Advertisement

ಕ್ಷೇತ್ರದ ಅಭಿವೃದ್ಧಿಯಿಂದ ಸಮಾಜದ ಪ್ರಗತಿಗೆ ಶಕ್ತಿ: ಜಯ ಸುವರ್ಣ

09:58 AM Mar 03, 2020 | sudhir |

ಪುತ್ತೂರು: ದೇಯಿ ಬೈದ್ಯೆತಿ, ಕೋಟಿ -ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್ಲ್‌ನಲ್ಲಿ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ರವಿವಾರ ನಡೆಯಿತು.

Advertisement

ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಉದ್ಘಾಟನೆ ನೆರವೇರಿಸಿದರು. ಗೆಜ್ಜೆಗಿರಿ ಕ್ಷೇತ್ರದ ಅಭಿವೃದ್ಧಿ ಮೂಲಕ ಇಡೀ ಸಮಾಜದ ಪ್ರಗತಿಗೆ ಶಕ್ತಿ ತುಂಬಿದೆ. ಸರ್ವ ಶಕ್ತಿಗಳು ಒಂದಾದರೆ ಚೈತನ್ಯ ಉಂಟಾಗುತ್ತದೆ ಎಂಬುದಕ್ಕೆ ಕ್ಷೇತ್ರ ಸಾಕ್ಷಿಯಾಗಿದೆ ಎಂದರು.

ಕೇರಳ ಶಿವಗಿರಿ ಮಠಾಧೀಶ ಶ್ರೀ ವಿಶುದ್ಧಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಪವಿತ್ರ ಕ್ಷೇತ್ರದ ಈ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳ್ಳೆಯದಾಗಲಿದೆ. ಪುಣ್ಯ ಪುರುಷರ ತಾಣಗಳು ಲೋಕಕ್ಕೆ ಶಾಂತಿ ತರುತ್ತವೆ. ಮನುಷ್ಯರಲ್ಲಿ ಮನುಷ್ಯತ್ವದ ಸಂದೇಶ ಸಾರಿದ ನಾರಾಯಣ ಗುರು, ಕೋಟಿ ಚೆನ್ನಯರು ಲೋಕಕ್ಕೆ ಮಾದರಿ ಎಂದರು.

ಬಲೊÂಟ್ಟು ಗುರುಕೃಪಾ ಸೇವಾಶ್ರಮದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶಕ್ತಿ, ತ್ಯಾಗ, ಅಭಿಮಾನದ ಕೇಂದ್ರ 500 ವರ್ಷಗಳ ಬಳಿಕ ಪುನಃ ಅಭಿವೃದ್ಧಿಗೊಂಡು ಮನುಕುಲಕ್ಕೆ ಶಕ್ತಿ ತುಂಬಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್‌ ಮಾತನಾಡಿ, ಕೋಟಿ ಚೆನ್ನಯರು ನಮಗೆಲ್ಲರಿಗೂ ಪ್ರೇರಣೆಯ ಶಕ್ತಿ. ಗೆಜ್ಜೆಗಿರಿ ದೊಡ್ಡ ಪುಣ್ಯ ಕ್ಷೇತ್ರವಾಗಿ ಬೆಳೆಯುತ್ತದೆ ಎಂದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ಧೈರ್ಯ, ಸಾಹಸದ ಪ್ರತೀಕ ಕೋಟಿ ಚೆನ್ನಯರು. ಸಮಾಜವನ್ನು ಮೇಲೆತ್ತುವ ಕೆಲಸವನ್ನು ನಾವು ಮಾಡಬೇಕು. ದೇಯಿ ಬೈದ್ಯೆತಿ, ಕೋಟಿ – ಚೆನ್ನಯರು ನಮಗೆ ಶಕ್ತಿ ತುಂಬುತ್ತಾರೆ ಎಂದು ಹೇಳಿದರು.

Advertisement

ಇಂದು ಮಹಾನೇಮ
ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಬಳಿಕ ನೇಮದ ಅಂಗವಾಗಿ ಮಾ. 2ರಂದು ಪೂರ್ವಾಹ್ನ ಸತ್ಯಧರ್ಮ ಚಾವಡಿಯಲ್ಲಿ ಕಲಶ ಹೋಮ, ಅನಂತರ ಮಹಾಮಾತೆ ದೇಯಿ ಬೈದ್ಯೆತಿ ಮಹಾನೇಮ ವೈಭವ, ಮಧ್ಯಾಹ್ನ ಪ್ರಸಾದ ವಿತರಣೆ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಗೌರವಾರ್ಪಣೆ
ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಗೌರವಾಧ್ಯಕ್ಷ ಜಯ ಸಿ. ಸುವರ್ಣ ಮತ್ತು ಲೀಲಾವತಿ ಸುವರ್ಣ ದಂಪತಿ ಮತ್ತು ಮುಂಬಯಿ ಉದ್ಯಮಿ ಯುವರಾಜ್‌ ತೇಜೇಂದ್ರಪಾಲ್‌ ಸಿಂಗ್‌, ಪ್ರಶ್ನಾಚಿಂತನೆ ದೈವಜ್ಞ ಶಶಿಧರ್‌ ಮಾಂಗಾಡ್‌, ಮರದ ಕೆತ್ತನೆ ವಿನ್ಯಾಸಗಾರ ಉಮೇಶ್‌ ಪೂಜಾರಿ ಬಳ್ಪ ಅವರಿಗೆ ಗೌರವಾರ್ಪಣೆ ನಡೆಯಿತು. ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಆನುವಂಶಿಕ ಮೊಕ್ತೇಸರೆ ಮಾತೃಶ್ರೀ ಲೀಲಾವತಿ ಅಮ್ಮ ಉಪಸ್ಥಿತರಿದ್ದರು.

