Advertisement

ಸಾನ್ನಿಧ್ಯ ರಕ್ಷಣೆಯಿಂದ ಕ್ಷೇತ್ರಕ್ಕೆ ಖ್ಯಾತಿ: ಡಾ|ಹೆಗ್ಗಡೆ

01:30 AM May 15, 2019 | Team Udayavani |

ಬೆಳ್ತಂಗಡಿ: ದೇವಸ್ಥಾನ ಅಭಿವೃದ್ಧಿಗೆ ಶ್ರಮಿಸಿದ ಊರವರಿಗೆ ಸಂತೋಷವಾದರೆ ದೇವಸ್ಥಾನ ಜೀರ್ಣೋದ್ಧಾರದಿಂದ ದೇವರಿಗೆ ಸಂತೃಪ್ತಿಯಾಗಿದೆ ಎಂಬುದನ್ನು ಮನಗಾಣಬಹುದು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.

Advertisement

ಚಂದೂRರು ಶ್ರೀ ದುರ್ಗಾಪರಮೇಶ್ವರೀ ದೇವಿಯ ಪುನಃಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮಕಲಶೋತ್ಸವ ದಂಗವಾಗಿ ಸೋಮವಾರ ಜರಗಿದ ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಬಡತನದಿಂದ 50 ವರ್ಷಗಳ ಹಿಂದೆ ದೇವಸ್ಥಾನದಲ್ಲಿ ತೇಜಸ್ಸು, ಸಾನ್ನಿಧ್ಯ ಬತ್ತಿಹೋಗಿತ್ತು. ಆದರೆ ಇಂದು ಸಮಾಜ ಪರಿವರ್ತನೆ ಹಾದಿಯತ್ತ ಸಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಯಾಗುತ್ತಿರು ವು ದರಿಂದ ಊರಿನ ದೇವಸ್ಥಾನಗಳಿಗೆ ಕಳೆ ನೀಡಿದೆ. ಸಮಾಜ ನಮಗೆ ನೀಡಿರುವುದನ್ನು ನಾವು ಸಮಾಜಕ್ಕೆ ಅರ್ಪಿಸುವುದೇ ಧರ್ಮ. ಭಕ್ತರು ದೇವರ ಸೇವೆಯಲ್ಲಿ
ತೊಡಗುವುದರಿಂದ ಸಮಾಜದ ಏಳಿಗೆ ಸಾಧ್ಯ ಎಂದರು.

ಮಾಣಿಲ ಧಾಮ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ತುಳುನಾಡಿನ ಇತಿಹಾಸದಂತೆ ಉದ್ಭವಲಿಂಗಕ್ಕೆ ಸಂರಕ್ಷಣೆ ನೀಡಿ ಜನಮಾನಸಕ್ಕೆ ಮುಟ್ಟುವಂತೆ ಮಾಡಿರುವುದು ದೈವಗಳು. ದೇವಸ್ಥಾನ ನಿರ್ಮಾಣದ ಜತೆಗೆ ಅದರ ಸಂರಕ್ಷಣೆ ಜವಾಬ್ದಾರಿ ಆಗಬೇಕು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮಾತನಾಡಿ, ನರಸಿಂಹಗಢದ ಕೆಳಗಿರುವ ಚಂದೂRರು ದೇವಸ್ಥಾನದ ಜೀರ್ಣೋದ್ಧಾರದ – ಬ್ರಹ್ಮಕಲಶೋತ್ಸವ ಯಶಸ್ಸಿಗೆ ಅವಳಿ ಊರುಗಳಾದ ಲಾೖಲ-ನಡದ ಯುವಕರು, ಮಾತೆಯರ ಶ್ರಮ, ಶಕ್ತಿ ಮೀರಿದ ಪ್ರೀತಿಯೇ ಸಾಕ್ಷಿ ಎಂದರಲ್ಲದೆ, ತರುಣ ಸಮಾವೇಶದ ಮೂಲಕ 71 ಗ್ರಾಮಗಳಿಗೆ ಆಮಂತ್ರಣ ನೀಡಿ ದೇವರ ಸೇವೆಯಲ್ಲಿ ತಮ್ಮನ್ನು ಸೇವಾ ರೂಪದಲ್ಲಿ ಅರ್ಪಿಸಿದ ಯುವಕರು, ಮಾತೆಯರ ಶ್ರಮ ಶ್ಲಾಘನೀಯ ಎಂದರು.

Advertisement

ಆಡಳಿತ ಮೊಕ್ತೇಸರ ಎನ್‌. ಧನಂಜಯ ಅಜ್ರಿ ನಡಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ. ವಿಠಲ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಭೂಷಣ್‌ ಕಡಂಬ ನಡಗುತ್ತು, ಬ್ರಹ್ಮಕಲಶೋತ್ಸವ ಕಾರ್ಯದರ್ಶಿಗಳಾದ ವಸಂತ ಸುವರ್ಣ, ರಾಜೇಶ್‌ ಶೆಟ್ಟಿ, ಅಲೋಕ್‌ ಅಜ್ರಿ, ಪ್ರಕಾಶ್‌ ಶೆಟ್ಟಿ, ಕೋಶಾಧಿಕಾರಿ ಸುಬ್ರಾಯ ಡೋಂಗ್ರೆ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಯೋಗೀಶ್‌ ಆರ್‌. ಭಿಡೆ, ಅನೀಶ್‌ ಅಜ್ರಿ ವೇದಿಕೆಯಲ್ಲಿದ್ದರು.

ಈ ಸಂದರ್ಭ ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್‌ ಪೂಂಜ ಅವರನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಸಮ್ಮಾನಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಧನಂಜಯ್‌ ರಾವ್‌ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಿರೀಶ್‌ ಡೋಂಗ್ರೆ ವಂದಿಸಿದರು. ದಿನೇಶ್‌ ಸುವರ್ಣ ರಾಯಿ ನಿರೂಪಿಸಿದರು.

250 ಕೆರೆ ಅಭಿವೃದ್ಧಿ
ನಮ್ಮೂರು ನಮ್ಮ ಕೆರೆ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ 250 ಕೆರೆ ಅಭಿವೃದ್ಧಿಯಲ್ಲಿ ತೊಡಗಿದೆ. ಈ ಮೂಲಕ ಜನರಿಗೆ ನಮ್ಮ ಊರು, ನಮ್ಮ ಸಂಪತ್ತು ಎಂಬ ಪರಿಕಲ್ಪನೆ ಸೃಷ್ಟಿಯಾಗುತ್ತದೆ. ಇದರಿಂದ ಸಮಾಜದ ಪರಿವರ್ತನೆಯ ಜತೆಗೆ ಊರಿನ ಕ್ಷೇತ್ರ ರಕ್ಷಣೆಯಲ್ಲಿ ಭಾಗಿಯಾಗುವ ಅಪರೂಪದ ಭಾಗ್ಯ ಪ್ರಾಪ್ತಿಯಾಗುತ್ತದೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ

Advertisement

Udayavani is now on Telegram. Click here to join our channel and stay updated with the latest news.

Next