Advertisement

ಇಂದಿನಿಂದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ ಯುಗದತ್ತ ಜಗತ್ತು

01:00 AM Feb 25, 2019 | Harsha Rao |

ಮಣಿಪಾಲ: ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ಪ್ರಸ್ತುತ ಕಾಲದಲ್ಲಿ ಭವಿಷ್ಯದ ಮೊಬೈಲ್‌ಗ‌ಳು ಏನೆಲ್ಲ ಹೊಂದಿರುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಇಂತಹ ಸಂದರ್ಭ ಅವುಗಳ ರೂಪು ರೇಷೆಗಳು, ಸೇವಾ ವಿಧಾನದ ಪ್ರದರ್ಶನಕ್ಕೆ ಸ್ಪೇಯ್ನನ ಬಾರ್ಸಿಲೋನಾದಲ್ಲಿ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ (Mಗಇ19) ವೇದಿಕೆ ಸಿದ್ಧವಾಗಿದೆ. 5ಜಿ ಸೇವೆಗೆ ತೆರೆದುಕೊಳ್ಳಲು ಜಗತ್ತು ಸಿದ್ಧವಾಗಿದೆ. 5ಜಿ ತಂತ್ರಜ್ಞಾನದ ಪರಿಚಯಿಸಲು ಈಗಾಗಲೇ ಜಗತ್ತಿನ ವಿವಿಧ ಮೊಬೈಲ್‌ ತಯಾರಕ ಸಂಸ್ಥೆಗಳು ಸನ್ನದ್ಧವಾಗಿವೆ.

Advertisement

5ಜಿ ಎಂದರೇನು?
5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್‌ ತಂತ್ರಜ್ಞಾನ. 5ಜಿ ಯುಗದಲ್ಲಿ ಸ್ಮಾರ್ಟ್‌ ಫೋನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆಯಾಗಲಿವೆ. ಪ್ರಮುಖ ಮೊಬೈಲ್‌ ಕಂಪೆನಿಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಏರ್ಪಡಲಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಇದೆ.

ವೇಗ ಹೇಗಿರುತ್ತದೆ ?
5ಜಿ ನೆಟ್‌ವರ್ಕ್‌ ಸಂಪೂರ್ಣ  ಅಳವಡಿಕೆ ಯಾದಾಗ ಸೆಕೆಂಡಿಗೆ 1 ಜಿಬಿ ಡೌನ್‌ಲೋಡ್‌ ವೇಗವನ್ನು ಒದಗಿಸಲಿದೆ. ಇದು ಪ್ರಸ್ತುತ ಇರುವ ಡೇಟಾ ವೇಗದ 100 ಪಟ್ಟು ಹೆಚ್ಚು. 

5ಜಿ ಸಿದ್ಧತೆ ಹೇಗಿದೆ?
ಅಮೆರಿಕ ಹೊರತುಪಡಿಸಿ ದಕ್ಷಿಣ ಕೊರಿಯಾ, ಜಪಾನ್‌ಗಳಲ್ಲಿ 5ಜಿ ನೆಟ್‌ವರ್ಕ್‌ ಅನ್ನು ಪರೀಕ್ಷಾರ್ಥ ಪರಿಚಯಿಸಲಾಗಿದೆ. 4ಜಿಯಿಂದ 5ಜಿಗೆ ಬದಲಾಗಬೇಕಿದ್ದರೆ ಕೆಲವು ಮೂಲಸೌಕರ್ಯಗಳು ಅಗತ್ಯ. ಭಾರತದಲ್ಲಿ ಪ್ರಸ್ತಾವಿತ 5ಜಿ ಮುಂದಿನ ವರ್ಷ ಆರಂಭವಾಗಲಿದೆ. ಆದರೆ ಪೂರ್ಣಪ್ರಮಾಣದಲ್ಲಿ ಕಾಣಲು 2022ರ ವರೆಗೆ ಕಾಯಬೇಕಾಗಬಹುದು.

ಏನಿದು ಎಂಡಬ್ಲ್ಯುಸಿ?
ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ ಜಗತ್ತಿನ ಅತ್ಯಾಧುನಿಕ ಮೊಬೈಲ್‌ ತಯಾರಕರನ್ನು ಒಂದೇ ಸೂರಿನಡಿ ಒಂದುಗೂಡಿಸುವ ಸಮಾವೇಶ. ಮೊಬೈಲ್‌ ವಲ್ಡ್‌ ಕಾಂಗ್ರೆಸ್‌ ಜಿಎಸ್‌ಎಂಎ ಸೆಮಿನಾರ್‌ಗಳು ಹಾಗೂ ಉಪಯುಕ್ತ ಮಾಹಿತಿಗಳ ಆಗರವಾಗಿರುತ್ತದೆ.  ಈ ವರ್ಷ 5ಜಿ ಮೊಬೈಲ್‌ಗ‌ಳು ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನ ಆಕರ್ಷಣೆ. ಇದರಲ್ಲಿ “ಗ್ಲೋಬಲ್‌ ಮೊಬೈಲ್‌ ಅವಾರ್ಡ್‌’, “ಬೆಸ್ಟ್‌ ನೆಟ್‌ವರ್ಕ್‌ ಅವಾರ್ಡ್‌’ ಸೇರಿದಂತೆ ಮೊಬೈಲ್‌ ತಯಾರಕ ಕಂಪೆನಿಗಳು ಹಾಗೂ ರಿಟೇಲರ್‌ಗಳಿಗೆ ವಿವಿಧ ಪುರಸ್ಕಾರಗಳನ್ನು ನೀಡಲಾಗುತ್ತದೆ.

Advertisement

ಫೋಲೆxಬಲ್‌ ಮೊಬೈಲ್‌!
ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ 5ಜಿ ಫೋನ್‌ಗಳ ಜತೆಗೆ “ಫೋಲೆxಬಲ್‌ ಫೋನ್‌’ಗಳೂ ಭಾರೀ ಸದ್ದು ಮಾಡಲಿವೆ. ಕಳೆದ ವಾರ ಸ್ಯಾಮ್‌ಸಂಗ್‌ “ಫೋಲೆxಬಲ್‌ ಫೋನ್‌’ 5ಜಿ ಫೋನ್‌ ಬಿಡುಗಡೆ ಮಾಡಿದ್ದು, ಫೆ. 24ರಂದು ಹುಮಾಯಿ ಸಂಸ್ಥೆ “ಹುವಾಯಿ ಮ್ಯಾಟ್‌ ಎಕ್ಸ್‌ 5ಜಿ’ ಮೊಬೈಲ್‌ ಫೋನ್‌ ಬಿಡುಗಡೆಗೊಳಿಸಿದೆ.

ಬಳಕೆ ಹೇಗೆ?
5ಜಿ ಬಂದ ಬಳಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿಯಲಿದೆ. ಜಗತ್ತಿನ ಅಗ್ರ ಮೊಬೈಲ್‌ ತಯಾರಕ ಸಂಸ್ಥೆಗಳಾದ ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಕ್ಸಿಯೋಮಿ, ಒಪ್ಪೋ, ಸೋನಿ, ಹುವಾಯಿ ಮತ್ತು ಮೋಟರೋಲಾ ಈ ವರ್ಷವೇ ಇಂಥ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಉತ್ಸುಕವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next