Advertisement

Movies: ಗಣೇಶ ಹಬ್ಬಕ್ಕೆ ಥಿಯೇಟರ್‌ಗಳು ಭರ್ತಿ.. ಯಾವೆಲ್ಲ ಸಿನಿಮಾಗಳು ರಿಲೀಸ್‌ ಆಗಲಿವೆ

11:53 AM Sep 03, 2024 | Team Udayavani |

ಬೆಂಗಳೂರು/ ಹೈದರಾಬಾದ್:‌ ಗಣೇಶ ಹಬ್ಬ(Ganesh Chaturthi) ಸಮೀಪಿಸುತ್ತಿದೆ. ಮನೆ -ಮಂದಿರಗಳಲ್ಲಿ ವಿನಾಯಕನನ್ನು ಕೂರಿಸಿ ಪೂಜಿಸುವ ಸಂಭ್ರಮದ ದಿನಗಳಲ್ಲಿ ಮನರಂಜನೆ ಕ್ಷೇತ್ರವೂ ಬ್ಯುಸಿಯಾಗಿರಲಿದೆ.

Advertisement

ಸ್ಯಾಂಡಲ್‌ವುಡ್‌ (Sandalwood) ಕಳೆದ ತಿಂಗಳಿನಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಂಡಿದೆ. ಇತ್ತ ಟಾಲಿವುಡ್‌, ಕಾಲಿವುಡ್‌ ಹಾಗೂ ಬಾಲಿವುಡ್‌ನಲ್ಲಿ ಗಮನ ಸೆಳೆದ ಸಿನಿಮಾಗಳು ರಿಲೀಸ್‌ ಆಗಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಹಬ್ಬದಂದು ಸಿನಿಮಾರಂಗ ಬ್ಯುಸಿಯಾಗಲಿದೆ ವಿವಿಧ ಸಿನಿರಂಗದಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಲಿವೆ.

ಯಾವೆಲ್ಲ ಸಿನಿಮಾಗಳು ಗಣೇಶ ಹಬ್ಬಕ್ಕೆ ತೆರೆಗೆ ಬರಲಿವೆ ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ..

ಸ್ಯಾಂಡಲ್‌ ವುಡ್:‌ ʼಭೀಮʼ, ʼಕೃಷ್ಣಂ ಪ್ರಣಯ ಸಖಿʼ ಸಿನಿಮಾಗಳಿಂದ ಸ್ಯಾಂಡಲ್‌ ವುಡ್‌ನಲ್ಲಿ ಮತ್ತೆ ಪ್ರೇಕ್ಷಕರ ಚಪ್ಪಾಳೆ, ಪ್ರೋತ್ಸಾಹ ಕೇಳಿಬಂದಿದೆ. ಈ ತಿಂಗಳ ಆರಂಭದಲ್ಲಿ ರೊಮ್ಯಾಂಟಿಕ್‌ ಕಥಾವುಳ್ಳ ಸಿನಿಮಾ ರಿಲೀಸ್‌ ಆಗಲಿದೆ.

ಇಬ್ಬನಿ ತಬ್ಬಿದ ಇಳೆಯಲಿ: ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾವೆಂದೇ ಸೆಟ್ಟೇರಿದ ದಿನದಿಂದ ಸದ್ದು ಮಾಡುತ್ತಿರುವ ರಕ್ಷಿತ್‌ ಶೆಟ್ಟಿ ನಿರ್ಮಾಣದ ʼಇಬ್ಬನಿ ತಬ್ಬಿದ ಇಳೆಯಲಿʼ (Ibbani Tabbida lleyali ) ಈಗಾಗಲೇ ಟ್ರೇಲರ್‌ ಹಾಗೂ ಮಧುರವಾದ ಹಾಡುಗಳಿಂದ ಪ್ರೇಕ್ಷಕರ ಗಮನ ಸೆಳೆದಿದೆ.

Advertisement

ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಈ ಸಿನಿಮಾದಲ್ಲಿ ವಿಹಾನ್(Vihan), ಅಂಕಿತಾ ಅಮರ್ (Ankita Amar) ಹಾಗೂ ಮಯೂರಿ ನಟರಾಜನ್ (Mayuri) ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸೆ.5ರಂದು ಸಿನಿಮಾ ತೆರೆಗೆ ಬರಲಿದೆ.

ಕಾಲಿವುಡ್:‌ ಚಿಯಾನ್‌ ವಿಕ್ರಮ್‌ ಅಭಿನಯದ ʼ ತಂಗಲಾನ್ʼ ಕಾಲಿವುಡ್‌ಗೆ ಹಿಟ್‌ ತಂದುಕೊಟ್ಟಿದೆ. ಸೆಪ್ಟೆಂಬರ್‌ ತಿಂಗಳಿನ ಆರಂಭದಲ್ಲಿ ದಳಪತಿ ವಿಜಯ್‌ ʼಗೋಟ್‌ʼ ಸಿನಿಮಾ ರಿಲೀಸ್‌ ಆಗಲಿದೆ.

