Advertisement

Pathaan to Stree 2: ರಿಲೀಸ್‌ ಆದ ಒಂದೇ ವಾರದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಿವು..

06:07 PM Aug 24, 2024 | ಸುಹಾನ್ ಶೇಕ್ |

ಇತ್ತೀಚೆಗಿನ ವರ್ಷಗಳಲ್ಲಿ ಪ್ಯಾನ್‌ ಇಂಡಿಯಾ(Pan india) ಭಾಷೆಯಲ್ಲಿ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ದೊಡ್ಡ ಬಜೆಟ್‌, ದೊಡ್ಡ ಸ್ಟಾರ್‌ ಕಾಸ್ಟ್‌ನಲ್ಲಿ ಬರುವ ಸಿನಿಮಾಗಳು ಖರ್ಚಿಗೆ ತಕ್ಕಂತೆ ಗಳಿಕೆಯೂ ತರುವ ಪ್ರಚಾರವನ್ನು ರಿಲೀಸ್‌ಗೂ ಮೊದಲೇ ಚಿತ್ರೀಕರಣದ ಹಂತದಲ್ಲೇ ಮಾಡುತ್ತವೆ.

Advertisement

ಕೆಲ ವರ್ಷಗಳ ಹಿಂದೆ ಸಿನಿಮಾವೊಂದು 100ಕೋಟಿ ಗಳಿಸಿದರೆ ಅದು ಆ ಸಿನಿಮಾದ ದೊಡ್ಡ ಗೆಲುವೆಂದೇ ಪರಿಗಣಿಸಲಾಗುತ್ತಿತ್ತು. ಇತ್ತೀಚೆಗಿನ ವರ್ಷದಲ್ಲಿ ಪ್ಯಾನ್‌ ಇಂಡಿಯಾ ಭಾಷೆಗಳಲ್ಲಿ ಸಿನಿಮಾಗಳ ತೆರೆಕಂಡ ಬಳಿಕ 100 ಕೋಟಿ ಗಳಿಕೆ 1000 ಕೋಟಿಯತ್ತ ಸಾಗುತ್ತದೆ.

ಮೊದಲು ಒಂದು ಸಿನಿಮಾ ತೆರೆಕಂಡರೆ ಅದು ಥಿಯೇಟರ್‌ನಲ್ಲಿ 25 -50 ದಿನಗಳವರೆಗೆ ರನ್‌ ಆಗಿ 50-100 ಕೋಟಿ ಗಳಿಕೆ ಕಾಣುತ್ತಿತ್ತು. ಈಗ ಒಂದು ವಾರ ಚೆನ್ನಾಗಿ ಓಡಿದರೆ ಸಾಕು 100 ಕೋಟಿ ಆರಾಮವಾಗಿ ಕಲೆಕ್ಷನ್‌ ಮಾಡುತ್ತದೆ.

ರಿಲೀಸ್‌ ಆದ ಒಂದೇ ವಾರದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿಯಿದು..

‘ಪಠಾಣ್‌ʼ:  ಬಾಲಿವುಡ್‌ ಸ್ಟಾರ್‌ ಶಾರುಖ್‌ ಖಾನ್‌ (Shah Rukh Khan) ಸತತ ಸೋಲು ಕಾಣುತ್ತಿದ್ದ ಸಮಯದಲ್ಲಿ ಅವರಿಗೆ ಒಂದು ದೊಡ್ಡ ಬ್ರೇಕ್‌ ಕೊಟ್ಟ ಸಿನಿಮಾ ʼಪಠಾಣ್‌ʼ(Pathaan).  ಸಿದ್ದಾರ್ಥ್‌ ಆನಂದ್‌ (Siddharth Anand) ನಿರ್ದೇಶನ ಮಾಡಿದ ʼಪಠಾಣ್‌ʼ ಸಿನಿಮಂದಿಗೆ ಇಷ್ಟವಾಗಿತ್ತು. ಶಾರುಖ್‌ ಖಾನ್‌ ಬಹುಸಮಯದ ಬಳಿಕ ಬಿಗ್‌ ಸ್ಕ್ರೀನ್‌ ನಲ್ಲಿ ಎಲ್ಲರೂ ಮೆಚ್ಚುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Advertisement

