Advertisement

Padmaavat To Billu.. ಟೈಟಲ್‌ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್‌ ಸಿನಿಮಾಗಳಿವು

05:13 PM Sep 21, 2024 | ಸುಹಾನ್ ಶೇಕ್ |

ಸಿನಿಮಾಗಳ ವಿಚಾರದಲ್ಲಿ ವಿವಾದ ಹುಟ್ಟಿಕೊಳ್ಳುವುದು ಹೊಸದೇನಲ್ಲ. ಕೆಲವೊಂದು ಸಿನಿಮಾಗಳು ರಿಲೀಸ್‌ಗೂ ಮುನ್ನ ಹಾಗೂ ಕೆಲ ಸಿನಿಮಾಗಳು ರಿಲೀಸ್‌ ಬಳಿಕ ವಿವಾದಕ್ಕೆ ಗುರಿಯಾಗುತ್ತದೆ. ಇನ್ನು ಕೆಲ ಸಿನಿಮಾ ಟೈಟಲ್‌ ವಿಚಾರದಿಂದಲೂ ವಿವಾದಕ್ಕೆ ಗುರಿಯಾಗುತ್ತವೆ.

Advertisement

ಬಾಲಿವುಡ್‌ನ ಸಿನಿಮಾಗಳಿಗೆ ಬಂದರೆ ತನ್ನ ಟೈಟಲ್‌ ಹಾಗೂ ಸಿನಿಮಾದಲ್ಲಿನ ಕೆಲ ಕಥೆಯ ವಿಷಯದಿಂದ ವಿವಾದಕ್ಕೆ ಗುರಿಯಾಗಿರುವ ಸಿನಿಮಾಗಳು ಹತ್ತಾರಿವೆ. ಬಾಲಿವುಡ್ ಹಲವು ಸಿನಿಮಾಗಳು ಟೈಟಲ್‌ನಿಂದಾಗಿ ಕಾನೂನು ಮತ್ತು ರಾಜಕೀಯ ಒತ್ತಡಗಳನ್ನು ಎದುರಿಸಿದೆ. ಈ ಕಾರಣದಿಂದಾಗಿ ಸಿನಿಮಾದ ಟೈಟಲ್‌ ಬದಲಾಗಿವೆ. ಯಾವೆಲ್ಲ ಸಿನಿಮಾಗಳಿಗೆ ಈ ರೀತಿಯ ತೊಂದರೆ ಆಗಿವೆ ಎನ್ನುವುದರ ಬಗೆಗಿನ ಒಂದು ನೋಟ ಇಲ್ಲಿದೆ.

ಪದ್ಮಾವತ್ (2018) –  (Padmaavat)

ಮೂಲ ಶೀರ್ಷಿಕೆ: ಪದ್ಮಾವತಿ:

ಜನಪ್ರಿಯ ಕವಿತೆಯೊಂದರ ಸಾರಾಂಶವನ್ನು ಆಧರಿಸಿ ಬಂದ ಬಾಲಿವುಡ್‌ ಸಿನಿಮಾ ʼಪದ್ಮಾವತ್‌ʼ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಈ ಸಿನಿಮಾಕ್ಕೆ ಆರಂಭದಲ್ಲಿ ರಜಪೂತ್‌ ಸಮುದಾಯದಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.

Advertisement

ರಾಣಿ ಪದ್ಮಾವತಿಯ ಬಗ್ಗೆ ಐತಿಹಾಸಿಕ ಸತ್ಯಗಳನ್ನು ಸಿನಿಮಾದಲ್ಲಿ ತಿರುಚಲಾಗಿದೆ ಎಂದು ಆರೋಪಿಸಿ ಟೈಟಲ್‌ ಬದಲಾವಣೆಗೆ ಒತ್ತಾಯಿಸಲಾಗಿತ್ತು. ಈ ಕಾರಣದಿಂದಾಗಿ ಚಿತ್ರತಂಡ ಇದು ಕವಿತೆಯನ್ನು ಆಧರಿಸಿ ಬಂದ ಸಿನಿಮಾವಾಗಿದೆ ಐತಿಹಾಸಿಕ ಘಟನೆಗಳು ಇದರಲಿಲ್ಲ ಎಂದು ಸ್ಪಷ್ಟನೆ ನೀಡಿ ಶೀರ್ಷಿಕೆಯನ್ನು ʼಪದ್ಮಾವತಿʼ ಯಿಂದ ʼಪದ್ಮಾವತ್‌ʼಗೆ ಬದಲಿಸಿತು.

