Advertisement

ಹಾವೇರಿ: ಸಾಮಾಜಿಕ ಜಾಲತಾಣ ಬಳಸಿ ಯುವಕನಿಂದ 2.50 ಲಕ್ಷ ವಸೂಲಿ ಮಾಡಿದ ಭೂಪ.!

01:17 PM Jul 11, 2021 | Team Udayavani |

ಹಾವೇರಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ಮೊಸದಿಂದ ಹಣ ವಸೂಲಿ ಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು  2.50 ಲಕ್ಷ ರೂ, ಫೋನ್ ಪೇ ಮತ್ತು ಪೇಟಿಎಂ ಮೂಲಕ ಯುವಕನೋರ್ವನಿಂದ  ಹಣ ಹಾಕಿಸಿಕೊಂಡು  ಮೋಸ ಮಾಡಿರುವ  ಘಟನೆ  ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ನಡೆದಿದೆ.

Advertisement

ಒಂದು ವರ್ಷದ ಹಿಂದೆ ಹಾನಗಲ್ಲ ಯುವಕನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾದ ಮಲ್ಲನಗೌಡ ಎಂಬ ವ್ಯಕ್ತಿ ದೂರವಾಣಿ ಮೂಲಕ ಸಂಪರ್ಕಕ್ಕೆ ಬಂದು, ತನ್ನ ಗೆಳತಿ ಪೂರ್ವಿ ಶೇಟ್ ಅವರ ತಾಯಿಗೆ ಬ್ರೇನ್ ಟ್ಯೂಮರ್ ಆಗಿದೆ. ಅವಳಿಗೆ ಆಸ್ಪತ್ರೆ ಖರ್ಚಿಗೆ ಹಣಬೇಕು. 2.50 ಲಕ್ಷ ರೂ., ಹಣ ನೀಡಿದರೆ ಆಕೆ ಗುಣವಾದ ಬಳಿಕ ತಾಯಿ 5 ಲಕ್ಷ ಕೊಡುವುದಾಗಿ ನಂಬಿಸಿ, ಹಣ ಪಡೆದಿದ್ದಾನೆ.

ಇದನ್ನೂ ಓದಿ: ‘ಬೇರೆಯವರಿಗೆ ಕೆಸರನ್ನು ಹಚ್ಚಲು ಪ್ರಯತ್ನಿಸಿದರೆ ಮೊದಲು ನಮ್ಮ ಕೈ ಕೆಸರಾಗುತ್ತದೆ’

ಒಂದು ವರ್ಷದಿಂದ ನಿರಂತರ ಹಂತ ಹಂತವಾಗಿ 2.50 ಲಕ್ಷ ರೂ., ಹಾಕಿಸಿಕೊಂಡು ಈಗ ಹಣ ಕೊಡದೇ ನಾಪತ್ತೆಯಾಗಿದ್ದಾರೆ. ಸದ್ಯ ಮೋಸ ಹೋದ ಯುವಕ, ಮಲ್ಲನಗೌಡ ಮತ್ತು ಆತನ ಗೆಳತಿ ಆತ್ಮ ಜೋಯ್ಸ್, ಪೂರ್ವಿ ಶೇಟ್ ಸೇರಿದಂತೆ ಮೂವರ ಮೇಲೆ ಹಾವೇರಿ ಸಿ.ಇ.ಎನ್.ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next