Advertisement
ಬುದ್ಧಿವಂತ ಮಾನವರೇ ಪರಿಸರವನ್ನು ನಾಶಗೈಯ್ಯುತ್ತಿರುವುದು ವಿಷಾದನೀಯ. ವರ್ಷಕ್ಕೊಮ್ಮೆ ಬರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮದ ಬಗೆಗೆ ಒಂದಷ್ಟು ಭಾಷಣಗಳನ್ನು ಬಿಗಿಯುವುದಕ್ಕಷ್ಟೇ ಸೀಮಿತಗೊಳಿಸಿ ಗಿಡಗಳನ್ನು ನೆಟ್ಟು ತೆರಳಿದರೆಂದರೆ ಮತ್ತೆ ಅದೇ ಸ್ಥಳದಲ್ಲಿ ಮುಂದಿನ ವರ್ಷ ಗಿಡ ನೆಡುತ್ತಾರೆ. ಇಲ್ಲಿಗೆ ನಮ್ಮ ಪರಿಸರ ಸಂರಕ್ಷಣೆ ಕಾರ್ಯ ಮುಗಿಯುತ್ತದೆ. ಭೂಕಂಪ, ಸುನಾಮಿ, ಪ್ರವಾಹ, ಜ್ವಾಲಾಮುಖೀ, ಕಾಳ್ಗಿಚ್ಚಿನಂಥ ಪ್ರಕೃತಿ ವಿಕೋಪಗಳು ಮಾತ್ರವಲ್ಲದೆ ಹೊಸ ಹೊಸ ರೋಗಗಳು ಮಾನವನ ಜೀವನಕ್ಕೆ ಮಾರಕವಾಗಿರುವುದು ಪರಿಸರದ ನಾಶದಿಂದಲೇ ಎಂಬುದನ್ನು ನಾವು ಮನಗಾಣಬೇಕು. ಪರಿಸರ ಪ್ರೀತಿ ತೋರಿಕೆಗೆ ಸೀಮಿತವಾಗಿರದೆ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವ ಜತೆಯಲ್ಲಿ ಎಲ್ಲೆಂದರಲ್ಲಿ ಎಸೆಯದೆ ಪರಿಸರ ಮಾಲಿನ್ಯ ನಿಯಂತ್ರಿಸಬೇಕು.
ಮಂಗಳೂರು ವಿವಿ, ಕೊಣಾಜೆ.