ಸಿನಿಮಾ ಬಾಕ್ಸ್‌ ಆಫೀಸ್ ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ರಣ್ವೀರ್‌ ಸಿಂಗ್‌ (Ranveer singh), ದೀಪಿಕಾ ಪಡುಕೋಣೆ (Deepika Padukone), ಶಾಹಿದ್‌ ಕಪೂರ್‌ (Shahid Kapoor), ಅದಿತಿ ರಾವ್ ಹೈದರಿ (Aditi Rao Hydari) ಮುಂತಾದ ಕಲಾವಿದರು ನಟಿಸಿದ್ದಾರೆ.

ಬಿಲ್ಲು (2009) – (Billu)

ಮೂಲ ಶೀರ್ಷಿಕೆ: ಬಿಲ್ಲು ಬಾರ್ಬರ್:

ಇರ್ಫಾನ್‌ ಖಾನ್‌, ಶಾರುಖ್‌ ಖಾನ್‌ (Shah Rukh Khan) ಪ್ರಧಾನ ಪಾತ್ರದಲ್ಲಿ ತೆರೆಕಂಡಿದ್ದ ʼಬಿಲ್ಲು ಬಾರ್ಬರ್‌ʼ ಟೈಟಲ್‌ ಗೆ ಕ್ಷೌರಿಕರ ಸಂಘಗಳಿಂದ ವಿರೋಧ ವ್ಯಕ್ತವಾಗಿತ್ತು.

ಈ ಕಾರಣದಿಂದಾಗಿ ಚಿತ್ರತಂಡ ಟೈಟಲ್‌ ನಿಂದ ʼಬಾರ್ಬರ್‌ʼ ಪದವನ್ನು ತೆಗೆದು ʼಬಿಲ್ಲುʼ ಟೈಟಲ್‌ ನಲ್ಲಿ ರಿಲೀಸ್‌ ಮಾಡಿತು.

ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ (2013) – (Goliyon Ki Raasleela Ram-Leela)

ಮೂಲ ಶೀರ್ಷಿಕೆ: ರಾಮ್-ಲೀಲಾ:  

ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದಲ್ಲಿ ಬಂದ ಮತ್ತೊಂದು ಬಾಲಿವುಡ್‌ ಸಿನಿಮಾ ಟೈಟಲ್‌ ನಿಂದಾಗಿ ವಿವಾದಕ್ಕೆ ಗುರಿಯಾಗಿತ್ತು.

ಕೆಲ ಧಾರ್ಮಿಕ ಸಂಘಟನೆಗಳು, ʼರಾಮ್‌ – ಲೀಲಾʼ ಎನ್ನುವ ಟೈಟಲ್ ಹಿಂದೂ ಭಾವನಕ್ಕೆ ಧಕ್ಕೆ ಆಗುತ್ತದೆ ಎಂದು ಆರೋಪಿಸಿದ್ದವು. ಈ ಕಾರಣದಿಂದ ಚಿತ್ರತಂಡ ಟೈಟಲ್‌ ಬದಲಿಸಿ ʼಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾʼ ಎಂದು ಇಟ್ಟಿತು.

ಆರ್ ರಾಜ್‌ಕುಮಾರ್ (2013) – (R… Rajkumar)

ಮೂಲ ಶೀರ್ಷಿಕೆ: ರ‍್ಯಾಂಬೋ ರಾಜಕುಮಾರ್:  

ಶಾಹಿದ್‌ ಕಪೂರ್‌ – ಸೋನಾಕ್ಷಿ ಸಿನ್ಹಾ (Sonakshi Sinha) ಅಭಿನಯದ, ಪ್ರಭುದೇವ (Prabhu Deva) ನಿರ್ದೇಶನದಲ್ಲಿ ಬಂದ ʼಆರ್‌ ರಾಜ್‌ ಕುಮಾರ್‌ʼ ಸಿನಿಮಾದ ಮೂಲ ಶೀರ್ಷಿಕೆ ʼರಾಂಬೋ ರಾಜಕುಮಾರ್ʼ ಎಂದು ಇಡಲಾಗಿತ್ತು. ಆದರೆ ಇದರಿಂದಾಗಿ ಚಿತ್ರತಂಡಕ್ಕೆ ʼರ‍್ಯಾಂಬೋʼ ಸಿರೀಸ್‌ ಲೀಗಲ್‌ ನೋಟಿಸ್‌ ಕಳುಹಿಸಿತ್ತು. ಈ ಕಾರಣದಿಂದಾಗಿ ಚಿತ್ರತಂಡ ಸಿನಿಮಾದ ಟೈಟಲ್‌ ಬದಲಿಸಿತು.