ಅಂದಾಜು 240 ಕೋಟಿ ರೂ. ಬಜೆಟ್‌ ನಲ್ಲಿ ತಯಾರಾದ ʼಪಠಾಣ್;ʼ ನಲ್ಲಿ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ(Deepika Padukone), ಜಾನ್ ಅಬ್ರಹಾಂ‌ (John Abraham) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೊದಲ ವಾರದಲ್ಲೇ ಸಿನಿಮಾ 351 ಕೋಟಿ ರೂ. ಗಳಿಕೆ ಕಾಣುವ ಮೂಲಕ ಬಾಕ್ಸ್‌ ಆಫೀಸ್‌ ನಲ್ಲಿ ಹೊಸ ದಾಖಲೆ ಬರೆದಿತ್ತು.

ಸಿನಿಮಾ ಒಟ್ಟು ವರ್ಲ್ಡ್‌ ವೈಡ್‌ 1,050.30 ಕೋಟಿ ರೂ. ಗಳಿಕೆ ಕಂಡಿತ್ತು.

ʼಜವಾನ್‌ʼ: ʼಪಠಾಣ್‌ʼ ಹಿಟ್‌ ಬಳಿಕ ಬಂದ ಸೌತ್‌ ನಿರ್ದೇಶಕ ಅಟ್ಲಿ ಕುಮಾರ್‌ (Atlee Kumar) ಜತೆ ಶಾರುಖ್‌ ಮಾಡಿದ ಸಿನಿಮಾ ʼಜವಾನ್‌ʼ(Jawan). ಆದಾಗಲೇ ಕಿಂಗ್‌ ಖಾನ್‌ ಕಂಬ್ಯಾಕ್‌ ಮಾಡಿರುವ ಜೋಶ್‌ನಲ್ಲಿದ್ದ ಫ್ಯಾನ್ಸ್‌ ಗಳಿಗೆ ʼಜವಾನ್‌ʼ ಕೂಡ ಸಖತ್‌ ಕಿಕ್‌ ನೀಡಿತ್ತು.

ಸ್ಟ್ರಾಂಗ್‌ ಕಥೆ ಹಾಗೂ ಅಭಿನಯದಿಂದ ʼಜವಾನ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿತ್ತು. 370 ಕೋಟಿ ರೂ.ನಲ್ಲಿ ತಯಾರಾದ ಸಿನಿಮಾ  1,148.32 ಕೋಟಿ ರೂ. ಗಳಿಕೆ ಕಂಡಿತ್ತು. ರಿಲೀಸ್‌ ಆದ ಒಂದೇ ವಾರದಲ್ಲಿ 347.98 ಕೋಟಿ ರೂ. ಗಳಿಕೆ ಕಂಡಿತ್ತು.

ಸಿನಿಮಾದಲ್ಲಿ ಶಾರುಖ್‌ ಜತೆ ನಯನತಾರ(Nayanthara),  ವಿಜಯ್ ಸೇತುಪತಿ (Vijay Sethupathi) ಮೊದಲಾದವರು ನಟಿಸಿದ್ದರು.

ʼಅನಿಮಲ್‌ʼ:  ಬಿಟೌನ್‌ನಲ್ಲಿ ಚಾಕ್ಲೇಟ್‌ ಹೀರೋ ಹಾಗೂ ಲವರ್‌ ಬಾಯ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ʼರಾಕ್‌ ಸ್ಟಾರ್‌ʼ ರಣ್ಬೀರ್‌ ಕಪೂರ್‌ (Ranbir Kapoor) ವೃತ್ತಿ ಬದುಕಿನಲ್ಲೇ ಬಹುದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ಸಂದೀಪ್‌ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ(Animal).

