀಪಾಂಶು ಅಗರ್‌ವಾಲ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?: ಯಶವಂತಪುರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ದೀಪಾಂಶು ಅಗರ್‌ವಾಲ್‌ ಕಳೆದೊಂದು ವರ್ಷದಿಂದ ಎಚ್‌ಎಂಟಿ ಲೇಔಟ್‌ನ ಪಜಲ್ಸ… ಲಿವಿಂಗ್‌ ಬ್ರವಾಡೋ ಹೌಸ್‌ ಪಿಜಿಯಲ್ಲಿ ನೆಲೆಸಿದ್ದರು. ಜುಲೈನಲ್ಲಿ ಸೆಕೆಂಡ್‌ ಹ್ಯಾಂಡ್‌ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಖರೀದಿಸಿದ್ದರು. ಸೆ.18ರಂದು ರಾತ್ರಿ 11 ಗಂಟೆಗೆ ಪಿಜಿ ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಪಿಜಿಗೆ ತೆರಳಿ ನಿದ್ದೆಗೆ ಜಾರಿದ್ದರು.

ಸೆ.19ರ ತಡರಾತ್ರಿ  ಸುಮಾರು 2 ಗಂಟೆಗೆ ಪಿಜಿ ಮುಂದೆ ಜನ ಕೂಗಾಡುವ ಶಬ್ದ ಕೇಳಿಬಂದಿದ್ದು, ಅದರಿಂದ ಎಚ್ಚರಗೊಂಡು ಹೊರಗೆ ಬಂದು ನೋಡಿದಾಗ, ತನ್ನ ಬುಲೆಟ್‌ ಸೇರಿ ಮೂರು ದ್ವಿಚಕ್ರ ವಾಹನಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಮರಳು ಹಾಗೂ ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅದೇ ವೇಳೆ ಸುದ್ದಿ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದರು. ಘಟನೆಯಲ್ಲಿ ರಾಯಲ್‌ ಎನ್‌ಫೀಲ್ಡ್‌ ಸೇರಿ ಮೂರು ಬೈಕ್‌ಗಳು ಸುಟ್ಟು ಹೋಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸಿಸಿ ಕ್ಯಾಮೆರಾ ಸುಳಿವು ಆಧರಿಸಿ ಬಂಧನ: ಈ ಸಂಬಂಧ ದೀಪಾಂಶು ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ, ಸೆ.19ರಂದು ಮುಂಜಾನೆ ಸುಮಾರು 1.40ಕ್ಕೆ ಅಪರಿಚಿತ ವ್ಯಕ್ತಿ ಪಿಜಿ ಆವರಣಕ್ಕೆ ಬಂದು ಬುಲೆಟ್‌ನಿಂದ ಪೆಟ್ರೋಲ್‌ ಕದ್ದು, ಬಳಿಕ ಅದೇ ಪೆಟ್ರೋಲ್‌ ಅನ್ನು ಬುಲೆಟ್‌ ಸೇರಿ 3 ಬೈಕ್‌ಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ, ಬೆಂಕಿಯಲ್ಲಿ ಸಿಗರೆಟ್‌ ಹಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿರುವುದು ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.

Advertisement

ಬುಲೆಟ್‌ ಖರೀದಿಸಲು ಆಗದಿದ್ದಕ್ಕೆ ಕೃತ್ಯ: ಆರೋಪಿ:

ಆರೋಪಿ ಪುಲ್ಕಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, “ತನಗೆ ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಖರೀದಿಸಬೇಕೆಂಬ ಆಸೆ ಇತ್ತು. ಆದರೆ, ಖರೀದಿಸಲು ಸಾಧ್ಯವಾಗಲಿಲ್ಲ. ಅದರಿಂದ ಹತಾಶೆಗೊಂಡು ಕೃತ್ಯ ಎಸಗಿದ್ದೇನೆ’ ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next