Advertisement

ಹಣ್ಣು ತರಕಾರಿ ಒಣಗಿಸೋ ಯಂತ್ರ

08:30 PM Dec 15, 2019 | Lakshmi GovindaRaj |

ದ್ರಾಕ್ಷಿ ಮತ್ತಿತರ ಹಣ್ಣು, ಕೆಲವಾರು ತರಕಾರಿಗಳನ್ನು ಒಣಗಿಸಿ ಮಾರಾಟ ಮಾಡುವ ಕಾರ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಳೆಗಾಲದಲ್ಲಿ ಅವುಗಳನ್ನು ಅಂಗಳದಲ್ಲಿ ಒಣಗಿಸಲು ಸಾಧ್ಯವಿಲ್ಲ. ಮಲೆನಾಡು ಭಾಗಗಳಲ್ಲಂತೂ ಚಳಿಗಾಲ, ಮಳೆಗಾಲದಲ್ಲಿ ಶೀತ ವಾತಾವರಣವೇ ಹೆಚ್ಚು. ಇಂಥ ಸಂದರ್ಭಗಳಲ್ಲಿ ಒಣಹಣ್ಣು, ತರಕಾರಿಗಳಿಗೆ ಹೆಚ್ಚು ಬೇಡಿಕೆಯಿರುತ್ತದೆ.

Advertisement

ಇದನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತಜ್ಞರು ಯಂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.‌ ಈ ಯಂತ್ರದ ವಿಶೇಷತೆ ಎಂದರೆ ಸೌರಶಕ್ತಿ ಮತ್ತು ಬಯೋಮಾಸ್‌(ಸಸ್ಯ ತ್ಯಾಜ್ಯ) ಎರಡನ್ನೂ ಬಳಸಿಯೂ ಚಾಲನೆ ಮಾಡಬಹುದು. ಬೇಸಿಗೆ ಕಾಲದಲ್ಲಿ ಸೌರಶಕ್ತಿ ಬಳಸಿದರೆ ಮಳೆಗಾಲದಲ್ಲಿ ಬಯೋಮಾಸ್‌ ಬಳಸಬಹುದು. ಬಯಲುಸೀಮೆಯಲ್ಲಿ ಚಳಿಗಾಲದಲ್ಲಿಯೂ ಸೌರಶಕ್ತಿ ಬಳಸಬಹುದು.

ಈ ಡ್ರೈಯರ್‌ನಲ್ಲಿ ಒಂದು ಬಾರಿಗೆ 10- 15 ಕೆ.ಜಿ. ಹಣ್ಣು ಅಥವಾ ತರಕಾರಿ ಒಣಗಿಸಬಹುದು. ಶೀಘ್ರವಾಗಿಯೂ ಒಣಗುತ್ತದೆ. ಡೀಸೆಲ್, ವಿದ್ಯುತ್‌ ಶಕ್ತಿ ಬಳಕೆಗೆ ಹೋಲಿಸಿದರೆ ಇದು ಮಿತವ್ಯಯಕಾರಿ. ಇದರ ಬೆಲೆ ಮತ್ತಿತರ ಹೆಚ್ಚಿನ ವಿವರಗಳಿಗೆ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ಕರೆ ಮಾಡಿ ತಿಳಿದುಕೊಳ್ಳಬಹುದು. ಸಂಪರ್ಕ: 080- 23330153

* ಕುಮಾರ ರೈತ

Advertisement

Udayavani is now on Telegram. Click here to join our channel and stay updated with the latest news.

Next