ಸಿನಿಮಾ ರಿಲೀಸ್‌ ವೇಳೆ ಸಿನಿಮಾದ ಕಥೆ ಹಾಗೂ ಹಸಿಬಿಸಿ, ರಕ್ತ ಸಿಕ್ತ ದೃಶ್ಯಗಳ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ಇದೆಲ್ಲರ ನಡುವೆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಕಂಡಿತ್ತು. ಅಂದಾಜು 100 ಕೋಟಿ ಬಜೆಟ್‌ ನಲ್ಲಿ ತಯಾರಾದ ʼಅನಿಮಲ್‌ʼ 900 ಕೋಟಿಗೂ ಅಧಿಕ ಗಳಿಕೆ ಕಂಡಿತು. ಸಿನಿಮಾದ ಬಗ್ಗೆ  ಕೇಳಿ ಬರುತ್ತಿದ್ದ ಪಾಸಿಟಿವ್‌ ರೆಸ್ಪಾನ್ಸ್‌ ನಿಂದಾಗಿ ಮೊದಲ ವಾರದಲ್ಲೇ 300.81 ಕೋಟಿ ರೂ.ಗಳಿಸಿತು.

ರಣ್ಬೀರ್‌ ಕಪೂರ್‌(, ರಶ್ಮಿಕಾ ಮಂದಣ್ಣ(Rashmika Mandanna), ತೃಪ್ತಿ ದಿಮ್ರಿ(Tripti Dimri), ಬಾಬಿ ಡಿಯೋಲ್‌(Bobby Deol), ಅನಿಲ್‌ ಕಪೂರ್‌ (Anil Kapoor) ಮುಂತಾದವರು ಸಿನಿಮಾದಲ್ಲಿ ನಟಿಸಿದ್ದರು.

ಸ್ತ್ರೀ-2:  2018ರಲ್ಲಿ ಬಂದ ಹಾರಾರ್‌ ಕಾಮಿಡಿ ʼಸ್ತ್ರೀʼ(Stree 2) ಸಿನಿಮಾದ ಸೀಕ್ವೆಲ್‌ ಸದ್ಯ ಥಿಯೇಟರ್‌ ನಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.

ಶ್ರದ್ದಾ ಕಪೂರ್‌(Shraddha Kapoor), ರಾಜ್‌ ಕುಮಾರ್‌ ರಾವ್‌(Rajkummar Rao) ಅಭಿನಯದ ʼಸ್ತ್ರೀ-2ʼ ಅಂದಾಜು 50 ಕೋಟಿ ಬಜೆಟ್‌ ನಲ್ಲಿ ತಯಾರಾದ ಸಿನಿಮಾವೆಂದು ಹೇಳಲಾಗುತ್ತಿದೆ. ಇದೇ ಆಗಸ್ಟ್‌ 15ರಂದು ತೆರೆಕಂಡ ಸಿನಿಮಾ ಈಗಾಗಲೇ 450 ಕೋಟಿಗೂ ಅಧಿಕ ಕೆಲಕ್ಷನ್‌ ಮಾಡಿ ಮುನ್ನುಗ್ಗುತ್ತಿದೆ.

ತೆರೆಕಂಡ ಮೊದಲ ವಾರದಲ್ಲೇ ಅಮರ್‌ ಕೌಶಿಕ್‌ ನಿರ್ದೇಶನದ ʼಸ್ತ್ರೀ-2ʼ  291.65 ಕೋಟಿ ರೂ. ಗಳಿಕೆ ಕಂಡಿದೆ.

