Advertisement

ಇಂದಿನಿಂದ ನಗರದಲ್ಲಿ ಮಾವು -ಹಲಸು ಮೇಳ

12:07 PM Apr 28, 2017 | |

ಬೆಂಗಳೂರು: ಹಾಪ್‌ಕಾಮ್ಸ್‌ ವತಿಯಿಂದ ಶುಕ್ರವಾರದಿಂದ ಆಗಸ್ಟ್‌ ಅಂತ್ಯದವರೆಗೆ ನಗರದ ಎಲ್ಲಾ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ “ಮಾವು ಹಾಗೂ ಹಲಸು ಮಾರಾಟ ಮೇಳ’ ನಡೆಯಲಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಪ್‌ಕಾಮ್ಸ್‌ ಅಧ್ಯಕ್ಷ ಜಿ.ಆರ್‌.ಶ್ರೀನಿವಾಸ್‌, “ಈ ಬಾರಿಯ ಮೇಳವು “ಫ್ಲಿಪ್‌ ಕ್ಲಾರ್ಟ್‌’ನ ಅಂಗ ಸಂಸ್ಥೆ “ಫೋನ್‌ ಪೇ’ ಸಹಯೋಗದಲ್ಲಿ ನಡೆಯಲಿದೆ. ಸುಮಾರು 300 ಕ್ಕೂ ಹೆಚ್ಚು ಮಳಿಗೆಗಳಲ್ಲಿ  1000 ಮೆ.ಟನ್‌ ಮಾವು ಮತ್ತು 200 ಮೆಟ್ರಿಕ್‌ ಟನ್‌ಗಳಷ್ಟು ಹಲಸಿನ ಹಣ್ಣುಗಳ ಮಾರಾಟ ಮಾಡುವ ಉದ್ದೇಶವಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಮೇಳ ನಡೆಯ­ಲಿದೆ,’ ಎಂದು ತಿಳಿಸಿದರು. 

“ಫೋನ್‌ ಪೇ ಆ್ಯಪ್‌ ಬಳಸಿ ಶೇ.10 ರಷ್ಟು ರಿಯಾಯತಿ ದರದಲ್ಲಿ ಹಣ್ಣು­ಗಳನ್ನು ಖರೀದಿಸಬಹುದು. ಹಾಗೆಯೇ ಯಾವುದೇ ರಾಸಾಯನಿಕ ಬಣ್ಣಗಳಿಲ್ಲದ ಕಾರ್ಬೈಡ್‌ ಮುಕ್ತ ಮತ್ತು ರೈತರಿಂದ ನೇರವಾಗಿ ಖರೀದಿ ಮಾಡಿದಂತಹ ಸಾವಯವ ಹಣ್ಣು­ಗಳು ಮೇಳದಲ್ಲಿ ದೊರೆಯ­ಲಿವೆ. ಜೊತೆಗೆ ಹಾಪ್‌ಕಾಮ್ಸ್‌ ಆನ್‌ಲೈನ್‌ನಲ್ಲಿ ಕೂಡ ನಿಗದಿತ ದರದಲ್ಲಿ ಖರೀದಿ ಮಾಡಬಹುದು,’ ಎಂದು ಹೇಳಿದರು. 

ಹಾಪ್‌ಕಾಮ್ಸ್‌  ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ , “ಮೇಳದಲ್ಲಿ ಬಾದಾಮಿ, ಆಲೊ#àನ್ಸೋ ಮಲಗೋವ, ಕಾಲಪಾಡ್‌, ರಸಪುರಿ, ಮಲ್ಲಿಕಾ, ಸಕ್ಕರೆ ಗುತ್ತಿ ಮುಂತಾದ ಮಾವಿನ ತಳಿಗಳು ಹಾಗೂ ಸಕ್ಕರಾ­ಯ­ಪಟ್ಟಣ ಹಲಸು, ತೂಬಿಗೆರೆ ಹಲಸು, ಚಂದ್ರ, ಜಾನಗೆರೆ, ಮುಂತಾದ ಹಲಸಿನ ತಳಿಗಳು ಸಿಗ­ಲಿದೆ. ಮಾವಿನ ದರದಲ್ಲಿ ರೂ.30 ರಿಂದ 80 ರವರೆಗೂ ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 3 ಮತ್ತು 5 ಕೆಜಿ ಗಳ ಬಾಕ್ಸ್‌ನಲ್ಲಿ ಮಾರಾಟ ವ್ಯವಸ್ಥೆ ಇರಲಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next