ಶ್ರೀನಗರ: ಭಾರತದ ಉತ್ತರ ಭಾಗದ ರಾಜ್ಯಗಳು ಭಾರಿ ಚಳಿಯಿಂದ ನಡುಗುತ್ತಿದೆ. ಅದರಲ್ಲೂ ಜಮ್ಮು ಕಾಶ್ಮೀರದ ದಾಲ್ ಸರೋವರದ ನೀರು ಕನಿಷ್ಠ ಉಷ್ಣಾಂಶದಿಂದ ಮಂಜುಗಡ್ಡೆಯಾಗಿದೆ.
ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ರವಿವಾರ ಮೈನಸ್ 6.2 ಡಿಗ್ರಿ ಸೆಲ್ಸಿಯಸ್ ನಷ್ಟು ದಾಖಲಾಗಿದೆ.
ದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ದೆಹಲಿಯಲ್ಲಿ ಮಂಜು ಮುಸುಕಿದ ವಾತಾವರಣವಿದೆ. ಅದೇ ಕಾರಣದಿಂದ ಉತ್ತರ ಭಾರತದ ಸುಮಾರು ಮೂವತ್ತು ರೈಲು ಓಡಾಟವನ್ನು ನಿಲ್ಲಿಸಲಾಗಿದೆ. ವಿಮಾನ ಯಾನದಲ್ಲೂ ಹಲವಷ್ಟು ಬದಲಾವಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ರವಿವಾರ ರಾಷ್ಟ್ರ ರಾಜಧಾನಿಯಲ್ಲಿ ರವಿವಾರ 2.5 ಡಿಗ್ರಿ ಸೆಲ್ಸಿಯಸ್ ಚಳಿ ದಾಖಲಾಗಿದೆ. ಮೈಕೊರೆಯುವ ಚಳಿಯಿಂದ ಜನರು ತತ್ತರಿಸುತ್ತಿದ್ದಾರೆ.