ಜನಪದ ವಿದ್ವಾಂಸ ಡಾ| ಗಣೇಶ್‌ ಅಮೀನ್‌ ಸಂಕಮಾರ್‌, ದುಬಾೖ ಉದ್ಯಮಿ ಜಿತೇಂದ್ರ ಸುವರ್ಣ, ಉದ್ಯಮಿ ಗಂಗಾಧರ ಪೂಜಾರಿ, ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಉಪಸ್ಥಿತರಿದ್ದರು.

ಗೌರವ ಉಪಸ್ಥಿತಿ
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡುಬಿದಿರೆ, ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್‌, ಪ್ರಮುಖರಾದ ಚಂದ್ರಹಾಸ ಅಮೀನ್‌, ದಿನೇಶ್‌ ಅಮೀನ್‌, ರಾಜೇಂದ್ರ ಚಿಲಿಂಬಿ, ಪ್ರಶಾಂತ್‌ ಪೂಜಾರಿ ಮಸ್ಕತ್‌, ನಾಗೇಶ್‌ ಬಲಾ°ಡ್‌, ಚಂದ್ರಶೇಖರ, ಡಾ| ಸದಾನಂದ ಕುಂದರ್‌, ಪ್ರವೀಣ್‌ ಅಂಚನ್‌, ಅವಿನಾಶ್‌ ಹಾರಾಡಿ, ಕುಂತಿ ಆಲಂಕಾರು, ಸಂಜೀವ ಪೂಜಾರಿ, ಗೋಪಾಲ ಬಂಗೇರ, ರವಿ ಪೂಜಾರಿ ಚಿಲಿಂಬಿ, ಯಶವಂತ ಪೂಜಾರಿ, ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್‌, ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಸೌದಿ ಅರೇಬಿಯಾ ಬಿಲ್ಲವಾಸ್‌ನ ಭಾಸ್ಕರ್‌ ಕೋಟ್ಯಾನ್‌ ಕುಂತಾಡಿ, ಮಂಗಳೂರಿನ ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ಸುಳ್ಯಪದವು ಬ್ರಹ್ಮಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ದಾಮೋದರ ಮಣಿಯಾಣಿ, ಮುಂಬಯಿ ಉದ್ಯಮಿ ಗಣೇಶ್‌ ಪೂಜಾರಿ, ಮುಂಬಯಿ ಭಾರತ್‌ ಬ್ಯಾಂಕ್‌ ನಿರ್ದೇಶಕರಾದ ಭಾಸ್ಕರ ಸಾಲಿಯಾನ್‌, ಗಂಗಾಧರ ಪೂಜಾರಿ, ಉದ್ಯಮಿಗಳಾದ ಸುರೇಂದ್ರ ಪೂಜಾರಿ, ಹರೀಶ್‌ ಸಾಲಿಯಾನ್‌, ಅಶೋಕ್‌ ಸಾಲಿಯಾನ್‌ ಚಿಕ್ಕಮಗಳೂರು, ಪಿ.ಎಂ. ನಾರಾಯಣ, ಧೀರಜ್‌ ಹೆಜಮಾಡಿ, ಗೋಪಾಲ ಬಂಗೇರ ಉಪಸ್ಥಿತರಿದ್ದರು.

ವೈದಿಕ ಸಮಿತಿ ಪ್ರಧಾನ ಕಾರ್ಯದರ್ಶಿ ಶಶಿಧರ ಕಿನ್ನಿಮಜಲು ಸ್ವಾಗತಿಸಿದರು. ಮುಂಬಯಿ ಬಿಲ್ಲವ ಸಮಿತಿಯ ನಿತ್ಯಾನಂದ ಡಿ. ಕೋಟ್ಯಾನ್‌ ಪ್ರಾಸ್ತಾವಿಕ ಮಾತನಾಡಿದರು. ನಿತೇಶ್‌ ಪೂಜಾರಿ, ಸ್ಮಿತೇಶ್‌ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next