ಪಿಲಿಕುಳ: ಹಣ್ಣುಗಳ ಉತ್ಸವ ಆಯೋಜಿಸುವುದರ ಮೂಲಕ ವಿವಿಧ ಹಣ್ಣುಗಳ ಉತ್ಪನ್ನಕ್ಕೆ ಪ್ರಾಮುಖ್ಯ ನೀಡು ತ್ತಿರುವುದು ಶ್ಲಾಘನೀಯ. ಆರೋಗ್ಯಕ್ಕೂ ಉತ್ತಮವಾಗಿರುವ ಹಣ್ಣುಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಅಗತ್ಯವೂ ಆಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಲಸಿನ ಹಣ್ಣಿನ ಮೇಳ ಪಿಲಿಕುಳದಲ್ಲಿ ನಡೆಯುತ್ತಿದೆ. ಆದರೆ, ಹಲಸಿನ ಹಣ್ಣು ತೀರಾ ಕಡಿಮೆ ಇದೆ. ರೈತರು ಹಲಸಿನ ಹಣ್ಣಿನ ಬೆಳೆಗೆ ಪ್ರಾಮುಖ್ಯ ನೀಡಬೇಕು ಎಂದವರು ಹೇಳಿದರು.
ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಹರೀಶ್ ಶೆಟ್ಟಿ, ಎಂಆರ್‌ಪಿಎಲ್ನ ಚೀಫ್ ಜನರಲ್ ಮ್ಯಾನೇಜರ್ ಯು. ವಿ. ಐತಾಳ್, ಭಾರತೀಯ ರೆಡ್‌ಕ್ರಾಸ್ ದ.ಕ. ಘಟಕದ ಚೆಯರ್‌ಮನ್ ಶಾಂತಾರಾಮ ಶೆಟ್ಟಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪುರಾಣಿಕ್, ಪಿಲಿಕುಳ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕಿ ಮೇಘನಾ, ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ವಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.
ಘಮಘಮ ಗುಜ್ಜೆ ಕಬಾಬ್
Advertisement
ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಜೂ. 9ರ ವರೆಗೆ ನಡೆಯುವ ಹಣ್ಣುಗಳ ಉತ್ಸವ ಮತ್ತು ಹಲಸು ಮೇಳವನ್ನು ಅವರು ಶನಿವಾರ ಉದ್ಘಾಟಿಸಿದರು.
Related Articles
Advertisement
ಹಣ್ಣುಗಳ ಉತ್ಸವದಲ್ಲಿ ಹಲಸಿನ ಮೇಳವನ್ನೂ ಆಯೋಜಿ ಸಲಾಗಿತ್ತಾದರೂ ಹಲಸಿನ ಹಣ್ಣುಗಳ ಸಂಖ್ಯೆ ತೀರಾ ಕಡಿಮೆ ಇತ್ತು. ವಿವಿಧ ಜಾತಿಯ ಮಾವಿನ ಹಣ್ಣುಗಳು ಬಾಯಿಯಲ್ಲಿ ನೀರೂರಿಸುವಂತಿದ್ದವು. ಹಲಸು, ಮಾವಿನ ಹಣ್ಣಿನಿಂದ ಮಾಡಿದ ವೈವಿಧ್ಯ ಖಾದ್ಯ, ಗುಜ್ಜೆ ಕಬಾಬ್, ಹಪ್ಪಳ, ಸಂಡಿಗೆ ಹಣ್ಣು ಪ್ರಿಯರನ್ನು ಆಕರ್ಷಿಸುತ್ತಿತ್ತು. ಜ್ಯಾಕ್‌ಫ್ರುಟ್, ಕಿತ್ತಳೆ, ಅನನಾಸ್ ಹಣ್ಣುಗಳು ಮಾತ್ರವಲ್ಲದೆ, ವಿವಿಧ ಸಾವಯವ ಉತ್ಪನ್ನಗಳ ಮಳಿಗೆ, ಹೂವು, ಹಣ್ಣುಗಳ ಗಿಡಗಳ ಮಾರಾಟವೂ ಇತ್ತು.
ವಿಶ್ವಕಪ್ ಆಕರ್ಷಣೆ
ಹಣ್ಣುಗಳಲ್ಲೇ ತಯಾರಿಸಿದ ವಿಶ್ವಕಪ್ ಅನ್ನು ಹೋಲುವ ಟ್ರೋಫಿ ಉತ್ಸವದ ಪ್ರಮುಖ ಆಕರ್ಷಣೆ. ದಾಳಿಂಬೆ, ನಿಂಬೆ, ಮಾವು, ಅನನಾಸ್, ಪಪ್ಪಾಯಿ, ಕಲ್ಲಂಗಡಿ ಮತ್ತು ಹಲಸಿನ ಹಣ್ಣುಗಳನ್ನು ಜೋಡಿಸಿ ಇದನ್ನು ತಯಾರಿಸಿರುವುದು ವಿಶೇಷ. ಪ್ರವೇಶದ್ವಾರವೂ ಹಣ್ಣುಗಳಲ್ಲೇ ರಚನೆಗೊಂಡಿದೆ.