Advertisement

ಯುವವಾಹಿನಿ ಬಜಪೆ ಘಟಕದಿಂದ ಬಿಸು ಪರ್ಬ

08:27 PM Apr 15, 2019 | Sriram |

ಬಜಪೆ: ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬಜಪೆ ಕರಂಬಾರು ಹಾಗೂ ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಬಿಸುಪರ್ಬ- 2019ರ ಕಾರ್ಯಕ್ರಮವು ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ನಡೆಯಿತು.

Advertisement

ಬ್ರಹ್ಮ ಶ್ರೀ ನಾರಾಯಣ ಗುರುಗಳ ಪೂಜೆ ಬಳಿಕ ಮಂದಿರದಿಂದ ಕಣಿ ವಸ್ತುಗಳನ್ನು ಮೆರವಣಿಗೆಯೊಂದಿಗೆ ಸಭಾಭವನಕ್ಕೆ ತರಲಾಯಿತು.

ಸಭಾ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಪದ್ಮನಾಭ ಬಿ .ಅಡ್ಕಬಾರೆ ಉದ್ಘಾಟಿಸಿ, ಹಬ್ಬ ಹರಿದಿನಗಳ ಮಹತ್ವವನ್ನು ಅರಿತುಕೊಂಡು ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನ ಯುವವಾಹಿನಿ ಬಜಪೆ ಘಟಕ ಮಾಡು ವುದು ಶ್ಲಾಘನೀಯ ಎಂದು ಹೇಳಿದರು .

ವಿಶೇಷ ಉಪನ್ಯಾಸಕರಾಗಿ ಕೆ.ಕೆ. ಪೇಜಾವರ ಇವರು ಬಿಸು ಹಬ್ಬದ ಮಹತ್ವವನ್ನು ತಿಳಿಸಿದರು.

ಅತಿಥಿಗಳಾಗಿ ಸಿಟಿ ಕ್ಯಾಟರರ್ಸ್‌ ಸುರತ್ಕಲ್‌ನ ಮಾಲಕ ವಿಜಯಕುಮಾರ್‌, ನಿವಿತ್‌ ರಾಜ್‌ ಯೆಯ್ನಾಡಿ, ಬಜಪೆ ಘಟ ಕದ ಸಲಹೆಗಾರ ಪರಮೇಶ್ವರ ಪೂಜಾರಿ ಉಪಸ್ಥಿತರಿದ್ದರು.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಇವರು ಬಜಪೆ ಘಟಕ ನಡೆದು ಬಂದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೊಂಡಿರುವ ಸಂಧ್ಯಾ ಕುಳಾಯಿ ಬಿಸು ಹಬ್ಬಕ್ಕೆ ಎಲ್ಲರಿಗೂ ಶುಭಾಶಯ ಕೋರಿದರು.ಸಂಗೀತ ಕ್ಷೇತ್ರದಲ್ಲಿ ಅರಳುವ ಪ್ರತಿಭೆ ಗ್ರೀಷ್ಮಾ ಎಕ್ಕಾರು, ನೃತ್ಯ ಲೋಕದ ಸಾಧಕಿ ನಿಕಿತಾ ಎಂ.ಕೆ., ಶಿಕ್ಷಣ ಕ್ಷೇತ್ರದ ಸಾಧಕಿ ಮಧುರ ಆರ್‌ . ಅವರನ್ನು ಸಮ್ಮಾನಿ ಸಲಾಯಿತು. ಘಟಕದ ನಿಕಟ ಪೂರ್ವ ಅಧ್ಯಕ್ಷ ದೇವರಾಜ ಅಮೀನ್‌ ಸ್ವಾಗತಿಸಿದರು. ಉಪಾಧ್ಯಕ್ಷ ಅಶೋಕ್‌ ಕುಮಾರ್‌, ಮಹಿಳಾ ಸಂಘಟಕಿ ಉಷಾ ಶಿವಾನಂದ್‌ ಹಾಗೂ ಸದಸ್ಯೆ ಆಶಾ ಅವರು ಸಮ್ಮಾನ ಪತ್ರ ವಾಚಿಸಿದರು .
ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ನಿರೂಪಿಸಿದರು. ಕಾರ್ಯದರ್ಶಿ ರೋಹಿತ್‌ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಥಂಡರ್‌ ಗೈಸ್‌ ಡ್ಯಾನ್ಸ್‌ ಅಕಾಡೆಮಿ ಬಜಪೆ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next