ಗೋಟ್:‌ ದಳಪತಿ ವಿಜಯ್‌ (Thalapathy Vijay) ಅಧಿಕೃತವಾಗಿ ತನ್ನ ರಾಜಕೀಯ ಅಖಾಡಕ್ಕೆ ಪ್ರವೇಶ ಮಾಡಿದ್ದಾರೆ. ಅವರು ಮುಂದೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ಆ ಬಳಿಕ ರಾಜಕೀಯದಲ್ಲೇ ಮುಂದುವರೆಯಲಿದ್ದಾರೆ ಎನ್ನುವ ಮಾತಿನ ನಡುವೆಯೇ ಅವರ ಮುಂದಿನ ಸಿನಿಮಾ ʼಗೋಟ್‌ʼ (The Greatest Of All Time) ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಿಜಯ್‌ ದ್ವಿಪಾತ್ರದಲ್ಲಿ ಮಿಂಚಿರುವ ಸೈನ್ಸ್‌ ಫೀಕ್ಷನ್‌ ʼಗೋಟ್‌ʼ ತನ್ನ ಟ್ರೇಲರ್‌ ನಿಂದ ಗಮನ ಸೆಳೆದಿದೆ. ಇದೇ ಸೆ.5 ರಂದು ಸಿನಿಮಾ ರಿಲೀಸ್‌ ಆಗಲಿದೆ.  ಸಿನಿಮಾದಲ್ಲಿ ವಿಜಯ್ ಜೊತೆ ಪ್ರಶಾಂತ್, ಪ್ರಭುದೇವ ಸೇರಿದಂತೆ ಸ್ನೇಹಾ, ಮೀನಾಕ್ಷಿ ಚೌಧರಿ ಮುಂತಾದವರು ನಟಿಸಿದ್ದಾರೆ.

ಟಾಲಿವುಡ್: ಟಾಲಿವುಡ್‌ನಲ್ಲಿ(Tollywood) ಕಳೆದ ತಿಂಗಳು ದೊಡ್ಡ ಕಮಾಲ್‌ ಮಾಡಿದ ಸಿನಿಮಾಗಳು ರಿಲೀಸ್‌ ಆಗಿಲ್ಲ. ಈ ಬಾರಿ ಗಣೇಶ ಹಬ್ಬದಂದು ಹೊಸಬರ 2-3 ಸಿನಿಮಾಗಳು ಟಾಲಿವುಡ್‌ ಪ್ರೇಕ್ಷಕರ ಮುಂದೆ ಬರಲಿವೆ.

35 ಚಿನ್ನ ಕಥಾ ಕಾದು: ಫ್ಯಾಮಿಲಿ ಡ್ರಾಮಾ ಹಾಗೂ ಗಣಿತ ಪಠ್ಯ ವಿಚಾರದ ಸುತ್ತ ಸಾಗುವ 35 ʼಚಿನ್ನ ಕಥಾ ಕಾದುʼ(35 Chinna Katha Kaadu) ಸಿನಿಮಾಕ್ಕೆ ಯುವ ನಿರ್ದೇಶಕ ನಂದ ಕಿಶೋರ್ ಇಮಾನಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿವೇತಾ ಥಾಮಸ್ (Nivetha Thomas), ವಿಶ್ವದೇವ್ ಆರ್, ಪ್ರಿಯದರ್ಶಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಸೆ.6 ರಂದು ಸಿನಿಮಾ ತೆರೆಗೆ ಬರಲಿದೆ.

ಉರುಕು ಪಟೇಲ: 

ರೊಮ್ಯಾಂಟಿಕ್‌ ಥ್ರಿಲ್ಲರ್‌ ಜಾನರ್‌ನ ʼಉರುಕು ಪಟೇಲʼ (Uruku Patela) ಕೂಡ ಗಣೇಶ ಹಬ್ಬಕ್ಕೆ ಥಿಯೇಟರ್‌ಗೆ ಲಗ್ಗೆ ಇಡಲಿದೆ. ವಿವೇಕ್ ರೆಡ್ಡಿ ನಿರ್ದೇಶನದ ಈ ಸಿನಿಮಾದಲ್ಲಿ ತೇಜಸ್ ಕಂಚೇರ್ಲಾ ಹಾಗೂ ಖುಷ್ಬೂ ಚೌಧರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೆ.7 ರಂದು ಸಿನಿಮಾ ತೆರೆಗೆ ಬರಲಿದೆ.

ಜನಕ ಆಯಿತೆ ಗನಕ: ‘ಕಲರ್‌ ಫೋಟೋʼ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟು ಮಿಂಚಿದ ಸುಹಾಸ್‌(Suhas) ಅಭಿನಯದ ʼಜನಕ ಆಯಿತೆ ಗನʼ (Janaka Aithe Ganaka) ಎನ್ನುವ ಫ್ಯಾಮಿಲಿ ಡ್ರಾಮಾ ಕಥೆಯನ್ನೊಳಗೊಂಡಿರುವ ಸಿನಿಮಾ ಇದೇ ಸೆ.7ರಂದು ರಿಲೀಸ್‌ ಆಗಲಿದೆ.

ಮಧ್ಯಮ ವರ್ಗದ ಯುವಕನೊಬ್ಬನ ಮದುವೆ ಬಳಿಕದ ಕಥೆಯನ್ನು ಚಿತ್ರ ಒಳಗೊಂಡಿದೆ. ಸಿನಿಮಾದಲ್ಲಿ ಸುಹಾಸ್‌ ಜೊತೆಗೆ  ಸಂಗೀರ್ತನಾ, ವೆನ್ನೆಲಾ ಕಿಶೋರ್, ರಾಜೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.