ಲವ್ಯಾತ್ರಿ (2018) – (Loveyatri)

ಮೂಲ ಶೀರ್ಷಿಕೆ: ಲವ್ ರಾತ್ರಿ:  ‌

ಆಯುಷ್ ಶರ್ಮಾ ಮತ್ತು ವಾರಿನಾ ಹುಸೇನ್ ಪ್ರಧಾನ ಭೂಮಿಕೆಯಲ್ಲಿ ಬಂದ ಪ್ರೇಮ ಕಥೆಯ ʼಲವ್ಯಾತ್ರಿʼ ಸಿನಿಮಾದ ಮೂಲ ಶೀರ್ಷಿಕೆ ʼಲವ್‌ ರಾತ್ರಿʼ ಎಂದಿತ್ತು.

ಆದರೆ ಕೆಲ ಧಾರ್ಮಿಕ ಗುಂಪು ಇದು ʼನವರಾತ್ರಿʼ ಎನ್ನುವ ಪದಕ್ಕೆ ಅಗೌರವ ಹಾಗೂ ಧಕ್ಕೆ ತರುವಂತಿದೆ ಎಂದು ಸಿನಿಮಾದ ಟೈಟಲ್‌ ಗೆ ವಿರೋಧ ವ್ಯಕ್ತಪಡಿಸಿದ್ದವು. ಈ ಕಾರಣದಿಂದ ಚಿತ್ರತಂಡ ಟೈಟಲ್‌ ಚೇಂಜ್‌ ಮಾಡಿತು.

ಟೋಟಲ್ ಸಿಯಪ್ಪ (2014) – (Total Siyapaa)

ಮೂಲ ಶೀರ್ಷಿಕೆ: ಅಮನ್ ಕಿ ಆಶಾ‌

2014ರಲ್ಲಿ ಬಂದ ಬಾಲಿವುಡ್‌ನ ಈ ಸಿನಿಮಾದ ಟೈಟಲ್‌ಗೆ ವಿರೋಧ ವ್ಯಕ್ತವಾಗಿತ್ತು. ʼಅಮನ್‌ ಕಿ ಆಶಾʼ ಎನ್ನುವುದು ಭಾರತ ಮತ್ತು ಪಾಕಿಸ್ತಾನದ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳು ಜಂಟಿಯಾಗಿ ಆರಂಭಿಸಿದ ಅಭಿಯಾನದ ಹೆಸರಾಗಿದೆ.

ಇದರಿಂದಾಗಿ ಸಿನಿಮಾದ ಟೈಟಲ್‌ ಬದಲು ಮಾಡಬೇಕೆನ್ನುವ ಕೂಗು ಕೇಳಿಬಂದ ಹಿನ್ನೆಲೆ ಶೀರ್ಷಿಕೆಯನ್ನು ʼಟೋಟಲ್ ಸಿಯಪ್ಪʼ ಎಂದು ಬದಲಾಯಿಲಾಯಿತು.

ಮದ್ರಾಸ್ ಕೆಫೆ (2013) – (Madras Cafe)

ಮೂಲ ಶೀರ್ಷಿಕೆ: ಜಾಫ್ನಾ:

ಮೂಲ ಶೀರ್ಷಿಕೆಯು ಶ್ರೀಲಂಕಾದ ನಗರವನ್ನು ಉಲ್ಲೇಖಿಸುತ್ತದೆ. ರಾಜಕೀಯ ಸೂಕ್ಷ್ಮತೆಯಿಂದಾಗಿ. ರಾಜಕೀಯ ಸೂಕ್ಷ್ಮತೆಗಳಿಂದಾಗಿ ಅಂತರಾಷ್ಟ್ರೀಯ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಶೀರ್ಷಿಕೆಯನ್ನು ʼಮದ್ರಾಸ್ ಕೆಫೆ ಎಂದು ಬದಲಾಯಿಸಲಾಯಿತು.