ಗದರ್‌ -2 (Gadar 2): ಒಂದು ಕಾಲದಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡುತ್ತಿದ್ದ ಸನ್ನಿ ಡಿಯೋಲ್‌ (Sunny Deol) ಅವರಿಗೆ ಬಾಲಿವುಡ್‌ನಲ್ಲಿ ಮತ್ತೆ ಕಂಬ್ಯಾಕ್‌ ಮಾಡಿಕೊಟ್ಟ ಸಿನಿಮಾ ʼಗದರ್-2‌ʼ. 2001ರಲ್ಲಿ ʼಗದರ್‌ʼ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಸೀಕ್ವೆಲ್‌ ನೋಡಿ ಫಿದಾ ಆಗಿದ್ದರು. ಸನ್ನಿ ಡಿಯೋಲ್‌ ʼತಾರಾ ಸಿಂಗ್‌ʼ ಆಗಿ ಪಾಕ್‌ ನೆಲದಲ್ಲಿ ಹೋರಾಡಿದ ರೀತಿಗೆ ಬಾಕ್ಸ್‌ ಆಫೀಸ್‌ ಶೇಕ್‌ ಆಗಿತ್ತು. 60 ಕೋಟಿ ರೂ. ಬಜೆಟ್‌ ನಲ್ಲಿ ಬಂದ ʼಗದರ್‌ -2ʼ 600 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿತ್ತು.

ರಿಲೀಸ್‌ ಆದ ಮೊದಲ ವಾರದಲ್ಲೇ 284.63 ಕೋಟಿ ಗಳಿಸಿತು. ಸಿನಿಮಾದಲ್ಲಿ ಸನ್ನಿ ಡಿಯೋಲ್‌, ಅಮೀಶಾ ಪಟೇಲ್(Ameesha Patel), ಉತ್ಕರ್ಷ್ ಶರ್ಮಾ(Utkarsh Sharma), ಸಿಮ್ರತ್ ಕೌರ್ (Simrat Kaur) ಮುಂತಾದವರು ನಟಿಸಿದ್ದರು.

ʼಕೆಜಿಎಫ್‌ ಚಾಪ್ಟರ್‌ -2ʼ: ರಾಕಿಂಗ್‌ ಸ್ಟಾರ್‌ ಯಶ್‌(Actor Yash) ಅವರ ಬಿಗೆಸ್ಟ್‌ ಹಿಟ್‌ ʼಕೆಜಿಎಫ್‌ -2ʼ(KGF -2) ಬಾಕ್ಸ್‌ ಆಫೀಸ್‌ನಲ್ಲಿ ಹತ್ತಾರು ದಾಖಲೆಗಳನ್ನು ಬ್ರೇಕ್‌ ಮಾಡಿದೆ. ಹಿಂದಿಯ ವರ್ಷನ್‌ ನಲ್ಲಿನ ಗಳಿಕೆಯಲ್ಲೂ ಸಿನಿಮಾ ಹಿಂದೆ ಬಿದ್ದಿಲ್ಲ. 100 ಕೋಟಿ ಬಜೆಟ್‌ನಲ್ಲಿ ತಯಾರಾದ  ಸಿನಿಮಾ ವರ್ಲ್ಡ್‌ ವೈಡ್‌ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ. ರಿಲೀಸ್‌ ಆದ ಒಂದೇ ವಾರದಲ್ಲೇ ಹಿಂದಿ ವರ್ಷನ್‌ ಒಂದರಲ್ಲೇ 268.63 ಕೋಟಿ ರೂ. ಗಳಿಕೆ ಕಾಣುವ ಮೂಲಕ ಅಂದು ದಾಖಲೆ ಬರೆದಿತ್ತು.

ಬಾಹುಬಲಿ-2:  ದಿಗ್ಗಜ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ (S. S. Rajamouli) ಅವರ ʼಬಾಹುಬಲಿ-2ʼ(Baahubali 2: The Conclusion) ಭಾರತೀಯ ಸಿನಿಮಾರಂಗದಲ್ಲಿ ಮಾಡಿದ ದಾಖಲೆಗಳು ಒಂದೆರೆಡಲ್ಲ. ಪ್ರಭಾಸ್‌ (Prabhas) ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿ ಒಂದಾಗಿರುವ  ʼಬಾಹುಬಲಿ-2ʼ ರಿಲೀಸ್‌ ಆದ ಒಂದೇ ವಾರದಲ್ಲಿ 247 ಕೋಟಿ ಗಳಿಕೆ ಕಾಣುವ ಮೂಲಕ ಅಂದು ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದಿತ್ತು.

