Advertisement

Watch: ರಸ್ತೆ ಬದಿ ಹಣ್ಣಿನ ವ್ಯಾಪಾರದ ಜತೆಗೆ ಮಕ್ಕಳಿಗೆ ಪಾಠ ಕಲಿಸುವ ತಾಯಿಯ ವಿಡಿಯೋ ವೈರಲ್

03:39 PM Aug 31, 2023 | Team Udayavani |

ಬೆಂಗಳೂರು: ಜೀವನ ಸಾಗಿಸುವ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ಗ್ರಾಹಕರು ಯಾರೂ ಇಲ್ಲದ ಸಮಯದಲ್ಲಿ ಮಕ್ಕಳಿಗೆ ಪಾಠ ಕಲಿಸುತ್ತಿರುವ ವಿಡಿಯೋಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:G20 ಶೃಂಗಸಭೆಗೆ ಭರದ ಸಿದ್ಧತೆ: ಕೋತಿಗಳ ಕಾಟ ತಪ್ಪಿಸಲು ಮಹಾನಗರ ಪಾಲಿಕೆ ಹೊಸ ತಂತ್ರ

ಗ್ರಾಹಕರು ಯಾರು ಇರದ ಸಂದರ್ಭದಲ್ಲಿ ತನ್ನ ಹಣ್ಣಿನ ತಳ್ಳುವ ಗಾಡಿಯ ಹಿಂಬದಿಯಲ್ಲಿ ಮಹಿಳೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೀವನೋಪಾಯಕ್ಕೆ ಹಣ್ಣಿನ ವ್ಯಾಪಾರ ಮಾಡುವ ಮತ್ತು ಮಕ್ಕಳ ಭವಿಷ್ಯದ ಕುರಿತು ಗಮನಹರಿಸುವ ಮಹಿಳೆಯ ಬಹುಪ್ರತಿಭೆಯ ಸಾಮರ್ಥ್ಯ ನೆಟ್ಟಿಗರ ಮನಗೆದ್ದಿರುವುದಾಗಿ ವರದಿ ತಿಳಿಸಿದೆ.

ಈ ವಿಡಿಯೋ ಬೆಂಗಳೂರಿನದ್ದು…

Advertisement

ಈ ವಿಡಿಯೋದ ಮೂಲ ಬೆಂಗಳೂರು ಆಗಿದೆ.  ಹಣ್ಣಿನ ಅಂಗಡಿ ಸಮೀಪ ಕರ್ನಾಟಕ ರಿಜಿಸ್ಟ್ರೇಶನ್‌ ನಂಬರ್‌ ನ ವಾಹನಗಳು ನಿಂತಿದ್ದು, ವಿಡಿಯೋದಲ್ಲಿಯೂ ಸುರಾನಾ ವಿದ್ಯಾಲಯದ ಸ್ಕೂಲ್‌ ಬಸ್‌ ಸಂಚರಿಸಿರುವುದು ಸೆರೆಯಾಗಿದ್ದು, ಇದು ಬೆಂಗಳೂರಿನ ಕೆಆರ್‌ ಪುರಂ ಸುತ್ತಮುತ್ತ ಪ್ರದೇಶದ ವಿಡಿಯೋ ಎಂದು ಗ್ರಹಿಸಲಾಗಿದೆ. ವೈರಲ್‌ ವಿಡಿಯೋವನ್ನು ಜಾರ್ಖಂಡ್‌ ನ ಡೆಪ್ಯುಟಿ ಕಲೆಕ್ಟರ್‌ ಸಂಜಯ್‌ ಕುಮಾರ್‌ ತಮ್ಮ ಅಧಿಕೃತ x ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಆಗಸ್ಟ್‌ 29ರಂದು ಶೇರ್‌ ಆದ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೂರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 28 ಸೆಕೆಂಡ್ಸ್‌ ನ ಈ ವಿಡಿಯೋ ವೀಕ್ಷಕರ ಮನಗೆದ್ದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next