ಜಾನ್ ಅಬ್ರಹಾಂ, ರಾಶಿ ಖನ್ನಾ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ.

ಲಕ್ಷ್ಮಿ (2020) – (Laxmi)

ಮೂಲ ಶೀರ್ಷಿಕೆ: ಲಕ್ಷ್ಮಿ ಬಾಂಬ್:

ಅಕ್ಷಯ್‌ ಕುಮಾರ್‌ (Akshay Kumar) ಅಭಿನಯದ ʼಲಕ್ಷ್ಮಿʼ ಬಾಕ್ಸ್‌ ಆಫೀಸ್‌ನಲ್ಲಿ ಅಷ್ಟಾಗಿ ಕಮಾಲ್‌ ಮಾಡಿಲ್ಲ. ಸಿನಿಮಾ ರಿಲೀಸ್‌ಗೂ ಮುನ್ನ ʼಲಕ್ಷ್ಮಿ ಬಾಂಬ್‌ʼ ಎನ್ನುವ ಟೈಟಲ್ ನಿಂದ ವಿವಾದಕ್ಕೀಡಾಗಿತ್ತು.

ಲಕ್ಷ್ಮಿ ಎನ್ನುವ ಹೆಸರಿನೊಂದಿಗೆ ʼಬಾಂಬ್‌ʼ ಎನ್ನುವ ಪದವನ್ನು ಬಳಸಿದ ಕಾರಣಕ್ಕೆ ಇದು ಹಿಂದೂ ಭಾವನಕ್ಕೆ ಧಕ್ಕೆ ತರುತ್ತದೆ ಎಂದು ಆರೋಪಿಸಿ ಕೆಲ ಜನರು ಟೈಟಲ್‌ಗೆ ವಿರೋಧ ವ್ಯಕ್ತಪಡಿಸಲಾಗಿತ್ತು.  ಆ ಬಳಿಕ ಟೈಟಲ್‌ನ್ನು ʼಲಕ್ಷ್ಮಿʼ ಎಂದು ಚೇಂಜ್‌ ಮಾಡಲಾಯಿತು.

ಜಬ್ ಹ್ಯಾರಿ ಮೆಟ್ ಸೇಜಲ್ (2017) – (Jab Harry Met Sejal)

ಮೂಲ ಶೀರ್ಷಿಕೆ: ದಿ ರಿಂಗ್: 

ಶಾರುಖ್‌ ಖಾನ್‌, ಅನುಷ್ಕಾ ಶರ್ಮಾ ಅಭಿನಯದ ಈ ಸಿನಿಮಾದ ಮೂಲ ಶೀರ್ಷಿಕೆ ʼದಿ ರಿಂಗ್‌ʼ ಎಂದಾಗಿತ್ತು. ಸಿನಿಮಾದ ಮೂಲ ಶೀರ್ಷಿಕೆ ಚಿತ್ರದ ರೋಮ್ಯಾಂಟಿಕ್ ಥೀಮ್‌ಗೆ ಹೊಂದಿಕೆಯಾಗುವುದಿಲ್ಲ ಎನ್ನುವ  ಮಾತು ಪ್ರೇಕ್ಷಕರಿಂದ ಕೇಳಿಬಂದ ಹಿನ್ನೆಲೆ ಟೈಟಲ್‌ ಬದಲಾಯಿಸಲಾಯಿತು.

ಕಟ್ಟಿ ಬಟ್ಟಿ (2015) – (Katti Batti)

ಮೂಲ ಶೀರ್ಷಿಕೆ: ಸಾಲಿ ಕುತ್ತಿಯಾ:  

ಇಮ್ರಾನ್‌ ಖಾನ್‌, ಕಂಗನಾ ಅಭಿನಯದ ʼಕಟ್ಟಿ ಬಟ್ಟಿʼ ಸಿನಿಮಾ ಮೊದಲು ʼಸಾಲಿ ಕುತ್ತಿಯಾʼ ಎಂದು ಟೈಟಲ್‌ ಇಡಲಾಗಿತ್ತು. ಆದರೆ ʼಕುತ್ತಿಯಾʼ ಎನ್ನುವ ಪದ ತುಂಬಾ ಅಗೌರವದಂತೆ ಕೇಳುವ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್‌ನ್ನು ʼಕಟ್ಟಿ ಬಟ್ಟಿʼ ಎಂದು ಇಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next