Advertisement

Poornachandra Tejaswi: ನಿದ್ದೆಯಿಂದ‌ ತೇಜಸ್ವಿಯ  ಕಡೆಗೆ!

10:50 AM Feb 02, 2024 | Team Udayavani |

ಪುಸ್ತಕ ಎಂದಾಗ ಮೊದಲು ನಿದ್ದೆಯ ಗುಂಗು ನನ್ನನ್ನು ದಾಳಿ ಮಾಡುತಿತ್ತು. ಎಷ್ಟೇ ಕಷ್ಟವಾದರು ಪುಸ್ತಕವನ್ನು ಓದುವುದು ಬೀಡಿ ಮುಟ್ಟುವುದು ಅಸಾಧ್ಯವಾಗುತಿತ್ತು.

Advertisement

ಮನೆಯಲ್ಲಿ ಲೈಬ್ರೇರಿ ಕಾರ್ಡ್‌ ಮೂಲೇ ಗುಂಪಾಗ್ತಿದೆ ಎಲ್ಲಿ ಹೋಗ್ತಿದ್ಯಾ ಅನ್ನೋ ಒಂದೇ ರಾಗ.

ಇವ್ರಿಗೆ ಏನ್‌ ಗೊತ್ತು ನನಗೆ ಬುಕ್‌ ಅಂದ್ರೇನೇ ಅಲರ್ಜಿ ಅಂತಾ, ಅಂತದ್ರಲ್ಲಿ ಬುಕ್‌ ಓದು, ಬುಕ್‌ ಓದು ಅಂದ್ರೇ ಏನ್‌ ಮಾಡೋದು ಅಂತಾ ನನ್ನ ಮನ್ಸು ನನಗೆ ಸಮಾಧಾನ ಮಾಡ್ತಿತ್ತು.

ಆದ್ರೂ ಆಗಾಗ ಕಾರ್ಡ್‌ಗೇ ದುಡ್ಡು ಕೊಟ್ಟಿದೀನಿ ಅನ್ನೋದಿಕ್ಕಾದ್ರೂ ಕಾಲೇಜು ಮುಗಿದ ಮೇಲೆ ಸುಮಾರು ಕಷ್ಟಪಟ್ಟು ಒಂದು ಗಂಟೆ ಲೈಬ್ರರಿಯಲ್ಲೇ ಕಳಿತ್ತಿದ್ದೆ. ಒಂದೊಂದು ಸಾರಿ ಮನೆಯಲ್ಲಿ ಬೈಗುಳ್‌ ಕೇಳ್ಳೋಕೆ ಆಗದೇ ಕಾಟಚಾರಕ್ಕೆ ಹೋಗ್ತಿದ್ದೆ ಅಂದ್ರೇ ತಪ್ಪಿಲ್ಲಾ ಅನ್ಕೋತೀನಿ.

ಆದ್ರೆ ಇದಕ್ಕೆಲ್ಲಾ  ಫ‌ುಲ್‌ ಸ್ಟಾಪ್‌ ಇಟ್ಟಿದ್ದು ಅಂದ್ರೇ ಅದು ನನ್ನ ಈಗಿನ ಕಾಲೇಜ್‌ ಲೈಬ್ರೇರಿ ಹಾಗೂ ತೇಜಸ್ವಿಯವರ ಪುಸ್ತಕ.

Advertisement

ಮೊದ್ಲಿನ ತರನೇ ಇವಗೂ ಕೂಡ ಲೈಬ್ರೇರಿಗೆ ಅದೇ ರೀತಿ ಯತಾಪ್ರಕಾರ ಯಾವುದೋ ಒಂದು ಗುಂಗಲ್ಲಿ ಹೋಗಿ – ಬರ್ತಿದ್ದೆ. ಆಗ ಒಂದು ದಿನಾ ತೇಜಸ್ವಿಯವರ ಅಣ್ಣನ ನೆನಪು ಪುಸ್ತಕವನ್ನ ತಗೊಂಡು ಓದೋಕೆ ಸ್ಟಾರ್ಟ್‌ ಮಾಡ್ದೆ. ಹೆಸರೇ ವಿಭಿನ್ನವಾಗಿತ್ತು.

ಸುಮಾರು ಒಂದುವರೇ ಗಂಟೆ ಓದುತ್ತಾ ಕೂತಾಗ ಸಮಯ ಕಳೆದಿದ್ದೆ ಗೊತ್ತಾಗಿಲ್ಲ. ಇಷ್ಟೆಲ್ಲಾ ವಿಷಯಗಳಿರುತ್ತಾ. ಒಂದು ನೆನಪಿನ ಬುತ್ತಿಯನ್ನ ಎಷ್ಟೊಂದು ವಿಧಗಳಲ್ಲಿ ಪೋಣಿಸಿದ್ದಾರೆ ಎಂಬುದು ಸುಂದರವಾಗಿತ್ತು.

ಕುವೆಂಪು ಅವರ ನೆನಪುಗಳನ್ನ ತೇಜಸ್ವಿ ಅಣ್ಣನ ನೆನಪಾಗಿ ಬಣ್ಣಿಸಿದ್ದಾರೆ. ಅವರ ಪ್ರತಿಯೊಂದು ಅನುಭವಗಳು ಕೂಡ ನಾವೇ ಅವರ ಮನೆಯಲ್ಲಿ ಇದ್ದ ಒಬ್ಬ ಸದಸ್ಯನಂತೆ ಅಲ್ಲೇ ಕೂತು ಎಲ್ಲಾ ಘಟನೆಗಳನ್ನ ಕಣ್ಣಾರೆ ಕಂಡ ಹಾಗೆ, ಅವರ ಪುಸ್ತಕ ಓದುವರಿಗೆ ಆಗುವಂತಹ ಅನುಭವವಾಗುತ್ತೆ.

ಹೀಗೆ ನನ್ನ ಮನಸ್ಸು ತೇಜಸ್ವಿ ಅವರ ಪುಸ್ತಕದ ಕಡೆಗೆ ವಾಲೂತ್ತ ಹೋಯಿತು. ಹೀಗೆ ನಾನು ಅಣ್ಣನ ನೆನಪು, ಅಬಚೂರಿನ ಪೋಸ್ಟ್ ಆಫೀಸ್‌, ಜುಗಾರಿ ಕ್ರಾಸ್‌, ಅಲೆಮಾರಿಯ ಅಂಡಮಾನ್‌ ಮತ್ತು ಮಹಾನದಿ ನೈಲ್, ಕರ್ವಾಲೊ ಮತ್ತು ಇನ್ನಷ್ಟು ಪುಸ್ತಕಗಳನ್ನ ಓದಲು ಹುರಿದುಂಬಿಸಿದೇ ಎಂದೇ ಹೇಳಬಹುದು.

ತೇಜಸ್ವಿ ಯವರ ಬರವಣಿಗೆಯು ಓದುಗರ ಮನಸ್ಸಲ್ಲಿ ಒಂದು ಅದ್ಭುತವಾದ ಅನುಭವ ಮತ್ತು ಆಸಕ್ತಿಯನ್ನ ತರುತ್ತೆ ಎಂದು ಹೇಳಿದರೆ ತಪ್ಪಾಗಲಾರದು.

ವಿದ್ಯಾ

ಎಂ.ಜಿ.ಎಂ.,

ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next