ಸುಲ್ತಾನ್:‌  ಸಲ್ಮಾನ್‌ ಖಾನ್‌(Salman Khan) ಅವರ ಸ್ಪೋರ್ಟ್ಸ್‌ ಡ್ರಾಮಾ ʼಸುಲ್ತಾನ್‌ʼ(Sultan) ಬಿಟೌನ್‌ನಲ್ಲಿ ದೊಡ್ಡ ಹಿಟ್‌ ಆಗಿತ್ತು. ಸ್ಪೋರ್ಟ್ಸ್‌ ಡ್ರಾಮಾದೊಂದಿಗೆ ಲವ್‌ ಸ್ಟೋರಿಯನ್ನೂ ಹೇಳುವ ʼಸುಲ್ತಾನ್‌ʼ ನಲ್ಲಿ ಸಲ್ಮಾನ್‌ ಖಾನ್‌ ಮಿಂಚಿದ್ದರು. ರಿಲೀಸ್‌ ಆದ ಒಂದೇ ವಾರದಲ್ಲಿ 229.16 ಕೋಟಿ ರೂ.ಗಳಿಸಿತು. ಆ ಮೂಲಕ ಸಲ್ಮಾನ್‌ ಖಾನ್‌ ಅವರಿಗೆ ದೊಡ್ಡ ಬ್ರೇಕ್‌ ನೀಡಿತ್ತು.

ವಾರ್‌:  ಹೃತಿಕ್‌ ರೋಷನ್‌(Hrithik Roshan) – ಟೈಗರ್ ಶ್ರಾಫ್‌ (Tiger Shroff) ಅವರ ʼವಾರ್‌ʼ(War) ನಲ್ಲಿನ ಸಾಹಸ ದೃಶ್ಯಗಳು ಸಿನಿಮಂದಿಗೆ ರೋಮಂಚನದ ಸವಾರಿಯನ್ನು ನೀಡತ್ತು. ಸ್ಟೋರಿ ಹಾಗೂ ಥ್ರಿಲ್ಲಿಂಗ್‌ ಸೀನ್‌ ಗಳನ್ನೊಳಗೊಂಡು ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಸಿದ್ದಾರ್ಥ್‌ ಆನಂದ್‌ ಅವರ ʼವಾರ್ʼ  ರಿಲೀಸ್‌ ಆಗಿ ಒಂದು ವಾರದಲ್ಲೇ 228.5 ಕೋಟಿ ರೂ. ಗಳಿಸಿತು.

ಟೈಗರ್ ಜಿಂದಾ ಹೈ:  ಸಲ್ಮಾನ್‌ ಖಾನ್‌ ಅಭಿನಯದ ಮತ್ತೊಂದು ಬ್ಲಾಕ್‌ ಬಸ್ಟರ್‌ ‘ಟೈಗರ್ ಜಿಂದಾ ಹೈ’(Tiger Zinda Hai) 565 ಕೋಟಿ ಗಳಿಕೆ ಕಂಡಿತು. ಆ ಮೂಲಕ ಸಲ್ಮಾನ್‌ ಖಾನ್‌ ಅವರಿಗೆ ʼಸುಲ್ತಾನ್‌ʼ ಬಳಿಕ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ತಂದುಕೊಟ್ಟಿತು. ರಿಲೀಸ್‌ ಆದ ಒಂದೇ ವಾರದಲ್ಲಿ 206.04 ಕೋಟಿ ಗಳಿಕೆ ಕಂಡು ಪಾಸಿಟಿವ್‌ ಓಪನಿಂಗ್‌ ಪಡೆದುಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.